ಧಾರವಾಡ

ಇಂದು ವಿಜಯಾ ಬ್ಯಾಂಕ್ ಸಂಸ್ಥಾಪನೆ ದಿನಾಚರಣೆ

Published On :

ಹುಬ್ಬಳ್ಳಿ: ವಿಜಯಾ ಬ್ಯಾಂಕ್‌ನ 93ನೇ ಸಂಸ್ಥಾಪನೆ ದಿನಾಚರಣೆಯನ್ನು ಇಲ್ಲಿನ ಪ್ರಾದೇಶಿಕ ಕಚೇರಿಯಲ್ಲಿ ಅ. 23ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆಗೈದ ಪ್ರೊ. ಯು.ಆರ್. ರಾವ್, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಿರ್ಮಲಾನಂದ ಸ್ವಾಮೀಜಿ, ಚಲನನಚಿತ್ರ ನಟ ಅನಂತನಾಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಡಾ. ವಿವೇಕ ಜವಳಿ ಅವರನ್ನು ಬ್ಯಾಂಕಿನಿಂದ ಸನ್ಮಾನಿಸಲಾಗುವುದು. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಅಂಗವಾಗಿ ವಿಜಯಾ ಬ್ಯಾಂಕ್ ಇಲ್ಲಿಯವರೆಗೆ ಹುಬ್ಬಳ್ಳಿ ನಗರದ 10 ಸರ್ಕಾರಿ ಶಾಲೆಗಳು ಸೇರಿ 183 ಸರ್ಕಾರಿ ಶಾಲೆಗಳಿಗೆ ನೀರು ಶುದ್ಧೀಕರಿಸುವ ಯಂತ್ರ ನೀಡಿದೆ. ಕಿಮ್ಸ್‌ಗೆ ಆ್ಯಂಬುಲೆನ್ಸ್ ದೇಣಿಗೆ ನೀಡಿದೆ. ಪತ್ರಕರ್ತ ನಗರದ ಮಹಿಳೆಯರ ಹಾಸ್ಟೆಲ್‌ಗೆ ರು. 84 ಸಾವಿರದಲ್ಲಿ ವಿವಿಧ ಮೂಲಸೌಲಭ್ಯ ಕಲ್ಪಿಸಿದೆ.
ಹುಬ್ಬಳ್ಳಿ: ಜನಜಾಗೃತಿ ಅಭಿಯಾನ ಇಂದು
ಹುಬ್ಬಳ್ಳಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಅ. 23ರಿಂದ 15 ದಿನಗಳ ವರೆಗೆ ದೇಶಾದ್ಯಂತ ಮಹಿಳಾ ಸುರಕ್ಷಾ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಂದು ರಾಜ್ಯಾದ್ಯಂತ ವಿದ್ಯಾರ್ಥಿನಿಯರ ಜಾಗೃತಿ ನಡಿಗೆ ಹಮ್ಮಿಕೊಂಡಿದ್ದು, ನಗರದ ಎಲ್ಲ ಮಹಾವಿದ್ಯಾಲಯಗಳ ವಿದ್ಯಾರ್ಥಿನಿಯರು ಜಾಗೃತಿ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಹಿ ಸಂಗ್ರಹ, ಕರಪತ್ರ ವಿತರಣೆ, ಬೀದಿ ನಾಟಕ, ವಿಚಾರ ಸಂಕಿರಣವನ್ನೂ ಹಮ್ಮಿಕೊಳ್ಳಲಾಗಿದೆ.
ಇಂದು ನಮೋ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ
ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಅ. 23ರ ಸಂಜೆ 6ಕ್ಕೆ ನಮೋ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೂ ಮುನ್ನ ಸಂಜೆ 4ಕ್ಕೆ ಮೂರುಸಾವಿರ ಮಠದ ಮೈದಾನದಿಂದ ಬೈಕ್ ರ್ಯಾಲಿ ನಡೆಯಲಿದೆ. ಸೂಲಿಬೆಲೆ ಚಕ್ರವರ್ತಿ ಮುಖ್ಯಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಧಾರವಾಡ: ಇಲ್ಲಿನ ಕಲಘಟಗಿ ರಸ್ತೆಯಲ್ಲಿನ ಟೋಲನಾಕಾ ಬಳಿ ಮಂಗಳವಾರ ಬೆಳಗ್ಗೆ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ, ಕಪ್ಪು ಖಾಕಿ ಬಟ್ಟೆ ತೊಟ್ಟಿದ್ದು, ಈತನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಜೂಜಾಟ: ಮೂವರ ಸೆರೆ
ಧಾರವಾಡ: ತಾಲೂಕಿನ ಕೋಟೂರು ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಸೋಮವಾರ ರಾತ್ರಿ ಗರಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಅಂಗಡಿಯೊಂದರಲ್ಲಿ ಮಟ್ಕಾ ವ್ಯವಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಯಲ್ಲಪ್ಪ ವನಕ್ಕಿ, ಅಶೋಕ ಶೆರೇವಾಡ ಮತ್ತು ಬಾಷಾ ನಾಯಕ ಎಂಬುವರನ್ನು ಬಂಧಿಸಿ ಅವರಿಂದ ರು. 2435 ನಗದು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಟಿ. ವೆಂಕಟಸ್ವಾಮಿ, ಸಿಬ್ಬಂದಿ ದಾಳಿ ನಡೆಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.