ಧಾರವಾಡ

ಹುಬ್ಬಳ್ಳಿ: 30ರಂದು ಕ್ಯಾಂಪಸ್ ಸಂದರ್ಶನ

Published On :

ಹುಬ್ಬಳ್ಳಿ: ಪುಣೆ ಮೂಲದ ಎಸ್‌ಕೆಎಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಕೆಎಲ್‌ಇ ಸಂಸ್ಥೆಯ ಸಿ.ಐ.ಎಂ. ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಅ. 30ರಂದು ಬೆಳಗ್ಗೆ 9ಕ್ಕೆ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ. ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸರಾಸರಿ ಶೇ. 50ರಷ್ಟು ಅಂಕಗಳಿಸಿರುವ ಅಭ್ಯರ್ಥಿಗಳು ಮತ್ತು ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ಪ್ರೊ. ವಿನಾಯಕಸಿಂಗ್ ರಜಪೂತ 9880271208ನ್ನು ಸಂಪರ್ಕಿಸಿ.
ನಾಳೆ  ಸಾರ್ವಜನಿಕ ಸಭೆ
ಧಾರವಾಡ: ಪ್ಲಾಸ್ಟಿಕ್ ಕಸದ ಸಮಸ್ಯೆ ಪರಿಹಾರಕ್ಕಾಗಿ ಅ. 29ಕ್ಕೆ ಸಂಜೆ 5.30ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಂಡಿದೆ. ಧಾರವಾಡ ಇತ್ತೀಚಿನ ದಿನಗಳಲ್ಲಿ ಕಸದ ರಾಜಧಾನಿ ಎಂಬ ಬಿರುದು ಗಳಿಸುವತ್ತ ದಾಪುಗಾಲಿಡುತ್ತಿದೆ. ಅಲ್ಲಲ್ಲಿ ಕಸದ ಪರ್ವತಗಳೇ ಎದ್ದರೂ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಸುಮ್ಮನೆ ಕೂರುವಂತಾಗಿದೆ. ಕೆಲ ವರ್ಷಗಳ ಹಿಂದೆ ಸೂರತ್ ನಗರದಲ್ಲಿ ಕಸದ ಮಗನಾಗಿ ಪ್ಲೇಗ್ ಹುಟ್ಟಿ ಊರ ತುಂಬೆಲ್ಲ ಹಾರಾಡಿದ್ದು ನೆನಪಿರಬಹುದು. ಈ ಹಿನ್ನೆಲೆಯಲ್ಲಿ ಧಾರವಾಡ ಸ್ವಚ್ಛವಾಗಿರಬೇಕು ಎಂದು ಎನಿಸಿದರೆ ನಮ್ಮ ಜೊತೆಗೆ ನಿಮ್ಮ ಪ್ರಜ್ಞಾವಂತ ಸ್ನೇಹಿತರನ್ನು ಕರೆತರಬೇಕೆಂದು ಶಿಕ್ಷಣ ಮಂಟಪದ ಡಾ. ಸಂಜೀವ ಕುಲಕರ್ಣಿ ಮನವಿಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಪಿ.ಎನ್. ಬಿರಾದಾರ, ಪರಿಸರ ಅಧಿಕಾರಿ ನಯನಾ, ಶಂಕರ ಕುಂಬಿ, ಸ್ಕೋಪ್ ಸಂಸ್ಥೆಯ ಡಾ. ಪ್ರಕಾಶ ಭಟ್, ಗ್ರೀನ್ ಆರ್ಮಿಯ ಪ್ರಕಾಶ ಗೌಡರ, ಪರಿಸರವಾದಿ ಶಾರದಾ ಗೋಪಾಲ, ವರ್ತಕರ ಸಂಘದ ರವಿ ಆಕಳವಾಡಿ, ನಿರತ ಸೇವಾ ಸಂಘದ ಅಸ್ಲಮ್ ಖಾನ್, ಬಸವಪ್ರಭು ಹೊಸಕೇರಿ ಹಾಗೂ ಶಾಸಕ ಅರವಿಂದ ಬೆಲ್ಲದ ಭಾಗವಹಿಸುತ್ತಾರೆ.
ಪುಟ್ಟರಾಜು ಭೇಟಿ
ಧಾರವಾಡ: ಜಿಲ್ಲಾ ಸಹಕಾರ ಯೂನಿಯನ್‌ಗೆ ಸಹಕಾರ ಸಂಘಗಳ ಅಪರ ನಿಬಂಧಕ ಸಿ.ಎಸ್. ಪುಟ್ಟರಾಜು ಭೇಟಿ ನೀಡಿ ಯೂನಿಯನ್ ಕಾರ್ಯ ಚಟುವಟಿಕೆ ವೀಕ್ಷಿಸಿದರು. ಯೂನಿಯನ್ ಅಧ್ಯಕ್ಷ ಬಾಪುಗೌಡ ಪಾಟೀಲ, ಉಪಾಧ್ಯಕ್ಷ ಪ್ರತಾಪ ಚೌಹಾಣ್, ನಿರ್ದೇಶಕ ಡಿ.ಎಸ್. ಪಾಟೀಲ, ವಿಜಯಲಕ್ಷ್ಮಿ ಲೂತಿಮಠ, ಟಿ.ಎಸ್. ಗೌಡಪ್ಪನವರ, ಪಿ.ಪಿ. ಗಾಯಕವಾಡ, ಎಸ್.ಎನ್. ರಾಯನಾಳ ಮತ್ತು ಶಂಕರಪ್ಪ ಮುಗದ ಇದ್ದರು.
ಐಶ್ವರ್ಯಾ, ಪ್ರಿಯಾಂಕಾಗೆ ಕರ್ನಾಟಕ ಚೇತನ
ಧಾರವಾಡ: ಬೆಂಗಳೂರಿನ ಜ್ಞಾನಮಂದಿರ ಅಕಾಡೆಮಿಯು ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡುಮಾಡುವ ಕರ್ನಾಟಕ ಚೇತನ ಪ್ರಶಸ್ತಿಯು ಇಲ್ಲಿನ ಪ್ರಜೆಂಟೇಶನ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯಾ ರಾವಳ, ಪ್ರಿಯಾಂಕಾ ಕುರಡಿಕೇರಿಗೆ ನೀಡಲಾಯಿತು. ಶಾಸಕ ಬಿ.ಎನ್. ವಿಜಯಕುಮಾರ, ವಿದುಷಿ ನಾಗರತ್ನಾ ಹಡಗಲಿ, ಪ್ರೊ. ಪಿ. ಸದಾಶಿವ, ಡಾ. ಆರ್. ಗುರುಪ್ರಸಾದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.