ಮೂತ್ರಪಿಂಡ ವೈಫಲ್ಯ: ನೆರವಿಗೆ ಕೋರಿಕೆ
ನವಲಗುಂದ: ದುಡಿದು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದ 33 ವರ್ಷದ ಯುವಕನ ಎರಡು ಮೂತ್ರಪಿಂಡಗಳ ವೈಫಲ್ಯದಿಂದಾಗಿ ಸಾವು ಬದುಕಿನೊಡನೆ ಹೋರಾಟ ಮಾಡುತ್ತಿದ್ದು, ಮಗನ ಚಿಕಿತ್ಸೆಗಾಗಿ ಹಣವಿಲ್ಲದೇ ತಂದೆ ತಾಯಿ ಗೋಳಾಡುತ್ತಿದ್ದಾರೆ.
ಇದು ಧಾರವಾಡ ಜಿಲ್ಲೆಯ ನವಲಗುಂದ ನಗರದ ಬಸ್ತಿ ಓಣಿಯಲ್ಲಿರುವ ಧರ್ಮಪ್ಪ ಗುರಲಿಂಗಪ್ಪ ವೆರ್ಣೆಕರನ ಕಥೆ. ಧರ್ಮಪ್ಪ ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 2011ರಲ್ಲಿ ಮದುವೆಯಾದ ಒಂದೇ ವಾರದಲ್ಲಿ ಮೂತ್ರಪಿಂಡದ ತೊಂದರೆಗೆ ಒಳಗಾಗಿದ್ದಾನೆ. ಮಣಿಪಾಲ, ಹುಬ್ಬಳ್ಳಿ, ಬೆಂಗಳೂರು, ದಾವಣಗೇರಿ ಮೊದಲಾದ ನಗರಗಳಲ್ಲಿನ ತಜ್ಞ ವೈಜ್ಞರ ಬಳಿ ರು. ಲಕ್ಷಾಂತರ ಖರ್ಚು ಮಾಡಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಈಗ ಎರಡು ಮೂತ್ರಪಿಂಡಗಳ ವೈಫಲ್ಯದಿಂದಾಗಿ ಸಾವು ಬದುಕಿನೊಡನೆ ಹೋರಾಡುತ್ತಿದ್ದಾನೆ. ವೈದ್ಯರು 15 ದಿನದಲ್ಲಿ ಮೂತ್ರಪಿಂಡ ಬದಲಾಯಿಸಬೇಕು. ಅದಕ್ಕೆ ರು. 10ರಿಂದ ರು. 15 ಲಕ್ಷ ವೆಚ್ಚ ಬರುತ್ತದೆ ಎಂದು ಪಾಲಕರಿಗೆ ತಿಳಿಸಿದ್ದು, ದಿಕ್ಕು ತೋಚದೆ ಪಾಲಕರು ಗೋಳಾಡುತ್ತಿದ್ದಾರೆ. ಧರ್ಮಪ್ಪನ ಪತ್ನಿ, ಸಹೋದರ, ತಂದೆ ತಾಯಿ ಮೂತ್ರಪಿಂಡ ಕೊಡಲು ಸಿದ್ಧರಿದ್ದಾರೆ. ಆದರೆ ಹಣವಿಲ್ಲದೆ ಕಾರಣ ಕಂಡ ಕಂಡವರ ಬಳಿ ದುಡ್ಡಿಗಾಗಿ ಅಂಗಲಾಚುತ್ತಿದ್ದಾರೆ. ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಸ್ನೇಹಿತರು ಕೈಲಾದಷ್ಟು ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ. ಮಗನ ಪ್ರಾಣ ರಕ್ಷಣೆಗೆ ಉಳ್ಳವರು ಕೈಲಾದಷ್ಟು ಸಹಾಯ ಮಾಡಬೇಕೆಂದು ಪಾಲಕರು ಕೋರಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅ.ನಂ. 30526399559 ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅ.ನಂ.17058144011 ಖಾತೆ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಜು ಜಾಧವ ಮೊ. 9880050005 ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

