ಧಾರವಾಡ

ಶಹರದ ಸಂಕೀರ್ಣತೆ, ವೈರುಧ್ಯತೆರೆದಿಟ್ಟ ಉಣೆ ಪುರೆ ಶಹರ ಏಕ್

Published On :

ಧಾರವಾಡ: 'ಬೆಂದಕಾಳು ಆನ್ ಟೋಸ್ಟ್‌' ಕನ್ನಡದ ನಾಟಕದಲ್ಲಿ ಬೆಂಗಳೂರೇ ನಾಯಕ ಆದರೆ, ಇದೇ ನಾಟಕದ ಮರಾಠಿ ಅನುವಾದದ 'ಉಣೆ ಪುರೆ ಶಹರ ಏಕ್‌' ದಲ್ಲಿ ಬೆಂಗಳೂರಿನ ಸ್ಥಾನವನ್ನು ಪುಣೆ ಹೊತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕರ್ನಾಡ್ ಅವರ ಬೆಂದಕಾಳು ಆನ್ ಟೋಸ್ಟ್ ಮರಾಠಿ ಅನುವಾದ ನಾಟಕ ಭಾನುವಾರ ಇಲ್ಲಿನ ಸೃಜನಾ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಕಲಾಮಂಡಳದ ವತಿಯಿಂದ ಏರ್ಪಾಟಾಗಿದ್ದ ಈ ನಾಟಕವು ಪುಣೆ ಶಹರ ಪ್ರದೇಶದ ಸಂಕೀರ್ಣತೆ ಹಾಗೂ ವೈರುಧ್ಯಗಳನ್ನು ಕಟ್ಟಿಕೊಟ್ಟಿತು. ನಗರ ಪ್ರದೇಶದ ಅಸ್ತಿತ್ವ ಹುಡುಕುವುದೇ ಈ ನಾಟಕ. ಬದಲಾಗುತ್ತಿರುವ ಸಂದರ್ಭದಲ್ಲಿ ಬೇರೆ ಬೇರೆ ಕುಟುಂಬಗಳ ಮೇಲೆ ಆಗುತ್ತಿರುವ ನಗರಿಕರಣದ ಪರಿಣಾಮವನ್ನು ಅತ್ಯಂತ ಪ್ರಭಾವಶಾಲಿಯಲ್ಲಿ ನಾಟಕ ತೆರೆದಿಡುತ್ತದೆ. ಒಂದೇ ಎಳೆಯ ಕಥಾ ಹಂದರವಿರುವ ಸರಳ ನೇರ ನಡೆಯ ನಾಯಕ ಇದಲ್ಲ. ಪ್ರತಿ ಪಾತ್ರಕ್ಕೂ ಪ್ರತ್ಯೇಕ ಕಥೆಗಳಿವೆ. ಬಿಡಿ ಬಿಡಿ ಕಥೆಗಳು ಒಂದು ಹಂತದಲ್ಲಿ ಒಟ್ಟಾಗಿ ಪರಸ್ಪರ ಸ್ಪಂದಿಸುತ್ತವೆ.
ಪುಣೆಯ ವೃತ್ತಿಪರ ತಂಡ ಕಲಾಮಂಚ್ ಎಲ್ಲ ಕಲಾವಿದರು ಅದ್ಭುತವಾಗಿ ನಟಿಸಿದರು. ಸರಳವಾದ ರಂಗಸಜ್ಜಿಕೆ ಇದ್ದರೂ ನಾಟಕದ ಪರಿಣಾಮಕ್ಕೆ ಪೂರಕವಾಗಿ ವಿನ್ಯಾಸ ಗಮನ ಸೆಳೆಯಿತು. ಈಗಾಗಲೇ ಬೆಂಗಳೂರಿನಲ್ಲಿ ಪ್ರದರ್ಶನ ಕಂಡಿರುವ ಈ ನಾಟಕ, ಧಾರವಾಡದ ಪ್ರದರ್ಶನ ಎರಡನೆಯದ್ದು. ಪ್ರದೀಪ್ ವೈದ್ಯ ಅವರು ಮರಾಠಿಯಲ್ಲಿ ಅನುವಾದಿಸಿದ್ದಾರೆ. ಮೋಹಿತ್ ಟಕ್ಕಳಕರ ಅವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.