ಇಂದು ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ
ಹುಬ್ಬಳ್ಳಿ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕಲಘಟಗಿ ತಾಲೂಕಿಗೆ ಮಂಜೂರಾಗಿರುವ ದಾಸ್ತಿಕೊಪ್ಪದಲ್ಲಿನ ಆದರ್ಶ ವಿದ್ಯಾಲಯ ಕಟ್ಟಡ, ನಾಲ್ಕು ಹೊಸ ಪ್ರೌಢಶಾಲೆಗಳ ಹಾಗೂ ಹೆಣ್ಣು ಮಕ್ಕಳ ವಸತಿ ನಿಲಯದ ನೂತನ ಕಟ್ಟಡಗಳ ಹಾಗೂ ಪ್ರೌಢಶಾಲೆಗಳ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸೆ. 3ರಂದು ಚಾಲನೆ ದೊರೆಯಲಿದೆ.
ಮೂಲ ಸೌಕರ್ಯ, ವಾರ್ತಾ ಇಲಾಖೆಗಳ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ತಾಲೂಕಿನ ದಾಸ್ತಿಕೊಪ್ಪದ ಆದರ್ಶ ವಿದ್ಯಾಲಯದ ಆವರಣದಲ್ಲಿ ಅಂದು ಬೆಳಗ್ಗೆ 10ಕ್ಕೆ ನೂತನ ಕಟ್ಟಡಗಳ ಹಾಗೂ ಕೊಠಡಿ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸುವರು. ಕಲಘಟಗಿ ತಾಪಂ ಉಪಾಧ್ಯಕ್ಷೆ ಕಾಶವ್ವ ಮುಂದಿನಮನಿ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು ಭಾಗವಹಿಸುವರು. ದಾಸ್ತಿಕೊಪ್ಪದ ಆದರ್ಶ ವಿದ್ಯಾಲಯ, ಕೆಜಿಬಿವಿ ಹೆಣ್ಣುಮಕ್ಕಳ ವಸತಿ ನಿಲಯ, ಬೆಲವಂತರ, ಕುರುವಿನಕೊಪ್ಪ, ಜಿನ್ನ್ನೂರ ಹಾಗೂ ಬೀರವಳ್ಳಿ ಗ್ರಾಮಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳ ನೂತನ ಕಟ್ಟಡಗಳು, ಹಿರೇಹೊನ್ನಳ್ಳಿ, ಮುತ್ತಗಿ, ಸಂಗಮೇಶ್ವರ, ದೇವಿಕೊಪ್ಪ, ಸೂರಶೆಟ್ಟಿಕೊಪ್ಪ, ಉಗ್ನಿಕೇರಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ ಹಾಗೂ ಕಲಘಟಗಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ತಲಾ 5 ಹೆಚ್ಚುವರಿ ಶಾಲಾ ಕೊಠಡಿಗಳ, ಬಮ್ಮಿಗಟ್ಟಿ, ಗಳಗಿ-ಹುಲಕೊಪ್ಪಗಳಲ್ಲಿನ ಪ್ರೌಢಶಾಲೆಗಳ ತಲಾ 4 ಹೆಚ್ಚುವರಿ ಶಾಲಾ ಕೊಠಡಿ ಮತ್ತು ಚಳಮಟ್ಟಿ ಪ್ರೌಢಶಾಲೆಯ ಮೂರು ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಏಕಕಾಲದಲ್ಲಿ ಸಚಿವರು ಶಂಕುಸ್ಥಾಪನೆ ಕಾರ್ಯ ನೆರವೇರಿಸುವರು. ಕಲಘಟಗಿ ತಾಪಂ ಸದಸ್ಯರು ಹಾಗೂ ಸಂಬಂಧಿತ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿರುತ್ತಾರೆ ಎಂದು ಕಲಘಟಗಿ ಕ್ಷೇತ್ರಶಿಕ್ಷಣಾಧಿಕಾರಿ ಮಳಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

