ಸಿವಿಎಸ್ಕೆ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ
ಕುಮಟಾ: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲೆಗಳ ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿವಿಎಸ್ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಜಯಂತ್ ಭಟ್ಟ ಹಾಗೂ ಬಿ.ಜಿ. ಕಾರ್ತಿಕ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಧಾನ ಪಡೆದು ಉತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಇವರ ಸಾಧನಗೆ ಶಾಲಾ ಮುಖ್ಯೋಪಾಧ್ಯಾಪಕಿ ಸುಮಾ ಪ್ರಭು ಹಾಗೂ ಶಿಕ್ಷಕ ವೃಂದ ಶುಭ ಕೋರಿದ್ದಾರೆ.
ಲಾಕ್ ಮುರಿದು ಕಳ್ಳತನ
ಬಳ್ಳಾರಿ: ಮನೆಯ ಇನ್ನರ್ ಲಾಕ್ ಮುರಿದು ಕಳ್ಳರು ಮನೆಗೆ ನುಗ್ಗಿ ರು. 4.55 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ನಗದನ್ನು ಕಳುವು ಮಾಡಿರುವ ಘಟನೆ ಶನಿವಾರ ಇಲ್ಲಿನ ಜಯನಗರದಲ್ಲಿ ನಡೆದಿದೆ. ಬಂಗಾರ ಮತ್ತು ಬೆಳ್ಳಿ ವಡವೆಗಳು, ರು. 10 ಸಾವಿರ ನಗದು ಸೇರಿದಂತೆ ರು. 4.55 ಲಕ್ಷ ಮೌಲ್ಯದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಮನೆಯ ಮಾಲೀಕ ಲಿಂಗಯ್ಯ ಕೌಲ್ಬಜಾರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲಾರಿ ಡಿಕ್ಕಿ: ಓರ್ವ ಸಾವು
ಬಳ್ಳಾರಿ: ಲಾರಿಯೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಕ್ಲೀನರ್ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ನಗರದ ಅನಂತಪುರ ಬೆಂಗಳೂರು ಬೈಪಾಸ್ ರಸ್ತೆಯ ಟೋಲ್ಗೇಟ್ನಲ್ಲಿ ನಡೆದಿದೆ. ಮೃತನು ಆಂಧ್ರಪ್ರದೇಶದ ನಂದ್ಯಾಲ ಸಮೀಪದ ಕಡಿವೆಮಲ ನಿವಾಸಿ (20) ವಿಕ್ಕಿ. ಶನಿವಾರ ಅನಂತಪುರ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಟೋಲ್ಗೇಟ್ ಹತ್ತಿರ ಲಾರಿ ಸಂಚರಿಸುತ್ತಿದ್ದಾಗ ಹಿಂದಿನಿಂದಿ ಬಂದ ಲಾರಿ ಎಡಗಡೆ ಡೋರ್ಗೆ ಡಿಕ್ಕಿ ಹೊಡೆದ ಪರಿಣಾಮ ಮುಂದಿನ ಲಾರಿಯ ಕ್ಯಾಬಿನ್ನಲ್ಲಿ ಕುಳಿತ್ತಿದ್ದ ಕ್ಲೀನರ್ ವಿಕ್ಕಿ ಸಾವನ್ನಪ್ಪಿದ್ದಾನೆ. ಕ್ಯಾಬಿನಲ್ಲಿದ್ದ ಚಂದ್ರಹಾಸ ರೆಡ್ಡಿ, ಮದ್ದಯ್ಯ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈಕಾ, ದಸರಾ ಕ್ರೀಡಾಕೂಟ
ಧಾರವಾಡ: ಮಹಿಳಾ, ಪೈಕಾ ಕ್ರೀಡಾಕೂಟವನ್ನು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ. ಪೈಕಾ ಕ್ರೀಡಾಕೂಟ ಸೆ. 16ರಂದು, ಮಹಿಳೆಯರಿಗಾಗಿ 17ರಂದು, ದಸರಾ ಕ್ರೀಡಾಕೂಟವನ್ನು 18ರಂದು ನಡೆಸಲಾಗುವುದು. ಈಗಾಗಲೇ ತಾಲೂಕು ಸ್ಪರ್ಧೆಗಳಲ್ಲಿ ವೈಯಕ್ತಿಕ ಆಟಗಳಲ್ಲಿ ಪ್ರಥಮ, ದ್ವಿತೀಯ, ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಆಯಾ ದಿನಗಳಂದು ಬೆಳಗ್ಗೆ 9ಕ್ಕೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧಾಳುಗಳಿಗೆ ಪ್ರಯಾಣ, ದಿನ ಭತ್ಯೆ ನೀಡಲಾಗುವುದು ಎಂದು ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ತಿಳಿಸಿದ್ದಾರೆ.
ಯುವಜನೋತ್ಸವ
ಧಾರವಾಡ: ಕವಿವಿ ಅಂತರ ಕಾಲೇಜುಗಳ ಯುವಜನೋತ್ಸವ ಕರ್ನಾಟಕ ಕಲಾ ಕಾಲೇಜಿನಲ್ಲಿ ಸೆ. 30, ಅಕ್ಟೋಬರ್ 1ರಂದು ಆಯೋಜಿಸಿದೆ.ಸೆ. 22ರೊಳಗಾಗಿ ಪ್ರವೇಶ ಶುಲ್ಕದೊಂದಿಗೆ ತಂಡಗಳನ್ನು ನೋಂದಾಯಿಸಲು ಸಂಘಟಕರು -94489 23151 ಈ ಮೂಲಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

