ಪಾಪು ಹೇಳಿಕೆಗೆ ಬಿಜೆಪಿಗರ ಖಂಡನೆ
ಹುಬ್ಬಳ್ಳಿ: ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿಯವರ ಕುರಿತಾಗಿ ನೀಡುತ್ತಿರುವ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶೆಟ್ಟರ್ ಹಾಗೂ ಜೋಶಿ ನಗರಕ್ಕೆ ನೀಡಿರುವ ಕೊಡುಗೆ ಏನು ಎಂದು ಪಾಟೀಲ ಪುಟ್ಟಪ್ಪನವರು ಪ್ರಶ್ನಿಸಿರುವುದು ಸರಿಯಲ್ಲ. ಪುಟ್ಟಪ್ಪನವರು ವಾಸವಾಗಿರುವ ವಾರ್ಡ್ ನಂ. 28ಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಇದಕ್ಕೆ ಕಾರಣರ್ಯಾರು ಎಂಬುದಕ್ಕೆ ಪುಟ್ಟಪ್ಪನವರು ಉತ್ತರಿಸಲಿ. ನಗರದ ಎಲ್ಲ ವಾರ್ಡ್ಗಳ ಒಳ ರಸ್ತೆ ನಿರ್ಮಾಣವಾಗಿದೆ ಜತೆಗೆ ಒಳ ಚರಂಡಿ ವ್ಯವಸ್ಥೆ ಕೂಡ ಆಗಿದೆ.
ವಾರ್ಡ್ ನಂ. 28ರಲ್ಲಿ ರಕ್ಷಣಾ ವ್ಯವಸ್ಥೆಗೆ ಆರಕ್ಷಕ ಠಾಣೆ ಸ್ಥಾಪಿಸಲಾಗಿದೆ ಇದು ಯಾರ ಕಾಲದಲ್ಲಾಗಿದೆ? ಕಲೆ, ಸಂಸ್ಕೃತಿ. ಸಂಗೀತ ಕಾರ್ಯಕ್ರಮಗಳಿಗೆ ಪುಟ್ಟಪ್ಪನವರ ಮನೆಯ ಎದುರಿಗೆ ಕನ್ನಡ ಭವನ ತಲೆ ಎತ್ತಿ ನಿಂತಿದೆ. ಇದು ಪುಟ್ಟಪ್ಪನವರ ಗಮನಕ್ಕೆ ಬಂದಿಲ್ಲವೇ? ನೃಪತುಂಗ ಬೆಟ್ಟ ಅಭಿವೃದ್ಧಿ ಹೊಂದಿಲ್ಲವೇ? ಪುಟ್ಟಪ್ಪನವರ ಉಪಸ್ಥಿತಿಯಲ್ಲಿಯೇ ಜಾನಪದ ಜಗತ್ತು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಇದು ಅವರಿಗೆ ನೆನಪಿಲ್ಲವೇ? ಪಿರಾಮಿಡ್ ಮಾದರಿಯ ಧ್ಯಾನ ಮಂದಿರ ನಿರ್ಮಿಸಲು ಆದ್ಯತೆ ಕೊಟ್ಟು ಕೆಲಸ ಆರಂಭಿಸಲು ಕ್ರಮ ಕೈಗೊಂಡವರ್ಯಾರು? ಡಾ. ಗಂಗಾಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಸ್ಥಾಪನೆಗೆ ಕಾರಣರ್ಯಾರು? ರಾಜ್ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಾಣವಾಗಿರುವುದು ಯಾರ ಅವಧಿಯಲ್ಲಿ? ಎಂಬುದಕ್ಕೆ ಪಾಟೀಲ ಪುಟ್ಟನವರು ಉತ್ತರಿಸಿಲಿ ಎಂದು ಆಗ್ರಹಿಸಿರುವ ಮಲ್ಲಿಕಾರ್ಜುನ ಸಾವಕಾರ, ವಿರೇಶ ಸಂಗಳದ, ವಿಶ್ವನಾಥ ಪಾಟೀಲ, ಮೋಹನ ಬಡಿಗೇರ, ಬಸವರಾಜ ಹೊಸಮನಿ ಮತ್ತಿತರರು, ಅವಳಿ ನಗರದಲ್ಲಿ ಆದ ಅಭಿವೃದ್ಧಿ ಕೆಲಸಗಳಿಗೆ ಜನ ಮನ್ನಣೆ ಕೊಟ್ಟಿದ್ದಾರೆ.
ಜಗದೀಶ ಶೆಟ್ಟರ್ ಹಾಗೂ ಜೋಶಿಯವರ ತೇಜೋವಧೆಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಪುಟ್ಟಪ್ಪನವರು ಕೈ ಜೋಡಿಸಿರುವುದು ದುರ್ದೈವದ ಸಂಗತಿ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

