ಧಾರವಾಡ

ಕ್ಷೀರಭಾಗ್ಯ ಸದ್ಬಳಕೆ ಮಾಡಿಕೊಳ್ಳಿ

Published On :

ನವಲಗುಂದ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕ್ಷೀರಭಾಗ್ಯ ಯೋಜನೆ ಪ್ರಶಂಸಾರ್ಹವಾಗಿದೆ. ತಾಲೂಕಿನಲ್ಲಿ ಒಟ್ಟು 148 ಶಾಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, 23 ಸಾವಿರ ವಿದ್ಯಾರ್ಥಿಗಳು ಫಲಾನುಭವಿಗಳಾಗಲಿದ್ದಾರೆ. ವಿದ್ಯಾರ್ಥಿಗಳು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಅವರು ಸೋಮವಾರ ಮೆಹಬೂಬ ನಗರದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ. 3ರಲ್ಲಿ ನೂತನ ಶಾಲಾ ಕೊಠಡಿ ಉದ್ಘಾಟನೆ, ತಾಲೂಕು ಮಟ್ಟದ ಉರ್ದು ನಲಿ ಕಲಿ ತರಬೇತಿ, ಕ್ಷೀರಭಾಗ್ಯ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಕ್ಕಳಿಗೆ ಹಾಲು ವಿತರಿಸಿ ತಾವು ಹಾಲು ಕುಡಿದು ಕ್ಷೀರ ಭಾಗ್ಯಕ್ಕೆ ಚಾಲನೆ ನೀಡಿದರು. ಬಿಇಒ ಬಿ.ಎಸ್. ಮಾಯಾಚಾರಿ ಮಾತನಾಡಿದರು. ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಸೈಪುದ್ದೀನ್ ಅವರಾದಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಶಾಂತಾ ನಿಡವಣಿ, ಪುರಸಭೆ ಸದಸ್ಯರಾದ ಶಶಿರೇಖಾ ಶಿಡಗಂಟಿ, ಶಾಂತಾ ವಾಲ್ಮೀಕಿ, ಜೀವನ ಪವಾರ, ಪ್ರಕಾಶ ಶಿಗ್ಲಿ, ಕಾಶೀಮಸಾಬ ಅಲ್ಲಿಬಾಯಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಗಪ್ಪ ಬಾರಕೇರ, ಜೆಡಿಎಸ್ ಅಧ್ಯಕ್ಷ ಲೋಕನಾಥ ಹೆಬಸೂರ, ತಹಸೀಲ್ದಾರ್ ನವೀನ ಹುಲ್ಲೂರ, ಪಿಎಸ್‌ಐ ಎನ್.ಸಿ. ಕಾಡದೇವರ, ತಾಪಂ ಇಒ ಎಂ.ಎಂ. ಸವದತ್ತಿ, ಎಸ್.ಎಸ್. ಸೌದಾಗರ, ಅಬ್ಬಾಸ ದೇವರಿಡು, ಎಸ್‌ಡಿಎಂಸಿ ಸದಸ್ಯರು ಇದ್ದರು.
ಮುಖ್ಯಾಧ್ಯಾಪಕಿ ಎ.ಎಂ. ಮುಲ್ಲಾ ಸ್ವಾಗತಿಸಿದರು. ಆರ್.ಡಿ. ಹೊರಕೇರಿ ನಿರೂಪಿಸಿದರು. ಕೆ.ಆರ್. ಮುಲ್ಲಾ ವಂದಿಸಿದರು.

ಕ್ಷೀರಭಾಗ್ಯಕ್ಕೆ ಚಾಲನೆ
ನವಲಗುಂದ: ಇಲ್ಲಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ಷೀರಭಾಗ್ಯ ಯೋಜನೆಯನ್ನು ಮಾಜಿ ಸಚಿವ ಕೆ.ಎನ್. ಗಡ್ಡಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಆರ್.ಡಿ.ಧಾರವಾಡ ಅಧ್ಯಕ್ಷತೆ ವಹಿಸಿದ್ದರು.  ತಾಲೂಕು ಕಾಂಗ್ರೆಸ್ ಅಧ್ಯಕ್ಷ ಆರ್.ಎಚ್. ಕೋನರಡ್ಡಿ, ಪುರಸಭೆ ಸದಸ್ಯ ಮಂಜು ಜಾಧವ, ಮಾಜಿ ಪುರಸಭೆ ಅಧ್ಯಕ್ಷ ಉಸ್ಮಾನ ಬಬರ್ಚಿ, ಈರಣ್ಣ ಶಿಡಗಂಟಿ, ಡಾ.ಶಾದಾಬ ನಿಂಬಾಳಕರ, ಆರ್.ಎಸ್. ಪೀರಜಾದೆ, ಮೆಹಬೂಬ ಕೊಪ್ಪಳ ಇದ್ದರು. ಆರ್.ಎಸ್. ನಾಗನೂರ ಸ್ವಾಗತಿಸಿದರು. ಎ.ಆರ್. ಕುಲಕರ್ಣಿ ನಿರೂಪಿಸಿದರು. ಎಚ್.ಎಚ್. ಇನಾಮದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.