ಎಲೆಕ್ಟ್ರಾನಿಕ್ ಹಳೇ ವಸ್ತು ಸಂಗ್ರಹ
ಕನ್ನಡಪ್ರಭ ವಾರ್ತೆ, ಕುಂದಗೋಳ, ಸೆ. 19
ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಗುರುವಾರ ಜೋಳಿಗೆ ಹಿಡಿದುಕೊಂಡು ಮನೆ-ಮನೆಗೆ ತೆರಳಿ ಬಾರದ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಗ್ರಹಿಸಿದರು.
ಮುಂಜಾನೆ ಜೋಳಿಗೆ ಹಿಡಿದುಕೊಂಡು ಹೊರಟ ವಿದ್ಯಾರ್ಥಿಗಳು, 'ಸರ್ ನಿಮ್ಮನೆಯಲ್ಲಿ ಉಪಯೋಗಕ್ಕೆ ಬಾರದ ಹಳೆಯ ಎಲೆಕ್ಟ್ರಾನಿಕ್ ವಸ್ತುಗಳನ್ನ ನಮಗೆ ನೀಡಿ ನಮ್ಮದು ಸರ್ಕಾರಿ ಶಾಲೆ, ಪ್ರಯೋಗಕ್ಕಾಗಿ ಶಾಲೆಯಲ್ಲಿ ಯಾವುದೇ ವಸ್ತುಗಳಿಲ್ಲ, ನಮಗೆ ಅವುಗಳನ್ನ ನೀಡಿ ಸಹಾಯ ಮಾಡಿ' ಎಂದು ನಗು ಮುಖದಿಂದ ಕೇಳಿದಾಗ ಮನೆಯವರು ವಾಯರ್, ರಿಪೇರಿಯಾಗದ ಗಡಿಯಾರ, ರಿಚಾರ್ಜ್ ಆಗದ ಮೊಬೈಲ್ ಬ್ಯಾಟರಿ, ಕಂಪ್ಯೂಟರ್ ಭಾಗಗಳು ಇತ್ಯಾದಿ ವಸ್ತುಗಳನ್ನ ನೀಡಿದಾಗ ಮುಗ್ಧ ಮುಖದ ವಿದ್ಯಾರ್ಥಿಗಳು ಮನೆಯವರಿಗೆ ಧನ್ಯವಾದ ಹೇಳಿ ಮುಂದಿನ ಮನೆಗೆ ತೆರಳಿದರು.
ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಪ್ರಸ್ತುತಪಡಿಸುವ 'ಜ್ಞಾನ ಜೋಳಿಗೆ ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ಬೇಡಿದರು. ಅಗಸ್ತ್ಯ ಫೌಂಡೇಶನ್ ಸಂಯೋಜಕ ಬೀರಪ್ಪ ಕಂಡೆಕಾರ ಮಾತನಾಡಿ, ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಲ್ಲಿ ಪ್ರಯೋಗಿಕ ಮನೋಭಾವ ಬೆಳೆಸಿ ಹೊಸ ಹೊಸ ಅವಿಷ್ಕಾರಗಳನ್ನು ರೂಪಿಸಿಸುವಂತಹ ಶಿಕ್ಷಣ ನಿಡಲಾಗುತ್ತದೆ ಎಂದು ಹೇಳಿದರು.
ಇದು ಒಟ್ಟು 60 ದೇಶದಲ್ಲಿ ಈ ಕಾರ್ಯಕಮ ನಡೆಯುತ್ತದೆ. ರಾಜ್ಯದಿಂದ 20 ಶಾಲೆ ಆಯ್ಕೆ ಮಾಡಿ ರಾಷ್ಟ್ರದಲ್ಲಿ 2 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅಂತಾರಾಷ್ಟ್ರಿಯ ಮಟ್ಟಕ್ಕೆ ಆಯ್ಕೆ ಮಾಡುತ್ತಾರೆ. ಆದ್ದರಿಂದ ಈ ವಿಜ್ಞಾನ ಜೋಳಿಗೆ ಕಾರ್ಯದಿಂದ ಬಂದ ವಸ್ತುಗಳನ್ನು ಉಪಯೋಗಿಸಿ ವಿದ್ಯಾರ್ಥಿಗಳು ಹೊಸ ಶೋಧನೆ ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಮೇಶ, ಸುರೇಶ ಗುಡದಾರ, ಕೆ.ಎಸ್. ಪಾಟೀಲ, ಶ್ರೀಶೈಲ ಧನವಾಡೆ, ಬಿ.ಎಸ್. ಪಾಟೀಲ, ಪುಷ್ಪಾ ಗಂಗಾಯಿ, ಅಶ್ವಿನಿ ನಾಗಣ್ಣವರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

