ಧಾರವಾಡ

ಸುದ್ದಿ ಸಂಕ್ಷೇಪ

Published On :

ಎಲ್‌ಐಸಿಯಿಂದ ಸಿ. ಸಾಂಬಶಿವರೆಡ್ಡಿಗೆ ಸನ್ಮಾನ
ಧಾರವಾಡ: ಇಲ್ಲಿನ ಎಲ್‌ಐಸಿ ಕಚೇರಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸೇವೆಗೆ ಮರಳಿದ ಕೆವಿಜಿ ಬ್ಯಾಂಕ್ ಅಧ್ಯಕ್ಷ ಸಿ. ಸಾಂಬಶಿವರೆಡ್ಡಿ ಅವರನ್ನು ಎಲ್‌ಐಸಿ ಮಂಡಲಾಧಿಕಾರಿ ಎಂ. ಜಗನ್ನಾಥ ಅವರು ಸನ್ಮಾನಿಸಿದರು. ಬಳಿಕ ಮಾತನಾಡಿದ ಜಗನ್ನಾಥ ಅವರು, ಸಾಂಬಶಿವರೆಡ್ಡಿಯವರು ಅನುಭವಿ ಮತ್ತು ದಕ್ಷ ಆಡಳಿತಗಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಕೆವಿಜಿ ಬ್ಯಾಂಕ್ ಮತ್ತಷ್ಟು ಚೈತನ್ಯ ಪಡೆಯಿತು. ಬ್ಯಾಂಕಿನ ಹಲವಾರು ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಅವರ ಶ್ರಮ ಮತ್ತು ಕಾರ್ಯವೈಖರಿ ಗಣನೀಯ ಎಂದರು. ಸನ್ಮಾನ ಸ್ವೀಕರಿಸಿ ಸಾಂಬಶಿವರೆಡ್ಡಿ ಮಾತನಾಡಿದರು. ಮಾರುಕಟ್ಟೆ ವ್ಯವಸ್ಥಾಪಕ ಜೆ. ಜಗದೀಶ, ವ್ಯವಸ್ಥಾಪಕರಾದ ಅರ್ಜುನನ್, ಶಶಿಧರ, ಆನಂದ ಅಮರಶೆಟ್ಟಿ ಇದ್ದರು.
ನಕಲಿ ವೈರ್ ಮಾರಾಟ: ಇಬ್ಬರ ಬಂಧನ
ಹುಬ್ಬಳ್ಳಿ: ವಿಗಾರ್ಡ್ ಕಂಪನಿಯ ನಕಲಿ ವೈರ್ ಬಂಡಲ್‌ಗಳನ್ನು ಮಾರಾಟ ಮಾಡುತ್ತಿದ್ದ ತೇಜ್ ಎಲೆಕ್ಟ್ರಿಕಲ್ ಅಂಗಡಿ ಮೇಲೆ ದಾಳಿ ಮಾಡಿದ ಶಹರ ಠಾಣೆ ಪೊಲೀಸರು ಅಂಗಡಿ ಮಾಲೀಕರಿಬ್ಬರನ್ನು ಬಂಧಿಸಿದ್ದಾರೆ. ತೇಜ್ ಎಲೆಕ್ಟ್ರಿಕಲ್ ಅಂಗಡಿ ಮಾಲೀಕರಾದ ದಿಲೀಪ್ ದೇವಾಸಿ ಮತ್ತು ಜೀತು ದೇವಾಸಿ ಅವರು ವಿಗಾರ್ಡ್ ಕಂಪನಿಯ ನಕಲಿ ರಟ್ಟಿನ ಬಾಕ್ಸ್‌ಗಳನ್ನು ಮಾಡಿ ಅದರಲ್ಲಿ ನಕಲಿ ವೈರ್ ಬಂಡಲ್ ಹಾಕಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಕಲಿ ವೈರ್ ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಶಕುಂತಲಾ ಯಾವಗಲ್
ಧಾರವಾಡ: ಇಲ್ಲಿನ ರಜತಗಿರಿ ಶಕುಂತಲಾ ನೀಲಕಂಟಪ್ಪ ಯಾವಗಲ್ (72) ಭಾನುವಾರ ನಿಧನ ಹೊಂದಿದರು. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳಿದ್ದಾರೆ. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಬಸವರಾಜ ಮುತ್ತಳ್ಳಿ ಹಾಗೂ ಪ್ರಕಾಶ ಗೋಡಬೋಲೆ, ಶೈಲಾ ಕಾಮರಡ್ಡಿ, ರಘು ಲಕ್ಕಣ್ಣವರ, ಸುರೇಶ ಬೇದರೆ, ಮೋಹನ ರಾಮದುರ್ಗ, ಬಸವರಾಜ ಬೆಣ್ಣಿ, ಪ್ರಮೋದ ಕಾರಕುನ, ನಾಗರಾಜ ಹುಣಶೀಕಟ್ಟಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಜಿ. ಡಿ. ಜಮಾದಾರ
ಹುಬ್ಬಳ್ಳಿ: ಹಾವೇರಿ ಜಿಲ್ಲಾ ಸಾರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹುಬ್ಬಳ್ಳಿ ನಿವಾಸಿ ಜಿ. ಡಿ. ಜಮಾದಾರ್ ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ, ಸಹೋದರ ಇದ್ದಾರೆ. ಜಮಾದಾರ್ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.