ಧಾರವಾಡ

ಲೂಸಿಯಾ ಆನ್‌ಲೈನ್ ಕಲೆಕ್ಷನ್ ರು. 1.75 ಲಕ್ಷ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 29
ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವೀಕ್ಷಕರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿರುವ ಕನ್ನಡ ಚಲನಚಿತ್ರ 'ಲೂಸಿಯಾ' ಆನ್‌ಲೈನ್‌ನಲ್ಲಿ ಕೇವಲ 24 ತಾಸುಗಳಲ್ಲಿ 500ಕ್ಕೂ ಹೆಚ್ಚು ಜನರು ವೀಕ್ಷಿಸುವ ಮೂಲಕ ರು. 1.75 ಲಕ್ಷ ಸಂಗ್ರಹಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಲೂಸಿಯಾ ಚಿತ್ರದ ನಿರ್ದೇಶಕ ಪವನ್‌ಕುಮಾರ, ಆಸ್ಕರ್ ಪ್ರಶಸ್ತಿಗಾಗಿ ಮೊದಲ 20 ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿರುವ ಈ ಚಿತ್ರ ಸಂಪೂರ್ಣ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂದರು.
ಚಿತ್ರ ಬಿಡುಗಡೆ ಹೊಂದಿದ ಮೊದಲ ವಾರದಲ್ಲಿ ರಾಜ್ಯದ 80 ಹಾಗೂ ಹೊರ ರಾಜ್ಯಗಳ 50 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಪೂರ್ಣ ಭಿನ್ನರೀತಿಯ ಕಥೆ ಹಾಗೂ ಉತ್ತಮ ನಿರ್ದೇಶನಕ್ಕೆ ಈಗಲೂ ಬೆಲೆ ಇದೆ ಎಂಬುದು ಈ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಡಾ. ರಾಜಕುಮಾರ ನಟಿಸುತ್ತಿದ್ದ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಿಗೆ ಉತ್ತಮ ಅವಕಾಶಗಳು ಇದ್ದವು. ಆದರೆ, ಮಧ್ಯದಲ್ಲಿ ಈ ಕಲಾವಿದರನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಇದೀಗ ಮತ್ತೊಮ್ಮೆ ರಂಗಭೂಮಿಯಿಂದ ನಟ-ನಟಿಯರು, ನಿರ್ದೇಶಕರು ಸೇರಿದಂತೆ ಇನ್ನಿತರ ಕಲಾವಿದರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇದರಿಂದ ಚಲನಚಿತ್ರಗಳ ಗುಣಮಟ್ಟ ಮತ್ತಷ್ಟು ಹೆಚ್ಚಿದೆ ಎಂದರು.
ನಾಯಕ ನಟ ಸತೀಶ್ ನೀನಾಸಮ್ ಮಾತನಾಡಿ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಧ್ವನಿವರ್ಧಕ ಹಾಗೂ ಮತ್ತಿತರ ಸೌಲಭ್ಯಗಳಿಂದ ಚನಲಚಿತ್ರಗಳ ಗುಣಮಟ್ಟ ಮತ್ತಷ್ಟು ಉತ್ತಮಗೊಂಡಿದೆ. ಸಿನಿಪೊಲಿಸ್ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ತಾವು ಕ್ವಾಟ್ಲಿ ಸತೀಶ ಹಾಗೂ ದ್ಯಾವರೆ ಎಂಬ ಚಿತ್ರಗಳಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ ಸತೀಶ ನೀನಾಸಮ್, ಮಸಾಲಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದರು. ಸಿನಿಪೊಲಿಸ್ 11 ದೇಶಗಳ 3,076ಕ್ಕೂ ಹೆಚ್ಚಿನ ಸ್ಕ್ರೀನ್‌ಗಳೊಂದಿಗೆ ವಾರ್ಷಿಕ 116 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ ಗೋಕುಲ ರಸ್ತೆ ಅರ್ಬನ್ ಓಯಾಸಿಸ್ ಮಾಲ್‌ನಲ್ಲಿರುವ ಸಿನಿಪೊಲಿಸ್‌ನ ಪ್ರಾದೇಶಿಕ ವ್ಯವಸ್ಥಾಪಕ ಡಿ. ಸತೀಶಕುಮಾರ, ಗುಲ್ಬರ್ಗ ಹಾಗೂ ಬೆಳಗಾವಿಯಲ್ಲಿಯೂ ಸಿನಿಪೊಲಿಸ್ ಪ್ರಾರಂಭಿಸುವ ಯೋಜನೆ ಇದೆ ಎಂದು ಹೇಳಿದರು.  ಲೂಸಿಯಾ ಚಿತ್ರದ ನಾಯಕಿ ಶ್ರುತಿ ಹರಿಹರನ್, ಸಿನಿಪೊಲಿಸ್ ಮತ್ತು ಅರ್ಬನ್ ಓಯಸಿಸ್ ಮಾಲ್‌ನ ಸಿ.ಆರ್. ಸಾಹು ಉಪಸ್ಥಿತರಿದ್ದರು.
ಲೂಸಿಯಾ ಚಿತ್ರ ಬಿಡುಗಡೆ ಹೊಂದಿದ ಮೊದಲ ವಾರದಲ್ಲಿ ರಾಜ್ಯದ 80 ಹಾಗೂ ಹೊರ ರಾಜ್ಯಗಳ 50 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಪೂರ್ಣ ಭಿನ್ನರೀತಿಯ ಕಥೆ ಹಾಗೂ ಉತ್ತಮ ನಿರ್ದೇಶನಕ್ಕೆ ಈಗಲೂ ಬೆಲೆ ಇದೆ ಎಂಬುದು ಈ ಚಿತ್ರದಿಂದ ಮತ್ತೊಮ್ಮೆ ಸಾಬೀತಾಗಿದೆ.
ಟ ಪವನ್‌ಕುಮಾರ
ನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.