ಶಿವಲೀಲಾ ಮತ ಯಾಚನೆ
ಕುಂದಗೋಳ: ಧಾರವಾಡ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶಿವಲೀಲಾ ಕುಲಕರ್ಣಿ ಮತ ಯಾಚಿಸಿದರು. ಜೊತೆಗೆ ಬೆಂಬಲಿಗರಾದ ಗೀತಾ ಬಸವರೆಡ್ಡಿ, ಬೇಬಿ ಶಿವಕುಮಾರ ಮಾನ್ವಿ, ಶೋಭಾ ಚ.ಪಾಟೀಲ ಹಾಗೂ ಅನೇಕ ಕಾರ್ಯಕರ್ತರೊಂದಿಗೆ ಪಟ್ಟಣದಲ್ಲಿ ಮನೆಮನೆಗೆ ತೆರಳಿ, ವಿನಯ ಕುಲಕರ್ಣಿ ಅವರು ಈಗಾಗಲೇ ಎರಡು ಬಾರಿ ಶಾಸಕರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಕ್ಷೇತ್ರಾಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದರು.
ಜೋಶಿ ಪರ ಅಮೃತ ಪ್ರಚಾರ
ಧಾರವಾಡ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಶನಿವಾರ ನಗರದ ಮಾಳಾಪುರ ಕಮಲಾಪುರ, ಬೆಟಗೇರಿ ರೋಡ್, ಮರಾಠಾ ಕಾಲನಿ, ಹೊಯ್ಸಳ ಕಾಲನಿ ಮುಂತಾದೆಡೆ ಅಮೃತ ದೇಸಾಯಿ ನೇತೃತ್ವದಲ್ಲಿ ಮತ ಯಾಚಿಸಲಾಯಿತು. ತವನಪ್ಪ ಅಷ್ಟಗಿ, ಈರೇಶ ಅಂಚಟಗೇರಿ, ಪರಮೇಶ್ವರ ದಂಡಿನ, ಸೋಮು ಬೆನಕಟ್ಟಿ, ಪ್ರಹ್ಲಾದ ರಾಯ್ಕರ್, ಸಿದ್ದು ಕಲ್ಯಾಣಶೆಟ್ಟಿ, ಈರಯ್ಯ ರಾಚಯ್ಯನವರ, ಬಸವರಾಜ ಬಾಳಗಿ, ಮಹಾಂತೇಶ ನಲವಡಿ, ಮುರುಗೇಶ ಹೊನ್ನಕೇರಿ, ರಾಕೇಶ ದೊಡಮನಿ, ಮಲ್ಲೇಶಿ ಶಿಂದೆ, ಜಗದೀಶ ಅಕ್ಕಿ, ಸಿದ್ಧು ಬ್ಯಾಹಟ್ಟಿ, ಸೋಮು ಮಟ್ಟಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

