ಮೋದಿ, ರಾಗಾನಾಯಕರಲ್ಲ
ಧಾರವಾಡ: ಎನ್ಡಿಎ ಹಾಗೂ ಯುಪಿಎ ದೇಶವನ್ನು ಲೂಟಿ ಮಾಡಿದ್ದು ಬಿಟ್ಟರೆ ಬೇರಾವ ಸಾಧನೆ ಮಾಡಿಲ್ಲ. ರಾಹುಲ್ ಗಾಂಧಿ ಅಥವಾ ಮೋದಿಯಿಂದ ದೇಶಕ್ಕೆ ಸಮರ್ಥ ನಾಯಕತ್ವ ದೊರಕಲಾರದು ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರೊ. ಯೋಗೀಂದ್ರ ಯಾದವ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ಭ್ರಷ್ಟಾಚಾರ ಸಾಕಷ್ಟಿದೆ. ಇದೇ ಕಾರಣಕ್ಕಾಗಿ ಜನತೆಗೆ ಆಮ್ ಆದ್ಮಿ ಪಕ್ಷ ಆಶಾಕಿರಣವಾಗಿ ಕಾಣುತ್ತಿದೆ ಎಂದರು.
ಕಾಂಗ್ರೆಸ್ ವಂಶಾಡಳಿತ, ವಿಕಾಸದ ಬದಲು ವಿನಾಶ, ಜಾತಿ ಧರ್ಮಗಳನ್ನು ಮತ ಬ್ಯಾಂಕ್ನ್ನಾಗಿಸಿಕೊಂಡು ರಾಜಕಾರಣ ಮಾಡುತ್ತಿವೆ. ಅತ್ತ ಬಿಜೆಪಿಯ ಮೋದಿ ಸರ್ವಾಧಿಕಾರತ್ವ, ಕೆಲವೇ ಜನರ ವಿಕಾಸ, ಕೋಮುವಾದದ ಆಧಾರದಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಇವೆರಡರ ನಡುವೆ ಶ್ರೀಸಾಮಾನ್ಯ ಆಮ್ ಆದ್ಮಿಯತ್ತ ಕುತೂಹಲದಿಂದ ನೋಡುತ್ತಿದ್ದಾರೆ ಎಂಬುದು ಪ್ರಚಾರದ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಯುಪಿಎ ಆಡಳಿತದ ಹಗರಣಗಳನ್ನು ಕಂಡು ಜನತೆ ಬೇಸತ್ತಿದ್ದಾರೆ. ಜನರ ಮನಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಜನತೆ ಪರ್ಯಾಯ ಹುಡುಕುತ್ತಿದ್ದಾರೆ. ಆದರೆ, ಮೋದಿ ಇನ್ನೂ ಅಪಾಯಕಾರಿ ಎಂಬುದನ್ನೂ ಜನರು ತಿಳಿದಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಆಮ್ ಆದ್ಮಿಯೊಂದೇ ಜನರಿಗಿರುವ ಪರ್ಯಾಯ ಎಂದರು.
ಮುಂಬರುವ ಐದು ವರ್ಷಗಳಲ್ಲಿ 8-10 ರಾಜ್ಯಗಳಲ್ಲಿ ಆಪ್ ನಿರ್ಣಾಯಕ ರಾಜಕೀಯ ಶಕ್ತಿಯಾಗಿ ಬೆಳೆಯಲಿದೆ. ಇದೇ ವರ್ಷ ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರ ಮತ್ತು ಹರ್ಯಾಣಾಗಳಲ್ಲಿ ಆಪ್ ಹೊಸ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದರು. ಆಪ್ ಅಭ್ಯರ್ಥಿ ಹೇಮಂತಕುಮಾರ, ಬಸವರಾಜ ಮುದಿಗೌಡರ, ರಾಜ್ಯ ಸಂಚಾಲಕ ಶಿವಕುಮಾರ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

