ಧಾರವಾಡ

ಧಾರವಾಡ ಅಭಿವೃದ್ಧಿಗೆ ಕೈ ಬೆಂಬಲಿಸಿ

Published On :

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಪ್ರಯುಕ್ತ ಹುಬ್ಬಳ್ಳಿಯ ಅಧ್ಯಾಪಕನಗರದ ಹುಲಿಗಿಯವರ ಮನೆಯಲ್ಲಿ ಮಂಗಳವಾರ ನಡೆದ ಬ್ರಾಹ್ಮಣ ಸಮುದಾಯದ ಸಭೆಯಲ್ಲಿ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಯವರನ್ನು ಬೆಂಬಲಿಸಲು ನಿರ್ಧರಿಸಲಾಯಿತು. ಮಾತನಾಡಿದ ರವಿ ಹುಲಿಗಿ, ಕಳೆದ ಹದಿನೆಂಟು ವರ್ಷದಿಂದ ಹುಬ್ಬಳ್ಳಿ ಧಾರವಾಡ ನಗರ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಅಭ್ಯರ್ಥಿಯನ್ನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನಾವೆಲ್ಲ ಯೋಗ್ಯ ನಿರ್ಧಾರ್ನ ತೆಗೆದುಕೊಳ್ಳಬೇಕಾಗಿದೆ. ವಿನಯ ಕುಲಕರ್ಣಿ ಜನಮನ ಸೆಳೆದಿರುವ ಯುವ ನಾಯಕರಾಗಿದ್ದ, ಜನಪರ ಕಾರ್ಯ್ನ ಮಾಡುತ್ತ ಬಂದಿದ್ದಾರೆ. ಅವರಿಗೆ ಅವಕಾಶ ಕೊಟ್ಟು ಕುಂಠಿತವಾಗಿರುವ ಅಭಿವೃದ್ದಿ ಕಾರ್ಯ್ನ ಮಾಡಿಸುವತ್ತ ಪ್ರಯತ್ನಿಸೋಣ.
ಯಾವುದೇ ಅಲೆ ಬಲೆಗೆ ಕಿವಿಗೊಡದೆ ಭಯ, ಆತಂಕಪಡದೆ ಕಡ್ಡಾಯವಾಗಿ ಮತ ಚಲಾಯಿಸಿ ಮತ್ತು ವಿನಯ ಕುಲಕರ್ಣಿಯವರಿಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿದರು.
ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಮಾತನಾಡಿ, ಸಮಗ್ರ ಬ್ರಾಹ್ಮಣ ಸಮುದಾಯದ ಹಿರಿಯರು, ಬಾಂಧವರು ವಿನಯ ಕುಲಕರ್ಣಿಯವರಿಗೆ ಮತ ನೀಡುವಂತೆ ಮನವಿ ಮಾಡಿದರು. ದೇವಕಿ  ಯೋಗಾನಂದ ಮಾತನಾಡಿ, ವಿನಯ ಕುಲಕರ್ಣಿಯವರ ಸೇವೆ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನ್ನು ವಿವರಿಸಿದರು. ಸಭೆಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರಾದ ಸಂಜೀವ ಹುಲಿಗಿ, ಗೋಪಾಲ ಕುಲಕರ್ಣಿ, ಸೀತಾರಾಮಾಚಾರ ಹುಲಿಗಿ, ವೆಂಕಟೇಶ ಜೋಶಿ, ಕೃಷ್ಣಾ ಪಾಟೀಲ, ವಿದ್ಯಾ ಪುರೋಹಿತ, ವಂದನಾ ಕುಲಕರ್ಣಿ, ವಾದಿರಾಜ ದೇಸಾಯಿ, ಸಂಜಯ ಕಟ್ಟಿ ಆಚಾರ, ಶಶಿಕಲಾ ಬಸವರೆಡ್ಡಿ, ಮುರಳೀಧರ ಆಚಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.