ನಾಳೆಯಿಂದ ಗಾಯತ್ರಿದೇವಿ ದಶಮಾನೋತ್ಸವ
ಧಾರವಾಡ: ಇಲ್ಲಿಯ ಗಾಯತ್ರಿ ಸಮೂಹದ ವತಿಯಿಂದ ಏ.28 ರಿಂದ ಸಂಜೆ 6 ಕ್ಕೆ ಗಾಯತ್ರಿ ದೇವಿಯ ದಶಮಾನೋತ್ಸವ ನಡೆಯಲಿದೆ. ಇಲ್ಲಿಯ ಪಿ.ಬಿ. ರಸ್ತೆಯ ಯಶೋಧಾ ಮಂಗಲ ಕಾರ್ಯಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು. ಗಾಯತ್ರಿ ಸಮೂಹವು ಸುಮಾರು 300 ಭಕ್ತರು ಗಾಯತ್ರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿದ ಗಾಯತ್ರಿ ಜಪ ಮಾಡುವರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೊಪ್ಪಳದ ಡಾ. ಧೀರೇಂದ್ರ ಆಚಾರ್ಯ ಆರ್. ಬೆಳ್ಳಟ್ಟಿ ಗಾಯತ್ರಿ ಮಾತೆಯ ಬಗ್ಗೆ ವಿಶೇಷ ಪ್ರವಚನ, ನಂತರ ಗಾಯತ್ರಿ ತಪೋಭೂಮಿಯ ಪರಮಪೂಜ್ಯ ಬಾಲಕೃಷ್ಣಾನಂದ ಸರಸ್ವತಿ ಸಾಮೀಜಿಯವರಿಂದ ವಿಶೇಷ ಆರ್ಶೀವಚನ ನಡೆಯಲಿದೆ. ಜಿ.ಆರ್. ದೇಶಪಾಂಡೆ, ತ್ರಿಯಂಬಕ ಗೋಡಖಿಂಡಿ, ಶ್ರೀಧರ ದೇಸಾಯಿ ಮತ್ತು ದಿಲೀಪ ಕನಕಾಪೂರ ಸಂಚಾಲಕರಾಗಿದ್ದಾರೆಂದ ಶಂಕರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರ ಸ್ಮರಿಸಿ ಮುಕ್ತಿ
ಹೊಂದಿ: ಸಿದ್ದರಾಮದೇವರು
ನವಲಗುಂದ: ಶ್ರದ್ಧೆ, ನಂಬಿಕೆ, ವಿಶ್ವಾಸ, ಭಕ್ತಿಯಿಂದ ದೇವರನ್ನು ಸ್ಮರಿಸಿದರೆ ಸಾಕು ಜೀವನ ಮುಕ್ತಿಯ ಮಾರ್ಗವನ್ನು ಹೊಂದುತ್ತದೆ ಎಂದು ಗದಗ ಜಿಲ್ಲೆಯ ಕಲ್ಲೂರ ಸಿದ್ದರಾಮ ದೇವರು ಹೇಳಿದರು. ತಾಲೂಕಿನ ತುಪ್ಪದ ಕುರಹಟ್ಟಿಯಲ್ಲಿ ಜರುಗಿದ ಭೂಸನೂರ ಸಂಸ್ಥಾನ ಬೃಹನ್ಮಠದ ವಾಗೀಶ ಪಂಡಿತರಾಧ್ಯ ಮರಿದೇವರ ಪಟ್ಟಾಧಿಕಾರ ಮಹೋತ್ಸವ, 35ನೇ ತುಲಾಭಾರ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ದರ್ಶನ ಪ್ರವಚನದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ತುಪ್ಪದ ಕುರಹಟ್ಟಿ ಭೂಸನೂರ ಸಂಸ್ಥಾನ ಬೃಹನ್ಮಠದ ವಾಗೀಶ ಪಂಡಿತಾರಾಧ್ಯ ಮರಿದೇವರು ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಗ್ರಾಮದ ಚಂದ್ರಗೌಡ ಜಕ್ಕನಗೌಡರ, ಹನಮವ್ವ ವಗ್ಗರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

