ಇಂದು ಸಖೀಗೀತ ದಿನ
ಹುಬ್ಬಳ್ಳಿ: ಧಾರವಾಡದ ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಲಕ್ಷ್ಮಿಬಾಯಿ ದತ್ತಾತ್ರೇಯ ಬೇಂದ್ರೆಯವರ 109ನೇ ಜನ್ಮದಿನದ ಅಂಗವಾಗಿ ಸಖೀಗೀತ ದಿನ ಕಾರ್ಯಕ್ರಮವನ್ನು ಏ. 27ರಂದು ಹಮ್ಮಿಕೊಳ್ಳಲಾಗಿದೆ. ಧಾರವಾಡದ ಬೇಂದ್ರೆ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಖೀಗೀತ ಖಂಡ ಕಾವ್ಯ ಕುರಿತು ಮಯೂರ ಸಂಪಾದಕಿ ಡಾ. ಆರ್. ಪೂರ್ಣಿಮಾ ವಿಶೇಷ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕ್ರಿಯಾಶೀಲ ದಂಪತಿ ಬಸವಲಿಂಗಯ್ಯ ಹಿರೇಮಠ ಹಾಗೂ ವಿಶ್ವೇಶ್ವರಿ ಹಿರೇಮಠ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಳ್ನಾವರದ ಗೀತಾ ಬೋಗಾರಂ ಅವರಿಂದ ಬೇಂದ್ರೆ ಭಾವಗೀತೆ ಗಾಯನ ನಡೆಯಲಿದ್ದು ಪರಿಷ್ಕೃತ ಬೇಂದ್ರೆ ಜಗಜ್ಜಾಲ (ವೆಬ್ಸೈಟ್) ಲೋಕಾರ್ಪಣೆಯೂ ನಡೆಯಲಿದೆ ಎಂದು ಟ್ರಸ್ಟ್ನ ಪ್ರಜ್ಞಾ ಮತ್ತಿಹಳ್ಳಿ ಹಾಗೂ ಶ್ಯಾಮಸುಂದರ ಬಿದರಕುಂದಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಳೆ
ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಇಳಿ ಸಂಜೆ ಹೊತ್ತಿನಲ್ಲಿ ಗುಡುಗು ಮಿಂಚಿನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿಯಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಹುಬ್ಬಳ್ಳಿಯಲ್ಲಿತ್ತು. ಆದರೆ ಮಳೆ ಬರುವ ಸೂಚನೆ ಇರಲಿಲ್ಲ. ಏಕಾಏಕಿ ಮಳೆ ಸುರಿದು ತಣ್ಣನೆಯ ವಾತಾವರಣ ನಿರ್ಮಿಸಿತು. ಕಳೆದ ಎರಡು ದಿನಗಳಿಂದ ಉಷ್ಣಾಂಶದಲ್ಲಿ ಏರಿಕೆಯಾಗಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ಹುಬ್ಬಳ್ಳಿ ನಾಗರಿಕರಿಗೆ ಸಂಜೆ ಹೊತ್ತಿನಲ್ಲಿ ಸುರಿದ ಮಳೆ ತಣ್ಣನೆಯ ಅನುಭವ ನೀಡಿತು. ಹುಬ್ಬಳ್ಳಿಯ ಉಣಕಲ್ ಕ್ರಾಸ್, ವಿದ್ಯಾನಗರ ಮತ್ತು ಸಾಯಿನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

