ಧಾರವಾಡ

ಮೇ 4ರಿಂದ ಶಂಕರ ಜಯಂತಿ

Published On :

ಧಾರವಾಡ:  ಶಂಕರ ಭಗವತ್ಪಾದರ ಜಯತ್ಯುಂತ್ಸವದ ಅಂಗವಾಗಿ ಇಲ್ಲಿಯ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಮೇ 4 ರಿಂದ 9 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜೇಶ್ವರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿವೆ.  ಮೇ 4 ರಂದು ಶಂಕರಾಚಾರ್ಯ ಭಾವಚಿತ್ರದ ಮೆರವಣಿಗೆಯು ಶಂಕರಾಚಾರ್ಯ ಪಾಠಶಾಲೆ ಗಾಂಧಿಚೌಕ ಧಾರವಾಡದಿಂದ ಪ್ರಾರಂಭವಾಗಿ ಆಲೂರ ವೆಂಕಟರಾವ್ ಭವನದವರೆಗೆ ನಡೆಯುವುದು. ಸಂಜೆ 7 ಕ್ಕೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ.  ಮೇ 5ರಂದು ಸಂಜೆ 5 ಕ್ಕೆ ಕೃಷ್ಣ ಚೈತನ್ಯಾನಂದಸ್ವಾಮಿಗಳು, ರಾಜೇಶ್ವರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಶಂಕರ ಜಯಂತಿ ನಡೆಯುವುದು. ಮೇ 6ರಂದು ಹುಬ್ಬಳ್ಳಿ ಶಾರದಾ ಭಜನಾ ಮಂಡಳಿ ವತಿಯಿಂದ ಭಜನೆ, ಮಧುಸೂದನಶಾಸ್ತ್ರಿ ಹಂಪಿಹೊಳಿ, ಶ್ರೀಧರ ಇನಾಂದಾರ ಅವರಿಂದ ಪ್ರವಚನ ನಡೆಯಲಿದೆ. ನಂತರ ಅಕ್ಷತಾ ಕುಲಕರ್ಣಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.  7ರಂದು ಸಂಜೆ 5 ಕ್ಕೆ ಶಾರದಾ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ರೇಣುಕಾ ನವಲಗುಂದ ಮತ್ತು ನಾಗರತ್ನಾ ನವಲಗುಂದ ಅವರಿಂದ ಭಕ್ತಿ ಸಂಗೀತ ನಡೆಯಲಿದೆ.


ರಾಮದೇವ್ ಹೇಳಿಕೆ ಖಂಡನೆ


ಧಾರವಾಡ: ಲಖನೌದಲ್ಲಿ ನಡೆದ ಸಮಾರಂಭದಲ್ಲಿ ಯೋಗಗುರು ಬಾಬಾ ರಾಮದೇವ ಅವರು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದಲಿತರ ಮನೆಗೆ ಹೋಗಿ ಪಿಕ್ನಿಕ್ ಹಾಗೂ ಹನಿಮೂನ್ ಮಾಡುತ್ತಾರೆಂದು ಹೇಳಿಕೆ ನೀಡಿದ್ದನ್ನು ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಖಂಡಿಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡನ ಬಗ್ಗೆ ಬಾಬಾ ರಾಮದೇವ ಅತೀ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಅಲ್ಲದೇ, ದಲಿತ ಮಹಿಳೆಯರಿಗೂ ಅವಮಾನ ಮಾಡಲಾಗಿದೆ. ಆದ್ದರಿಂದ ರಾಮದೇವಬಾಬಾ, ರಾಹುಲ್ ಗಾಂಧಿ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ರಾಮದೇವ ಗುರೂಜಿ ಮೇಲೆ ಕಾನೂನು ಕ್ರಮವಾಗಬೇಕು. ಅಲ್ಲದೇ, ಅವರನ್ನು ಗಡಿಪಾರು ಮಾಡಬೇಕೆಂದು ಎಂದು ಕಾಂಗ್ರೆಸ್ ಕಿಸಾನ್ ಸಮಿತಿ ರಾಜ್ಯ ಸಂಚಾಲಕ ದೇವಾನಂದ ರತ್ನಾಕರ, ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷ ದೇವಕಿ ಯೋಗಾನಂದ ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಶಾಂತಾ ಹಲಗಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.