ಪಡಿತರ ಅವ್ಯವಸ್ಥೆ ಸರಿಪಡಿಸಲು ಮನವಿ
ಧಾರವಾಡ: ಪಡಿತರ ಚೀಟಿಯ ಅವ್ಯವಸ್ಥೆ ಸರಿಪಡಿಸಬೇಕೆಂದು ರಾಜ್ಯ ಬಡವರ ಹಿತರಕ್ಷಣಾ ವೇದಿಕೆ ಸೋಮವಾರ ಡಿಸಿ ಮುಖಾಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ ಗುಂಡೂರಾವ್ಗೆ ಮನವಿ ಸಲ್ಲಿಸಿತು.
ಹೆಚ್ಚಿನ ಅರ್ಹರಿಗೆ ಬಿಪಿಎಲ್ ಕಾರ್ಡ್ ದೊರಕಿಲ್ಲ. ಇದಕ್ಕೆ ಸಂಬಂದಪಟ್ಟ ಮೇಲಾಧಿಕಾರಿಗಳು ಏಜೆಂಟರನ್ನು ನೇಮಿಸಿ ಅವರ ಮುಖಾಂತರ ಬಿಪಿಎಲ್ ಕಾರ್ಡ್ಗೆ ರು. 2 ಸಾವಿರದಿಂದ 5 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಹಣವಿದ್ದವರು ಬಿಪಿಎಲ್ ಕಾರ್ಡ್ ಪಡೆಯುತ್ತಿದ್ದಾರೆ. ಹಣ ನೀಡಲಿಕ್ಕಾಗದ ಕಡುಬಡವರು ಎಪಿಎಲ್ ಕಾರ್ಡ್ ಪಡೆಯುವಂತಾಗಿದೆ. ಅರ್ಹರು ತಮ್ಮ ಕೂಲಿ ಕೆಲಸ ಬಿಟ್ಟು ಬಿಪಿಎಲ್ ಕಾರ್ಡ್ ಮಾಡಿಸುವುದಕ್ಕೆ ಕಚೇರಿಗಳಿಗೆ ಅಲೆದಾಡಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರೊಂದಿಗೆ ಕಾರ್ಡ್ ಚಾಲ್ತಿಯಲ್ಲಿಲ್ಲ ಎಂದು ಅಂಗಡಿಕಾರರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸೀಮೆ ಎಣ್ಣೆಯನ್ನು ತಿಂಗಳಲ್ಲಿ ಎರಡು ದಿನ ಮಾತ್ರ ವಿತರಿಸುತ್ತಿದ್ದಾರೆ. ಇದರಿಂದ ಜನರಿಗೆ ಸಮಸ್ಯೆಯಾಗಿದ್ದು ಸೀಮೆಎಣ್ಣೆ ವಿತರಣೆಯನ್ನು ತಿಂಗಳಲ್ಲಿ 10 ದಿನಗಳ ವರೆಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಿವಾನಂದ ನಗರ, ರಾಮನಗರ, ಚಪ್ಪರಬಂದ ಕಾಲೋನಿ, ಗುಲಗಂಜಿಕೊಪ್ಪ, ಮಹಬೂಬ್ ನಗರ, ಕಮಲಾಪುರ, ಮಾಳಾಪುರ ನಿವಾಸಿಗಳಾದ ಆರ್.ವಿ. ಕಂತಿಮಠ, ಕೆ.ಎನ್. ಸೋದರ, ಬಸವರಾಜ ಇಂಗಳಗಿ, ಸುರೇಶ ದೊಡಮನಿ, ಸಿದ್ದಪ್ಪ ಕಡಕೋಳ, ಮಂಜುನಾಥ ಮಾಂಡ್ರೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

