ತೃಪ್ತಿಯುತ ಬದುಕಿನಿಂದ ಭ್ರಷ್ಟಾಚಾರ ತಡೆ
ಧಾರವಾಡ: ಮಕ್ಕಳಲ್ಲಿ ಅತಿಯಾಸೆ ಮೂಡಿಸುವ ಬದಲು ತೃಪ್ತಿಯುತ ಬದುಕಿನ ಬಗ್ಗೆ ತಿಳಿಸಬೇಕು. ಇಲ್ಲದಿದ್ದರೆ ಮನುಷ್ಯನ ಆಸೆ ದುರಾಸೆಯಾಗಿ ಬದಲಾದಾಗ ಆತ ಭ್ರಷ್ಟನಾಗುತ್ತಾನೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಭಗವಾನ್ ಶ್ರೀ ರಾಮಕೃಷ್ಣ ಮಂದಿರದ 9ನೇ ವಾರ್ಷಿಕೋತ್ಸವ ನಿಮಿತ್ತ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಿಂದಲೇ ತೃಪ್ತಿ ಎಂಬುದರ ನಿಜವಾದ ಅರ್ಥವನ್ನು ಪಾಲಕರು ಹಾಗೂ ಶಿಕ್ಷಕರು ತಿಳಿಸಿಕೊಡಬೇಕು. ದುರಾಸೆಯೆಂಬ ರೋಗದಿಂದ ಏನು ಪಡೆದರೂ ಅದರಿಂದ ತೃಪ್ತಿ ಎಂದಿಗೂ ಸಿಗಲಾರದು. ಈ ಕಟುಸತ್ಯ ಮಕ್ಕಳಲ್ಲಿ ಒಳಮೂಡುವಂತೆ ಮಾಡಿದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದರು. ಪ್ರಜಾಪ್ರಭುತ್ವದಲ್ಲಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಸರ್ಕಾರ ಇರಬೇಕು. ಆದರೆ ಇಂದು ದೇಶದ ಸ್ಥಿತಿ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಎಂಬಂತಿರುವುದು ಶೋಚನೀಯ ಸಂಗತಿ. ಸಮಾಜ ಇಂದು ಶ್ರೀಮಂತಿಕೆ, ಅಧಿಕಾರವನ್ನ್ನು ಪ್ರೀತಿಸುತ್ತಿರುವುದು ಹಾಗೂ ಪೂಜಿಸುತ್ತಿರುವುದೇ ಇಂದಿನ ಪರಿಸ್ಥಿತಿಯೇ ನೇರ ಕಾರಣ. ಇದು ಎಂದಿಗೂ ತರವಲ್ಲ ಎಂದು ಖೇದ ವ್ಯಕ್ತಪಡಿಸಿದರು. ಇತ್ತೀಚಿನ ಕೆಲ ವರ್ಷಗಳಿಂದ ಹಲವು ಬೃಹತ್ ಹಗರಣಗಳು ಬೆಳಕಿಗೆ ಬಂದಿವೆ. ಆದರೆ ಎಲ್ಲ ಹಗರಣಗಳು ಬಯಲಾಗುತ್ತಿಲ್ಲ. ಅದರಲ್ಲಿ ಕೆಲವೇ ಕೆಲವು ಬಯಲಾಗುತ್ತಿವೆ. ಬಹುಕೋಟಿ ಹಗರಣಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿಯುತ್ತದೆ ಎಂಬುದನ್ನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕೆ ಯುವಕರು ಪಣ ತೊಡಬೇಕು ಎಂದು ಸಲಹೆ ನೀಡಿದರು. ಲೋಕಾಯುಕ್ತ ಸಂಸ್ಥೆಯಿಂದ ಬಹಳ ಕೆಲಸ ಸಾಧ್ಯ. ಅದರ ಕೆಲಸ ಕೇವಲ ಭ್ರಷ್ಟಾಚಾರ ಹೋಗಲಾಡಿಸುವುದಲ್ಲ. ಆಡಳಿತದಲ್ಲಿನ ನ್ಯೂನತೆ, ದುರಾಡಳಿತ ಸರಿಪಡಿಸಲು ಇದರಿಂದ ಸಾಧ್ಯ ಎಂದರು. ಅತಿಥಿಯಾಗಿದ್ದ ಪದವಿ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ದೇವಾನಂದ ಗಾಂವಕರ್ ಮಾತನಾಡಿದರು. ನವಭಾರತದ ಸ್ಫೂರ್ತಿ ಸ್ವಾಮಿ ವಿವೇಕಾನಂದ ಕುರಿತು ಬೆಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಮಂಗಳನಾಥಾನಂದಜೀ, ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತ ಅಂದು-ಇಂದು ಕುರಿತು ಆದರ್ಶ ಗೋಖಲೆ ಉಪನ್ಯಾಸ ನೀಡಿದರು. ವಿಜಯಾನಂದ ಸರಸ್ವತಿ ಸ್ವಾಮೀಜಿ, ಸುಮೇಧಾನಂದಜೀ, ಚೈತನ್ಯಾನಂದಜೀ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

