ಕಾವ್ಯ ಕೃಷಿ ಮನ್ವಂತರಕ್ಕೆ ಕಾರಣವಾಗಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 17
ಕ್ರೌರ್ಯದ ಶುಷ್ಕತೆಯನ್ನಳಿದು ಆದ್ಯಂತಿಕವಾದ ಪ್ರೀತ್ನಿ ಸೃಜಿಸುವ ಕಾವ್ಯ ಕೃಷಿಯು ಹೊಸ ಹುಟ್ಟಿಗೆ, ಹೊಸ ಸಂವೇದನೆಗೆ ಹಾಗೂ ಹೊಸ ಮನ್ವಂತರಕ್ಕೆ ಕಾರಣವಾಗಬೇಕು ಎಂದು ಹಿರಿಯ ಬಹುಭಾಷಾ ಕವಿ, ಚಿಂತಕ ಡಾ. ಪಂಚಾಕ್ಷರಿ ಹಿರೇಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹಾಮನೆ ಪ್ರಕಾಶನ ಭಾನುವಾರ ಆಯೋಜಿಸಿದ್ದ ಗಡಿ ಪ್ರದೇಶ ಜೋಯಿಡಾದ ಕವಿ, ಶಿಕ್ಷಕ, ಸಂಘಟಕ ಅಜನಾಳು ಭೀಮಾಶಂಕರ ಅವರ 'ಭಾವ ಬೆಳದಿಂಗಳು' ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
'ನಾನು' ಮುಕ್ತನಾದಾಗ ಯುಕ್ತ ಕಾವ್ಯ ಸೃಷ್ಟಿ ಸಾಧ್ಯವಾಗುತ್ತದೆ. ಅಲ್ಲಿ ಕಾವ್ಯದ ಪ್ರತಿ ಸಾಲುಗಳೂ ಧ್ವನಿಪೂರ್ಣವಾಗಿದ್ದು, ಅದು ಶ್ರೇಷ್ಠ ಕಾವ್ಯವೆನಿಸಿಕೊಳ್ಳುತ್ತದೆ. ಅನುಭವ, ಅನುಭಾವ ಮತ್ತು ಅನುಭೂತಿ ಮುಪ್ಪುರಿಗೊಂಡಾಗ ಹೃದ್ಯ ಕಾವ್ಯ ಸಂಗಮ ಸಾಧ್ಯವಾಗುತ್ತದೆ ಎಂದರು.
'ಭಾವ ಬೆಳದಿಂಗಳು' ಕೃತ್ನಿ ಬಿಡುಗಡೆಗೊಳಿಸಿದ ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ್ ಮಾತನಾಡಿ, ಕಾವ್ಯ ಬದುಕನ್ನ್ನು ಕಟ್ಟಿಕೊಡುವ ಧ್ವನಿಪೂರ್ಣ ಮಾಧ್ಯಮವಾಗಿ ನಿಲ್ಲಬೇಕಾಗುತ್ತದೆ. ಪರಿಸರ ಪ್ರೀತಿ, ಭಾವೈಕ್ಯದ ಬದುಕು, ಮನುಷ್ಯ ಸಹಜ ಶ್ರೇಷ್ಠ ಜೀವನ ವಿಧಾನ ಹಾಗೂ ಸುಸಂಸ್ಕೃತಿಯ ಜಾಗೃತಿಗೆ ಕಾವ್ಯ ಶಕ್ತಿಯಾಗಬೇಕು ಎಂದು ಹೇಳಿದರು.
ಅತಿಥಿಯಾಗಿದ್ದ ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ಸ್ವಯಂ ಕಲಿಕೆಗೆ ಬೇಕಾಗುವ ಸಾಹಿತ್ಯವನ್ನ್ನು ಶಿಕ್ಷಕರೇ ರಚಿಸಬೇಕಾಗುತ್ತದೆ. ಮಕ್ಕಳು ಕೇವಲ ಜ್ಞಾನದ ಭಂಡಾರವಾದರೆ ಸಾಲದು. ಅವರು ಸೃಜನಶೀಲತೆಯ ಆಲೋಚನೆಗಳಿಂದ ಕೂಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭೀಮಾಶಂಕರ ಹಳ್ಳಿಗಳ ಉದ್ಧಾರ, ಪರಿಸರ ಸಂರಕ್ಷಣೆ, ಭಾವನಾತ್ಮಕ ಸಂಬಂಧಗಳ ನಿರೂಪಣೆಯನ್ನ್ನು ಸೊಗಸಾಗಿ ತಮ್ಮ ಕವಿತೆಗಳಲ್ಲಿ ಹೆಣೆದಿದ್ದಾರೆ ಎಂದರು.
ತಮ್ಮ ಕೃತಿ ಕುರಿತು ಅಜನಾಳ ಭೀಮಾಶಂಕರ ಮಾತನಾಡಿದರು. ಜೋಯಿಡಾ ತಾಲೂಕು ಬಾಪೇಲಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಮಂಜುಳಾ ಕೋಟೂರ 'ಭಾವ ಬೆಳದಿಂಗಳು' ಕೃತಿಯ ಎರಡು ಕವಿತೆಗಳನ್ನ್ನು ಹಾಡಿದರು. ದಾಂಡೇಲಿಯ ಸಾಹಿತಿ ಅಳಗುಂಡಿ ಅಂದಾನಯ್ಯ ಹಾಗೂ ಕವಿ-ನಾಟಕಕಾರ ಮುರ್ತುಜಾಹುಸೇನ್ ಆನೇಹೊಸೂರ, ವಿ.ವಿ. ಹೆಬ್ಬಳ್ಳಿ, ಹಿರಿಯ ಕವಿ ವಿ.ಸಿ. ಐರಸಂಗ, ಎಂ.ಎ. ಕುಲಕರ್ಣಿ, ಶ್ರೀಮಂತ ಮದರಿ, ಜಿ. ಅಣ್ಣಪ್ಪ, ಸಿದ್ದು ಎಂಭತ್ನಾಳ, ಪಿ.ಟಿ. ಮಹಾರಾಜನವರ, ಎಸ್.ಆರ್. ಪೂಜಾರಿ, ಸಂಗಮೇಶ ಹೊಸಮನಿ, ಪಿ.ಎ. ಕಡೇಮನಿ ಮತ್ತಿತರರಿದ್ದರು.
ಸಾಹಿತಿ ಮೋಹನ ನಾಗಮ್ಮನವರ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ನಿರೂಪಿಸಿದರು. ಹನುಮಂತ ಕುಂಬಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

