ಸುದ್ದಿ ಸಂಕ್ಷೇಪ
ನಾಳೆ ಸುಗಮ ಸಂಗೀತ ಕಾರ್ಯಕ್ರಮ
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪದ ಆಶ್ರಯದಲ್ಲಿ ಫೆ. 19ರಂದು ಸಂಜೆ 6ಕ್ಕೆ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಡಾ. ಅರ್ಜುನ ವಠಾರ ಅವರಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಬಸವ ಕೇಂದ್ರದ ಅಧ್ಯಕ್ಷ ಉಮೇಶ ಕಟಗಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ವೀರಣ್ಣ ಒಡ್ಡೀನ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಿತ್ತೂರು ಕೆ.ಎಂ.ವಿ. ಆರ್ಟ್ಸ್ ಕಾಲೇಜು ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಲಭಾದತ್ತ ನೀರಲಗಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳು, ಕಲಾವಿದರು, ಸಂಗೀತಾಸಕ್ತರು, ವಿದ್ಯಾರ್ಥಿಗಳು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಪಾಲ್ಗೊಳ್ಳುವಂತೆ ಯುವಜನ ಮಂಟಪದ ಸಂಚಾಲಕ ಗುರು ಹಿರೇಮಠ ಕೋರಿದ್ದಾರೆ.
ಪಿಎಲ್ಡಿ ಬ್ಯಾಂಕಿಗೆ ಆಯ್ಕೆ
ಕಲಘಟಗಿ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಆಡಳಿತ ಮಂಡಳಿಯ 5 ಕ್ಷೇತ್ರಗಳಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಇಂತಿದೆ. 4ನೇ ಮತಕ್ಷೇತ್ರದಿಂದ ಯಲ್ಲಪ್ಪಗೌಡ ಬಸನಗೌಡ ಗುರುಪಾದಗೌಡ್ರ, 5ನೇ ಮತಕ್ಷೇತ್ರದಿಂದ ಕಲ್ಮೇಶ ಸೋಮಪ್ಪ ಗಾಡದ, 9ನೇ ಮತಕ್ಷೇತ್ರದಿಂದ ಮಾಲಾ ಈರಪ್ಪ ಗೋಕುಲ, 10ನೇ ಮತಕ್ಷೇತ್ರದಿಂದ ನಾಗಪ್ಪ ರಾಯನಾಳ ಹಾಗೂ 12ನೇ ಮತಕ್ಷೇತ್ರದಿಂದ ವೃಷಭನಾಥ ಪಾಯಪ್ಪ ಪಟ್ಟಣಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಆರ್. ಕುಲಕರ್ಣಿ ತಿಳಿಸಿದ್ದಾರೆ. ಬ್ಯಾಂಕಿನ ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ 7 ಸ್ಥಾನಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು ಅವರುಗಳ ಹೆಸರು ಇಂತಿದೆ: ಚನ್ನವ್ವ ಬರಮಗೌಡರ, ರುದ್ರಪ್ಪ ಟೊಂಗಳೆ, ನಿಂಗಪ್ಪ ಸುತಗಟ್ಟಿ, ಬಸಲಿಂಗಪ್ಪ ದೇಸಾಯಿ, ಬಸಪ್ಪ ದೇವರಮನಿ, ಶಂಕರಪ್ಪ ಮನಗುಂಡಿ, ಬಸಪ್ಪ ಸುಳ್ಳದ ಎಂಬುವರೇ ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರಾಗಿದ್ದಾರೆ.
ರಸ್ತೆ ಸಂಚಾರ ಮಾದರಿ ಸಮೀಕ್ಷೆ ಇಂದು
ಧಾರವಾಡ: ಲೋಕೋಪಯೋಗಿ ಇಲಾಖೆ ವತಿಯಿಂದ ಫೆ. 18ರಂದು ಬೆಳಗ್ಗೆ 6 ಗಂಟೆಯಿಂದ ಫೆ. 20ರ ಬೆಳಗ್ಗೆ 6 ಗಂಟೆಯವರೆಗೆ ರಸ್ತೆ ಸಂಚಾರ ಮಾದರಿ ಸಮೀಕ್ಷೆ ಕಾರ್ಯ್ನ ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷ ಎರಡು ದಿನಗಳವರೆಗೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಮೇಲೆ ವಾಹನ ಸಂಚಾರದ ಮಾದರಿ ಸಮೀಕ್ಷೆ ಕಾರ್ಯ್ನ ಕೈಗೊಳ್ಳಲಾಗುತ್ತಿದೆ. ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ, ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನ್ನು ಮೇಲ್ದರ್ಜೇಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಹಾಸ್ಯ ರಸಾಯನ
ಧಾರವಾಡ: ಬೆಂಗಳೂರಿನ ಅರವಿಂದ ಕಲಾವೃಂದದ ಸಹಾಯಾರ್ಥ ಚಲನಚಿತ್ರ ಗಾಯಕರು ಹಾಗೂ ಸ್ಟಾರ್ ಸಿಂಗರ್ಸ್ಗಳಿಂದ ಮಧುರ ಗಾಯನ ಹಾಗೂ ಹಾಸ್ಯ ರಸಾಯನ ಕಾರ್ಯಕ್ರಮ ಫೆ. 19ರಂದು ಸಂಜೆ 6ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿದೆ. ಚಲನಚಿತ್ರ ಹಾಸ್ಯ ನಟರಾದ ಶಂಖನಾದ ಅರವಿಂದ, ಮಿಮಿಕ್ರಿ ರಾಜಗೋಪಾಲ, ಹಾಸ್ಯ ನಟಿ ಭಾಗ್ಯಶ್ರೀ, ಮೈಸೂರ ರಮಾನಂದ ಜಗನ್ನಾಥ ಸೇರಿದಂತೆ ಹಲವು ಕಲಾವಿದರು ಹಾಸ್ಯ ರಸಾಯನ ನಡೆಸಿಕೊಡಲಿದ್ದಾರೆ. ರಮಾ ಅರವಿಂದ ಹಾಗೂ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ಹಾಡಿರುವ ಪ್ರಾರ್ಥನಾ ಕಿರಣ್ ಸೇರಿದಂತೆ ಇನ್ನ್ನಿತರ ಗಾಯಕರು ಮಧುರ ಗಾಯನ ನಡೆಸಿಕೊಡಲಿದ್ದು ಒಟ್ಟು 16 ಜನರ ತಂಡ ಪಾಲ್ಗೊಳ್ಳಲಿದೆ. ಮಾಹಿತಿಗೆ ಮೊ: 9448235058 ಸಂಪರ್ಕಿಸುವಂತೆ ಚಲನಚಿತ್ರ ಹಾಸ್ಯ ನಟ ಶಂಖನಾದ ಅರವಿಂದ ತಿಳಿಸಿದ್ದಾರೆ.
22ಕ್ಕೆ ಜಾನಪದ ಉತ್ಸವ
ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹುಗ್ಗಿ-ಸುಗ್ಗಿ ಯೋಜನೆಯಡಿ ಧಾರವಾಡದಲ್ಲಿ 'ಜಾನಪದ ಉತ್ಸವ-2014'ನ್ನು ಫೆ. 22ರಂದು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6ಕ್ಕೆ ಸ್ವರ ಸಾಮ್ರಾಟ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪ್ರಭಾರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಉದ್ಘಾಟಿಸುವರು. ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ಅತಿಥಿಗಳಾಗಿದ್ದು, ಹಿರಿಯ ಜಾನಪದ ವಿದ್ವಾಂಸಕ ಬಸವಲಿಂಗಯ್ಯ ಹಿರೇಮಠ ಉಪನ್ಯಾಸ ನೀಡುವರು.
ನಾಳೆ ಶಿವಾಜಿ ಜಯಂತಿ
ಧಾರವಾಡ: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವವನ್ನು ಫೆ. 19ರಂದು ಬೆಳಗ್ಗೆ 10.30ಕ್ಕೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಉಪಸ್ಥಿತರಿರುವರು. ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಸಿ.ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಸಂತೋಷ ಲಾಡ್, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ ಹಾಗೂ ಜಿಪಂ ಅಧ್ಯಕ್ಷ ಶಂಕ್ರಪ್ಪ ಅಂಗಡಿ ಅತಿಥಿಗಳಾಗಿದ್ದು, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸುವರು.
ಆಕಸ್ಮಿಕ ಬೆಂಕಿ-ಹಾನಿ
ಕಲಘಟಗಿ: ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಎರಡು ಮನೆಗಳಿಗೆ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟು ಉಂಟಾಗಿರುವ ಬಗ್ಗೆ ವರದಿಯಾಗಿದೆ. ನಿಂಗಪ್ಪ ಸವಣೂರ ಹಾಗೂ ಸಹದೇವಪ್ಪ ಸವಣೂರ ಎಂಬುವವರ ಮನೆಯಲ್ಲೇ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಸುದ್ದಿ ತಿಳಿಯುತ್ತಿದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ನೆರವಾದರು. ಘಟನೆಯಲ್ಲಿ ಯಾವುದೇ ರೀತಿಯಿಂದ ಪ್ರಾಣ ಹಾನಿ ಸಂಭವಿಸಿರುವು ಬಗ್ಗೆ ತಿಳಿದು ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

