ಧಾರವಾಡ

ಸಹಕಾರದಿಂದ ವ್ಯವಹಾರ ವೃದ್ಧಿಗೆ ಸಂಕಲ್ಪ

Published On :

ಹುಬ್ಬಳ್ಳಿ: ಪರಸ್ಪರ ಸಹಕಾರದ ಮೂಲಕ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವ ಉದ್ದೇಶದಿಂದ ಬೆಂಗಳೂರಿನಲ್ಲಿ ತಲೆ ಎತ್ತಿರುವ 'ಬಿಸಿನೆಸ್ ನೆಟ್ವರ್ಕ್ ಇಂಟರ್ನ್ಯಾಷನಲ್' (ಬಿಎನ್ಐ)ನ ಸದಸ್ಯ ಉದ್ದಿಮೆದಾರರು ನಗರದಲ್ಲಿ ಶುಕ್ರವಾರ ಸ್ಥಳೀಯ ಆಯ್ದ ಉದ್ದಿಮೆದಾರರೊಂದಿಗೆ ಚರ್ಚೆ ನಡೆಸಿದರು.
ನಗರದ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್ ವ್ಯವಹಾರ ಅಧ್ಯಯನ, ಮಾಹಿತಿ ತಂತ್ರಜ್ಞಾನ ಹಾಗೂ ಕಾಮರ್ಸ್ ಕಾಲೇಜು ವತಿಯಿಂದ ಬಿಎನ್ಐ ಸಹಯೋಗದೊಂದಿಗೆ ಬೆಂಗಳೂರು ಹಾಗೂ ಹುಬ್ಬಳ್ಳಿ ಉದ್ದಿಮೆದಾರರ ಸಭೆ ಆಯೋಜಿಸಲಾಗಿತ್ತು.
ಬೆಂಗಳೂರಿನ ಬಿಎನ್ಐನಲ್ಲಿ 76 ಉದ್ದಿಮೆದಾರರು ಸದಸ್ಯತ್ವ ಪಡೆದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಬಿಎನ್ಐ ಸಹಕಾರದಿಂದ ರು. 74 ಕೋಟಿ ವ್ಯವಹಾರ ಮಾಡಿದ್ದಾರೆ. ಎಲೆಕ್ಟ್ರಾನಿಕ್, ಫರ್ನಿಚರ್, ಸಿಮೆಂಟ್ ಸೇರಿದಂತೆ ವಿವಿಧ ವ್ಯವಹಾರ ಮಾಡುವ ಉದ್ದಿಮೆದಾರರು ಬಿಎನ್ಐನಲ್ಲಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರು ಹೊರತು ಪಡಿಸಿ ಇತರೆಡೆ ಬಿಎನ್ಐ ತನ್ನ ಶಾಖೆ ಪ್ರಾರಂಭಿಸಲು ಮುಂದಾಗಿದೆ. ಬೆಂಗಳೂರು ಬಿಎನ್ಐನ 31 ಸದಸ್ಯ ಉದ್ದಿಮೆದಾರರು ಹಾಗೂ ಹುಬ್ಬಳ್ಳಿಯ 65 ಆಯ್ದ ಉದ್ದಿಮೆದಾರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ವ್ಯವಹಾರ ವಿಸ್ತರಣೆ, ಸಹಕಾರ ಮತ್ತಿತರ ವಿಷಯಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಬಿಎನ್ಐನ ಕಾರ್ಯನಿರ್ವಾಹಕ ನಿರ್ದೇಶಕ ವಿ.ವಿ. ಅನಂತರಾಮ್, ಸಂತೋಷ ನೀಲಂಗತಿಲ್, ಗ್ಲೋಬಲ್ ಕಾಲೇಜಿನ ಎನ್.ಎ. ಗೌಡರ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.