ಧಾರವಾಡ

ಭಾರತ ಗೆಲ್ಲಿಸಿ ರ್ಯಾಲಿಗೆ ಅಂತಿಮ ಸಿದ್ಧತೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 26
ನಗರದಲ್ಲಿ ಫೆ. 28ರಂದು ಆಯೋಜಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಯ ಅಂತಿಮ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆದಿವೆ.
ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಲಿದ್ದು, ಮೋದಿ ಅವರನ್ನು ನೋಡಲು ಹಾಗೂ ಅವರ ಭಾಷಣ ಕೇಳಲು ಅನುಕೂಲವಾಗುವುದಕ್ಕಾಗಿ ರ್ಯಾಲಿ ನಡೆಯಲಿರುವ ಕುಸುಗಲ್ ರಸ್ತೆಯ ಮೈದಾನದಲ್ಲಿ 13 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಶ್ರೀ ಸಿದ್ಧಾರೂಢ ಮಠದ ಬಳಿಯೂ ಎರಡು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ. ಮೋದಿ ಅವರ ಭಾಷಣವನ್ನು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಢಿಢಿಢಿ.ಛಿಞಠ್ಞಛ್ಠಟಿಛಡಿಛ್ಞಛ.್ಟ್ಠ್ಜ, ಢಿಢಿಢಿ.ಠ್ಠಝಟಛಜಞ್ಟಝ್ಝ.್ಝಟಿ ಅಥವಾ ಢಿಢಿಢಿ.ಟಿಛ್ಠಜಟಿಜ್ಠಛಟ್ಟಜ್ಝ.್ಝಟಿ ವೆಬ್‌ಸೈಟ್ ಮೂಲಕ ಮೋದಿ ಭಾಷಣ ನೋಡಬಹುದು.
ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗಲೆಂಬ ಉದ್ದೇಶದಿಂದ ಅವಳಿ ನಗರದ ವಿವಿಧೆಡೆಯಿಂದ ಸಾರಿಗೆ ಹಾಗೂ ಖಾಸಗಿಯ ಸುಮಾರು 100 ಬಸ್‌ಗಳು ಸಂಚರಿಸಲಿವೆ. ರ್ಯಾಲಿ ಹಿನ್ನೆಲೆಯಲ್ಲಿ ಫೆ. 27ರಂದು ಮಧ್ಯಾಹ್ನ 4ಕ್ಕೆ ಅವಳಿ ನಗರದ ಆಯ್ದ 12 ಸ್ಥಳಗಳಿಂದ ಮೋದಿ ಭಾವಚಿತ್ರ ಇರುವ ಹಾಗೂ 'ಮೋದಿ ಫಾರ್ ಪಿಎಂ' ಶೀರ್ಷಿಕೆ ಇರುವ ಐದು ಸಾವಿರಕ್ಕಿಂತ ಹೆಚ್ಚು ಬಲೂನ್‌ಗಳನ್ನು ಹಾರಿಬಿಡಲಾಗುವುದು ಎಂದರು.
ಕೇಂದ್ರದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ಧುರೀಣ ಬಾಬಾಗೌಡ ಪಾಟೀಲ ಹಾಗೂ ರೈತ ಮುಖಂಡ ಮಲ್ಲಿಕಾರ್ಜುನ ವಾಲಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಇದೇ ಸಂದರ್ಭ ಮರಳಿ ಬಿಜೆಪಿಗೆ ಬರಮಾಡಿಕೊಂಡರು.
ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.