ಉಪಗ್ರಹ ಆಧಾರಿತ ತರಬೇತಿ ಅವೈಜ್ಞಾನಿಕ
ಧಾರವಾಡ: ರಾಜ್ಯದ ಎಲ್ಲ ಜಿಲ್ಲಾ ಹಾಗೂ ವಿಭಾಗ ಮಟ್ಟದ ಉಪನ್ಯಾಸಕರಿಗೆ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಅವೈಜ್ಞಾನಿಕ ಹಾಗೂ ನೌಕರರ ಮೇಲೆ ಒತ್ತಡ ಹೆಚ್ಚಿಸುವ ಕ್ರಮ ಎಂದು ರಾಜ್ಯ ಪದವಿಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಶೇಖರಗೋಳ ಖಂಡಿಸಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶದ ಮಾರ್ಚ್ 4 ರಿಂದ 9ರ ವರೆಗೆ ವಿವಿಧ ವಿಷಯಗಳ ತರಬೇತಿ ಕಾರ್ಯಕ್ರಮಕ್ಕೆ ತಪ್ಪದೇ ಉಪನ್ಯಾಸಕರನ್ನು ನಿಯೋಜಿಸಲು ಎಲ್ಲ ಪ್ರಾಚಾರ್ಯರಿಗೆ ಆದೇಶಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಪಿಯು ಪರೀಕ್ಷೆಗಳು ಮಾರ್ಚ್ 4ರ ವರೆಗೆ ನಡೆಯುತ್ತಿವೆ. ಎಲ್ಲ ವಿಷಯಗಳ ಉಪನ್ಯಾಸಕರು ನೂರಾರು ಪತ್ರಿಕೆಗಳ ಮೌಲ್ಯಮಾಪನ ಮಾಡಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತವೆ ಹಾಗೂ ಮಾರ್ಚ್ 10ರ ಒಳಗೆ ಇಲಾಖೆಯ ಉಪನಿರ್ದೇಶಕರಿಂದ ಫಲಿತಾಂಶದ ಅನುಮೋದನೆ ಸಹ ಪಡೆಯಬೇಕಿದೆ. ತರಬೇತಿ ಅವಧಿಯಲ್ಲಿ ಮೌಲ್ಯಮಾಪನ ಮಾಡುವುದು ಕಷ್ಟಸಾಧ್ಯ ಹಾಗೂ ಉಪನ್ಯಾಸಕರ ಮೇಲೆ ಒತ್ತಡ ಹೇರಿದಂತಾಗುತ್ತದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಮಾರ್ಚ್ 12 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಸಹ ಆರಂಭಗೊಳ್ಳುತ್ತವೆ. ಸಾವಿರಾರು ಉಪನ್ಯಾಸಕರು ವಿಶೇಷ ಜಾಗೃತ ದಳ, ಜಿಲ್ಲಾ ಜಾಗ್ರತದಳ, ತಾಲೂಕು ಜಾಗೃತ ದಳ, ಪ್ರಶ್ನೆ ಪತ್ರಿಕೆ ಹಾಗೂ ಇತರ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಉಪನ್ಯಾಸಕರು ತರಬೇತಿಗೆ ಹಾಜರಾಗುವುದು ಎಷ್ಟರಮಟ್ಟಿಗೆ ಸರಿ. ಇದು ಕಷ್ಟಸಾಧ್ಯ. ಈ ಕುರಿತು ಮರುಪರಿಶೀಲನೆ ನಡೆಸಬೇಕೆಂದು ಎಸ್.ಎಲ್. ಶೇಖರಗೊಳ ಪಪೂ ಇಲಾಖೆ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

