ಧಾರವಾಡ

ರಾಜಶೇಖರ, ಭಾರತಿಗೆ ವೈಯಕ್ತಿಕ ವೀರಾಗ್ರಣಿ

Published On :

ಧಾರವಾಡ: ಇಲ್ಲಿನ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ರಾಜಶೇಖರ ಮನ್ನಿಕೇರಿ 15, ಮಹಿಳಾ ವಿಭಾಗದ ಭಾರತಿ ಎಸ್.ಬಿ. 25 ಅಂಕಗಳನ್ನು ಪಡೆಯುವ ಮೂಲಕ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು.
ರಾಜಶೇಖರ ಮನ್ನಿಕೇರಿ ಅವರು 100, 200, 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಭಾರತಿ ಎಸ್.ಬಿ. ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಭಲ್ಲೆ ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದರು. ಉತ್ತಮ ತಂಡ ಪ್ರಶಸ್ತಿಯನ್ನು ಡಿಎಆರ್ ವಿಭಾಗವು ತನ್ನದಾಗಿಸಿತು.
ಎಸ್ಪಿ ಪ್ರಥಮ: ರಿವಾಲ್ವಾರ್ ಮತ್ತು ಪಿಸ್ತೂಲ್ ಷೂಟಿಂಗ್‌ನಲ್ಲಿ (ಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಐ, ಪಿಎಸೈ, ಎಸೈ ಇತರೆ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ಪ್ರಥಮ, ಎಂ.ಪಿ. ಸವರಗೋಳ (ಪಿಐ) ಹಾಗೂ ವಿಶ್ವನಾಥ ಚೌಗಲೆ (ಪಿಎಸೈ) ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಡಿಎಸ್ಪಿ ಡಿಎಆರ್ ಎಸ್.ಐ. ಬುಯ್ಯಾರ ಪಡೆದರು. ರೈಫಲ್ ಷೂಟಿಂಗ್‌ನಲ್ಲಿ ಗುಡಗೇರಿ ಪಿಎಸೈ ಸುರೇಶ ಗಡ್ಡಿ ಪ್ರಥಮ ಸ್ಥಾನ , ಎಸ್ಪಿ ಲೋಕೇಶಕುಮಾರ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು. ತೃತೀಯ ಸ್ಥಾನವನ್ನು ಎಂ.ಎಸ್. ಭೂಮರೆಡ್ಡಿ, ಎಂ.ಪಿ. ಸವರಗೋಳ ಪಡೆದರು.
ಎಸ್ಪಿ-ಡಿವೈಎಸ್ಪಿ ವಿಭಾಗದ ಶಾಟ್ ಫುಟ್‌ನಲ್ಲಿ ಎಸ್ಪಿ ಲೋಕೇಶಕುಮಾರ ಪ್ರಥಮ, ಡಿಎಸ್ಪಿ ಬಿ.ವಿ. ಲಿಂಗದಾಳ ದ್ವಿತೀಯ ಹಾಗೂ ಡಿಎಸ್ಪಿ ಆರ್.ಎಸ್. ಬನಹಳ್ಳಿ ತೃತೀಯ ಸ್ಥಾನ ಪಡೆದರು. ಡಿಸ್ಕ್ ಥ್ರೋನಲ್ಲಿ ಡಿಎಸ್ಪಿ ಆರ್.ಎಸ್. ಬನಹಟ್ಟಿ ಪ್ರಥಮ, ಎಸ್ಪಿ ಲೋಕೇಶಕುಮಾರ ದ್ವಿತೀಯ, ಡಿಎಸ್ಪಿ ಡಿಎಆರ್ ಎಸ್.ಐ. ಬುಯ್ಯಾರ ತೃತೀಯ ಸ್ಥಾನ ಪಡೆದರು.
ಪುರುಷರ 100 ಮೀಟರ್ ಓಟದಲ್ಲಿ ರಾಜಶೇಖರ ಮನ್ನಿಕೇರಿ, ಕೃಷ್ಣಾ ಸನದಿ, ಆರ್.ಸಿ. ಪೂಜಾರ ಮೊದಲ ಮೂರು ಸ್ಥಾನ ಗಳಿಸಿದರು. 800 ಮೀಟರ್ ಓಟದಲ್ಲಿ ಮಹಾಂತೇಶ ವೈ.ಎಂ., ಎನ್.ಎಸ್. ಕಿತ್ತೂರ ಹಾಗೂ ಆರ್.ಸಿ. ಪೂಜಾರ ಪ್ರಶಸ್ತಿ ಗಳಿಸಿದರು. 400 ಮೀಟರ್, 1,600 ಮೀಟರ್ ರೀಲೆ ಓಟದಲ್ಲಿ ಡಿಎಆರ್ ತಂಡ ಹಾಗೂ ಧಾರವಾಡ ಗ್ರಾಮೀಣ ತಂಡಗಳು 2ನೇ ಸ್ಥಾನ ಪಡೆದವು. ಪುರುಷರ ವಾಲಿಬಾಲ್, ಕಬಡ್ಡಿ ಹಾಗೂ ಹಗ್ಗ ಜಗ್ಗಾಟಗಳಲ್ಲಿ ಡಿಎಆರ್ ತಂಡ ಪ್ರಥಮ, ಧಾರವಾಡ ಗ್ರಾಮೀಣ ದ್ವಿತೀಯ ಸ್ಥಾನ ಗಳಿಸಿದವು. ಕ್ರಿಕೆಟ್‌ನಲ್ಲಿ ಪೊಲೀಸ್ ತಂಡ ಪ್ರಥಮ ಹಾಗೂ ಪತ್ರಿಕಾ ತಂಡ ದ್ವಿತೀಯ ಸ್ಥಾನ ಪಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.