ಕಣ್ಣು ತೆರೆಸಿದ ಲೋಕಾಯುಕ್ತ ಸಂಸ್ಥೆ: ಹೆಗ್ಡೆ
ಧಾರವಾಡ: ಲೋಕಾಯುಕ್ತ ಸಂಸ್ಥೆಗೆ ಸೇರುವ ಮೊದಲು ಸೀಮಿತ ಪರಿಧಿಯಲ್ಲಿದ್ದ್ದೆ. ಆದರೆ ಈ ಸಂಸ್ಥೆ ನನ್ನ ಕಣ್ಣು ತೆರೆಸಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಹೇಳಿದರು. ವಿದ್ಯಾ ಪಿ. ಹಂಚಿನಮನಿ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ನನ್ನ ಮುಖ್ಯ ಉದ್ದೇಶ ಸಮಾಜದ ಪರಿವರ್ತನೆ. ಸಮಾಜದ ಈ ಪರಿಸ್ಥಿತಿಗೆ ಕಾರಣರಾದ ಹಿರಿಯರಿಂದ ಈ ಪರಿವರ್ತನೆ ಸಾಧ್ಯವಿಲ್ಲ. ಇದಕ್ಕೆ ಯುವ ಪಡೆ ಹುಟ್ಟಬೇಕಿದೆ. ಸಮಾಜ ಸುಧಾರಣೆ ಯುವಕರಿಂದ ಆಗಬೇಕು. ನಿಮ್ಮ ಜೊತೆಗೆ ಬದಲಾವಣೆಗೆ ಪ್ರಯತ್ನಿಸುವುದು ನನ್ನದು ಚಿಕ್ಕ ಪ್ರಯತ್ನ ಎಂದು ಹೇಳಿದರು. ಪದವಿ ಪೂರ್ವ ಇಲಾಖೆ ಉಪ ನಿರ್ದೇಶಕ ಗಣೇಶ ಪೂಜಾರ, ವಿದ್ಯಾರ್ಥಿಗಳಿಗ ಉತ್ತಮ ಶಿಕ್ಷಣ ಒದಗಿಸುತ್ತಿರುವ ಈ ಸಂಸ್ಥೆ ವಿಜ್ಞಾನದ ಜೊತೆಗೆ ವಾಣಿಜ್ಯ ಮತ್ತು ಕಲಾ ವಿಭಾಗಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂತೋಷ ಹೆಗ್ಡೆ ಅವರ ಸಂವಾದ ನಡೆಯಿತು. ಪಿಯುಸಿ 2ನೇ ವರ್ಷದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರೀತಾ ಪ್ಯಾಟಿ, ಜಯಶ್ರೀ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

