ಸುದ್ದಿ ಸಂಕ್ಷೇಪ
ಇಂದು ಆರೋಗ್ಯ ಕಾರ್ಯಕ್ರಮ
ಅಣ್ಣಿಗೇರಿ: ಸ್ಥಳೀಯ ಶಾದಿಮಹಲ್ನಲ್ಲಿ ಜ. 10ರಂದು ಜಿಪಂ, ಆಯುಷ್ ಇಲಾಖೆ, ಪಾರ್ವತೆಮ್ಮ ಹಾಳದೋಟರ ಫ್ರೌಢಶಾಲೆ ಸಹಯೋಗದಲ್ಲಿ ಶಾಲಾ ಆಯುಷ್ ಆರೋಗ್ಯ ಕಾರ್ಯಕ್ರಮ ಜರುಗಲಿದೆ. ಶಾಸಕ ಎನ್.ಎಚ್. ಕೋನರಡ್ಡಿ ಉದ್ಘಾಟಿಸುವರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಂ.ಡಿ. ತೋಟದ ಅಧ್ಯಕ್ಷತೆ ವಹಿಸುವರು. ಡಿಎಚ್ಒ ಡಾ.ಎನ್.ಎಂ. ಅಂಗಡಿ, ಡಿಪಿಎಂಓ ಧಾರವಾಡದ ಡಾ.ಎಸ್.ಎಂ. ಹೊನ್ನಕೇರಿ ಇರುವರು.
ಇಂದು ಲಿಂಗರಾಜ ಜಯಂತಿ
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಜ. 10ರಂದು ಬೆಳಗ್ಗೆ 9ಕ್ಕೆ ತ್ಯಾಗವೀರ ಶಿರಸಂಗಿ ಲಿಂಗರಾಜರ ಜಯಂತಿ ಆಚರಿಸಲಾಗುವುದು. ಕೆಎಲ್ಇ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮತ್ತು ಖ್ಯಾತ ವೈದ್ಯ ಡಾ. ದೀನಬಂಧು ಹಳ್ಳಿಕೇರಿ ಆಗಮಿಸುವರು.
ಧಾರವಾಡದಲ್ಲಿಂದು ಜಯಂತಿ
ಧಾರವಾಡ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ವತಿಯಿಂದ ಇಲ್ಲಿನ ಆರ್ಎಲ್ಎಸ್ ಕಾಲೇಜಿನ ಆವರಣದ ಲಿಂಗಾಯತ ಟೌನ್ ಹಾಲ್ನಲ್ಲಿ ಜ. 10 ರಂದು ಬೆಳಗ್ಗೆ 10ಕ್ಕೆ ತ್ಯಾಗವೀರ ಶಿರಸಂಗಿ ಲಿಂಗರಾಜರ 153ನೇ ಜಯಂತಿ ಆಯೋಜಿಸಲಾಗಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಎಸ್.ಆರ್. ಗುಂಜಾಳ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಕುಲಪತಿ ಡಾ. ಎಸ್.ಪಿ. ಹಿರೇಮಠ ಅತಿಥಿಯಾಗಿದ್ದು, ಆರ್.ಜಿ. ನಲವಡಿ, ಸಿ.ಬಿ. ಯಲಿಗಾರ, ಎಸ್.ಎಸ್. ದೇಸಾಯಿ, ಬಿ.ಎಸ್. ಬಿಕ್ಕಣ್ಣವರ, ಎಂ.ಯು. ಪಾಟೀಲ, ಸಿ.ಬಿ. ಮಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ಜಾನಪದ ಉತ್ಸವ
ಧಾರವಾಡ: ಗುರು ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಓಂ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ಇಲ್ಲಿನ ಓಂ ಸಂಸ್ಥೆ ಆವರಣದಲ್ಲಿ ಜ. 10ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಮಟ್ಟದ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಲಾವಿದ ಡಾ. ಬಸವಲಿಂಗಯ್ಯ ಹಿರೇಮಠ, ವಿಶ್ವೇಶ್ವರಿ ಹಿರೇಮಠ ಅತಿಥಿಗಳಾಗಿ ಭಾಗವಹಿಸುವರು. ಸಂಘದ ಅಧ್ಯಕ್ಷ ಬಿ.ಎಸ್. ಯಗಟಿಮಠ ಅಧ್ಯಕ್ಷತೆ ವಹಿಸುವರು.
ದುಮ್ಮವಾಡ: ಉಪ ತಹಸೀಲ್ದಾರ್ಲೋಕಾಯುಕ್ತ ಬಲೆಗೆ
ಹುಬ್ಬಳ್ಳಿ: ಖಾತಾ ಬದಲಾವಣೆಗೆ ಲಂಚ ಪಡೆಯುತ್ತಿದ್ದ ಕಲಘಟಗಿ ತಾಲೂಕಿನ ದುಮ್ಮವಾಡ ನಾಡಕಚೇರಿಯ ಉಪ ತಹಸೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ನಿಂಬಣ್ಣ ನಿಂಗಪ್ಪ ಪುರಣ್ಣವರ ಹುಬ್ಬಳ್ಳಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ಬಲೆ ಬೀಸಿ ಬಂಧಿಸಿದ್ದಾರೆ. ಕಲಘಟಗಿ ತಾಲೂಕಿನ ಪುರಾಪುರ ಗ್ರಾಮದ ಮರಿಯಪ್ಪನ ಪತ್ನಿ ಭೀಮವ್ವಳಿಗೆ ಪಿತ್ರಾರ್ಜಿತ ಆಸ್ತಿ 3.5 ಎಕರೆ ಪಾಲು ಬರುವುದಿತ್ತು. ಇದರ ಖಾತಾ ಬದಲಾವಣೆ ಮಾಡಿಕೊಡಲು ಭೀಮವ್ವ ಅರ್ಜಿ ಸಲ್ಲಿಸಿದರೆ, ಇದಕ್ಕೆ ಪ್ರತಿಯಾಗಿ ರು. 1 ಲಕ್ಷ ಲಂಚ ಕೊಡುವಂತೆ ನಿಂಬಣ್ಣ ಕೇಳಿದ್ದಾರೆ. ಈ ಕುರಿತು ಭೀಮವ್ವಳ ಪತಿ ಮರಿಯಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು. ಲಂಚ ನೀಡುವ ರು. 1 ಲಕ್ಷ ಪೈಕಿ ಮೊದಲ ಕಂತು ರು. 10 ಸಾವಿರ ಹುಬ್ಬಳ್ಳಿಯಲ್ಲಿ ಗುರುವಾರ ನೀಡುವಂತೆ ನಿಂಬಣ್ಣ ಸೂಚಿಸಿದ್ದ. ಮಾತುಕತೆಯಂತೆ ಹುಬ್ಬಳ್ಳಿಯಲ್ಲಿ ರು. 10 ಸಾವಿರ ಲಂಚ ನೀಡುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ಮಾಡಿ ನಿಂಬಣ್ಣನನ್ನು ಬಂಧಿಸಿದ್ದಾರೆ.
ಇಂದು ಪ್ರತಿಭಟನೆ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದಿಂದ ಜ. 10ರ ಬೆಳಗ್ಗೆ 11ಕ್ಕೆ ಹುಬ್ಬಳ್ಳಿ ಪಾಲಿಕೆ ಕಚೇರಿ ಎದುರು ಆಟೋ ಎಲ್ಪಿಜಿ ದರ ಏರಿಕೆ, ಹದಗೆಟ್ಟ ರಸ್ತೆಗಳ ದುರಸ್ತಿಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಳಿಕ ತಹಸೀಲ್ದಾರ್ ಮೂಲಕ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿಗೆ ಮನವಿ ಸಲ್ಲಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

