ಧಾರವಾಡ

ಅಭಿವೃದ್ಧಿ ಕಾಮಗಾರಿಗೆ ರು. 2 ಕೋಟಿ: ಛಬ್ಬಿ

Published On :

ಅಣ್ಣಿಗೇರಿ: ಹಾವೇರಿ, ಧಾರವಾಡ ಮತ್ತು ಗದಗ ಜಿಲ್ಲೆ ವ್ಯಾಪ್ತಿಯ ವಿವಿಧ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ ರು. 2 ಕೋಟಿ ಅನುದಾನ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಸಮೀಪದ ಹಳ್ಳಿಕೇರಿ ಗ್ರಾಪಂಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ, ಗಟಾರು, ಕುಡಿಯುವ ನೀರು, ವಿದ್ಯುತ್ ದೀಪ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರುವ ಯತ್ನಿಸುತ್ತೇನೆ.  ಹಿಂದಿನ ಬಿಜೆಪಿ ಸರ್ಕಾರ ಅಣ್ಣಿಗೇರಿ ತಾಲೂಕು ಕೇಂದ್ರ ಎಂದು ಘೋಷಿಸಿದ್ದರೂ ಮಾನ್ಯತೆ ಸಿಕ್ಕಿಲ್ಲ. ಸದ್ಯ ತಾಲೂಕು ಕೇಂದ್ರ ಎಂದು ಮಾನ್ಯತೆ ನೀಡುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.
ರು. 1.70 ಕೋಟಿ ವೆಚ್ಚದಲ್ಲಿ ಕೆರೆ ವಿಸ್ತೀರ್ಣ ಹೆಚ್ಚಿಸಿ ಶಾಶ್ವತ ಕುಡಿಯುವ ನೀರಿನ ಜಲ ಸಂಗ್ರಹಗಾರ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ  ಮಂಜೂರಾತಿ ನೀಡಿದೆ ಎಂದರು.
ಆರ್.ಎಚ್.ಕೋನರಡ್ಡಿ, ಪ್ರಕಾಶ ಅಂಗಡಿ, ಮಂಜುನಾಥ ಅಕ್ಕಿ, ಗ್ರಾ.ಪಂ. ಅಧ್ಯಕ್ಷೆ ಸಂಗವ್ವ ಬೆನಕೊಪ್ಪ, ಶಿವಾನಂದ ಭೂಮಣ್ಣವರ, ಹಳ್ಳಿಕೇರಿ ಗ್ರಾಪಂ ಸದಸ್ಯರು ಇದ್ದರು.
ನಾಗರಾಜ ಛಬ್ಬಿಗೆ ಸನ್ಮಾನ
ಅಣ್ಣಿಗೇರಿ: ಭದ್ರಾಪುರ ಗ್ರಾಪಂದಿಂದ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಛಬ್ಬಿ, ಅನುಷ್ಠಾನಗೊಳ್ಳುತ್ತಿರುವ ಸರ್ಕಾರದ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಸಕಾಲಕ್ಕೆ ಲಭಿಸುತ್ತಿಲ್ಲ ಎಂದರು. ಗ್ರಾಪಂ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.