ನಿರುದ್ಯೋಗ ನಿವಾರಣೆಗೆ ಸ್ವಉದ್ಯೋಗ
ಧಾರವಾಡ: ನೆಹರು ಯುವಕೇಂದ್ರ ಮತ್ತು ನಾಗರಿಕ ಮಿತ್ರ ಸಂಸ್ಥೆ ವತಿಯಿಂದ ಮೂರು ದಿನ ನಡೆದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಯಶಸ್ವಿಯಾಗಿ ಜರುಗಿತು.
ಜಿಪಂ ಯೋಜನಾ ನಿರ್ದೇಶಕ ಎಂ.ಜಿ. ಕುಲಕರ್ಣಿ ಮಾತನಾಡಿ, ಸರ್ಕಾರ ಯುವ ಜನತೆಯ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲೂ ಗ್ರಾಮೀಣ ಪ್ರದೇಶ ಯುವ ಸಮೂಹಕ್ಕಾಗಿ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಆದ್ದರಿಂದ ಯುವಕರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದರಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಸ್ವ ಉದ್ಯೋಗ ಕೈಗೊಳ್ಳುವ ಯುವಕರಿಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎಂ. ಮೀರಾನಾಯ್ಕ, ಪ್ರತಿಯೊಬ್ಬರಲ್ಲಿ ನಾಯಕತ್ವ ಗುಣಗಳಿರಬೇಕು. ನಾಯಕತ್ವ ಬೆಳೆಸಿಕೊಳ್ಳಲು ಮುಖ್ಯವಾಗಿ ಜ್ಞಾನ ಮತ್ತು ಕೌಶಲ್ಯ ಅವಶ್ಯವಾಗಿರಬೇಕು. ಸರ್ಕಾರಿ ಉದ್ಯೋಗಕ್ಕೆ ಹಂಬಲಿಸುವುದಕ್ಕಿಂತ ಸ್ವ- ಉದ್ಯೋಗಿಗಳಾಗಲು ಅನೇಕ ಅವಕಾಶಗಳಿವೆ ಎಂದರು.
ಯುವ ಕೇಂದ್ರದ ಅಧಿಕಾರಿ ಎ.ಜಿ. ಪೌರಾಣಿಕ ಮಾತನಾಡಿದರು. ಪ್ರಕಾಶ ಇನಾಮದಾರ, ಎಸ್.ಎಂ. ಮುಲ್ಲಾ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

