17ರಿಂದ ಧಾರವಾಡ ಸಾಹಿತ್ಯ ಸಂಭ್ರಮ: ಗಿರಡ್ಡಿ
ಧಾರವಾಡ: ಸಾಹಿತ್ಯ ಸಮಾರಂಭಗಳಲ್ಲಿಯೇ ಭಿನ್ನವಾಗಿ ಗುರುತಿಸಿಕೊಂಡಿರುವ ಧಾರವಾಡ ಸಾಹಿತ್ಯ ಸಂಭ್ರಮವು ಜ. 17 ರಿಂದ 19ರವರೆಗೆ ನಡೆಯಲಿದ್ದು, ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ ಚಾಲನೆ ನೀಡಲಿದ್ದಾರೆ.
ನಗರದ ಮನೋಹರ ಗ್ರಂಥಮಾಲೆ ಅಟ್ಟದ ಮೇಲೆ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಅವರು, 'ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಜ.17ರ ಬೆಳಗ್ಗೆ 11ರಿಂದ ಆರಂಭವಾಗುವ ಈ ಸಂಭ್ರಮದ ಕುರಿತು ಆಶಯ ಭಾಷಣವನ್ನು ಸಿ.ಎನ್. ರಾಮಚಂದ್ರನ್ ಅವರು ಮಾಡಲಿದ್ದಾರೆ. ಮೂರು ದಿನ ಒಟ್ಟು 21 ವಿವಿಧ ಗೋಷ್ಠಿಗಳು, 90 ಸಂಪನ್ಮೂಲ ವ್ಯಕ್ತಿಗಳು, ರಾಜ್ಯ ಮತ್ತು ಹೊರರಾಜ್ಯದ 50 ವಿಶೇಷ ಆಹ್ವಾನಿತರು ಅಲ್ಲದೇ, ಸ್ಥಳೀಯ ಸುಮಾರು 60 ಆಹ್ವಾನಿತರು ಭಾಗವಹಿಸಲಿದ್ದಾರೆ' ಎಂದರು.
ಎಸ್.ಎಲ್. ಭೈರಪ್ಪರೊಂದಿಗೆ ಸಂವಾದ: ಕೊನೆಯ ದಿನ ಜ.19ರ ಬೆಳಗ್ಗೆ 10ರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಗೋಷ್ಠಿ ನಂತರ ಹಳೆಗನ್ನಡ ಕಾವ್ಯದ ಓದು ಏತಕ್ಕೆ ಬೇಕು? ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ ನಡೆಯಲಿದೆ. ಊಟದ ನಂತರ ಟಿ.ವಿ. ವೆಂಕಟಾಚಲಶಾಸ್ತ್ರಿ, ಸಿದ್ದಲಿಂಗಯ್ಯ, ರಮಾಕಾಂತ ಜೋಶಿ ಮತ್ತಿತರರು ಸಾಹಿತ್ಯಿಕ ಪ್ರಸಂಗಗಳನ್ನು ಮೆಲಕು ಹಾಕುತ್ತಾರೆ. ನಂತರ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರೊಂದಿಗೆ ಸಾಹಿತಿಯೊಂದಿಗೆ ಸಂಜೆ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಸಮಾರೋಪ ನಡೆಯಲಿದೆ. ಎಸ್.ಎಲ್. ಭೈರಪ್ಪ, ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ.ಎ. ವಿವೇಕ ರೈ ಭಾಗವಹಿಸುತ್ತಾರೆ. ತದನಂತರ ಗಿರೀಶ ಕಾಸರವಳ್ಳಿ ನಿರ್ದೇಶನದ ಯು.ಆರ್. ಅನಂತಮೂರ್ತಿ ಅವರ ಸಾಕ್ಷ್ಯಚಿತ್ರ ಮೂಡಿ ಬರಲಿದೆ ಎಂದು ವಿಸ್ತ್ರತ ಮಾಹಿತಿ ಒದಗಿಸಿದರು.
ಸುದ್ದಿಗೋಷ್ಠಿ ಯಲ್ಲಿ ನಾಡೋಜ ಡಾ. ಚೆನ್ನವೀರ ಕಣವಿ, ರಮಾಕಾಂತ ಜೋಶಿ, ಹ.ವೆಂ. ಕಾಖಂಡಕಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

