ಸುದ್ದಿ ಸಂಕ್ಷೇಪ
ಸ್ವಾಮಿ ವಿವೇಕಾನಂದ ಮಹಾನ್ ದೇಶಭಕ್ತ
ಧಾರವಾಡ: ವಿವೇಕಾನಂದರು ಹಿಂದೂ ಸಂಸ್ಕೃತಿ ಹಾಗೂ ನಾಗರಿಕತೆಯ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ದೇಶ ಭಕ್ತ ಎಂದು ಶಿಕ್ಷಕ ವೀರಣ್ಣ ಒಡ್ಡೀನ್ ಹೇಳಿದರು.
ತಾಲೂಕಿನ ಸೋಮಾಪುರದ ಭಾರತಿ ವಿಶ್ವ ಸೇವಾ ಸದನ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿವೇಕಾನಂದರಲ್ಲಿ ಅಪರಿಮಿತ ವಾಕ್ಚಾತುರ್ಯ ಹಾಗೂ ಅಧ್ಯಾತ್ಮ ನಿಷ್ಠೆ ಇತ್ತು. ಪಾಶ್ಚಾತ್ಯ ರಾಷ್ಟ್ರಗಳ ಭೌತಿಕ ಸಂಪತ್ತಿಗಿಂತ ಭಾರತೀಯ ಆಧ್ಯಾತ್ಮಿಕ ಸಂಪತ್ತು ಅಗಾಧವಾಗಿದೆ ಎಂದರು.
ಎಸ್.ಜಿ. ಕಾಳೆ ಮಾತನಾಡಿ ವಿವೇಕಾನಂದರು ಭಾರತೀಯರು ತಮ್ಮ ದೇಶವನ್ನು ಹೇಗೆ ಪ್ರೀತಿಸಬೇಕು, ದೇಶಕ್ಕಾಗಿ ಹೇಗೆ ಕೆಲಸ ಮಾಡಬೇಕೆ ಎನ್ನುವುದನ್ನು ಕಲಿಸಿದರು. ಭಾರತೀಯರಲ್ಲಿ ಭಾರತೀಯತೆಯನ್ನು ಉಳಿಸಿ, ಬೆಳೆಸಿದ ಪುಣ್ಯ ಜೀವಿ ಎಂದರು. ಮುಖ್ಯಾಧ್ಯಾಪಕಿ ಗೀತಾ ರುಬ್ದಿ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಪಾಟೀಲ, ಜಿ.ಎಂ. ನಿಡಗುಂದಿ, ಎಸ್.ಬಿ. ಕೆಂಗಾರ, ನಿರೂಪಾ ಪಾಟೀಲ, ಪ್ರಭಾವತಿ ಪಾಟೀಲ ಇದ್ದರು. ಗೀತಾ ಹಿರೇಮಠ ಸ್ವಾಗತಿಸಿದರು. ಜ್ಯೋತಿ ಉಳ್ಳಾಗಡ್ಡಿ ನಿರೂಪಿಸಿದರು. ಲಕ್ಷ್ಮೀ ಅಣ್ಣೀಗೇರಿ ವಂದಿಸಿದರು.
ಶಿಕ್ಷಕೇತರ ಸಿಬ್ಬಂದಿ ತರಬೇತಿ ಮುಕ್ತಾಯ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ಶಿಕ್ಷಕೇತರ ಸಿಬ್ಬಂದಿ ತರಬೇತಿ ಈಚೆಗೆ ಮುಕ್ತಾಯವಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಂದ ಆಗಮಿಸಿದ್ದ 50 ಶಿಬಿರಾರ್ಥಿಗಳು ತರಬೇತಿ ಪಡೆದರು. ಕವಿವಿ ಕುಲಸಚಿವ ಪ್ರೊ. ಚಂದ್ರಮಾ ಕಣಗಲಿ, ಶಿಕ್ಷಕೇತರ ಸಿಬ್ಬಂದಿ ವಿಶ್ವವಿದ್ಯಾಲಯದ ಬುನಾದಿ. ವಿಶ್ವವಿದ್ಯಾಲಯದಂತಹ ಒಂದು ಸಂಸ್ಥೆ ನಡೆಯಲು ಶಿಕ್ಷಕರು, ವಿದ್ಯಾರ್ಥಿಗಳು ಎಷ್ಟು ಮುಖ್ಯವೋ ಅದೇ ರೀತಿ ಶಿಕ್ಷಕೇತರ ಸಿಬ್ಬಂದಿ ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ನೀಡುವ ತರಬೇತಿಯನ್ನು ಇಂತಹ ಶಿಬಿರಗಳ ಮೂಲಕ ಶಿಕ್ಷಕೇತರ ಸಿಬ್ಬಂದಿಗೂ ನೀಡಿದರೆ ವಿಶ್ವವಿದ್ಯಾಲಯದ ಬೆಳವಣಿಗೆ ಸಾಧ್ಯ ಎಂದರು. ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ಪ್ರಭಾರಿ ನಿರ್ದೇಶಕ ಪ್ರೊ. ಆರ್. ನಜೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಚ್. ಚಲವಾದಿ, ಜಿ.ಎಸ್. ಮುರಗೋಡ, ಎಸ್.ವಿ. ಹೊಂಡಪ್ಪನವರ, ಎ.ಎನ್. ಬಡಿಗೇರ, ಎಂ.ಬಿ. ಮುದಕೆ, ಎಂ.ಬಿ. ಮುದಕೆ, ಸೋಮಶೇಖರ ಹೊನಕೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

