ಧಾರವಾಡ

ನಾಲ್ವರ ಜೀವ ಉಳಿಸಿದ ಯುವಕನ ಸಮಯ ಪ್ರಜ್ಞೆ

Published On :

ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ನಿರಂತರ ವಿದ್ಯುತ್ ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಹರಿದು ಪ್ರಾಣಾಪಾಯಕ್ಕೆ ಸಿಲುಕಿದ್ದ ನಾಲ್ವರು ಬಿಹಾರಿಗಳು ಗ್ರಾಮದ ಯುವಕನೊಬ್ಬನ ಸಮಯಪ್ರಜ್ಞೆಯಿಂದ ಬದುಕಿದ್ದಾರೆ.
ತಾಲೂಕಿನ ಗುಡಗೇರಿ ಸೇರಿದಂತೆ ಎಂಟು ಗ್ರಾಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು, ಗೌಡಗೇರಿ ತಾಂಡಾದ ಬಸವರಾಜ ಶಿಗ್ಲಿ ಎನ್ನುವವರ ಮನೆ ಬಳಿಯ ವಿದ್ಯುತ್ ಕಂಬದ ಮೇಲೆ ಹೊಸ ತಂತಿ ಎಳೆಯುತ್ತಿರುವ ಸಂದರ್ಭದಲ್ಲಿ ಹಳೇ ತಂತಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಹರಿಯಲು ಆರಂಭಿಸಿದೆ. ಈ ಸಂದರ್ಭದಲ್ಲಿ ಕಂಬದ ಮೇಲೆ ಕುಳಿತು ತಂತಿ ಎಳೆಯುತ್ತಿದ್ದ ಬಿಹಾರ ಮೂಲದ ನಾಲ್ವರು ಕಾರ್ಮಿಕರು ವಿದ್ಯುತ್ ಹರಿಯುತ್ತಿರುವುದನ್ನು ಗಮನಿಸಿ ಜೀವ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಂಬದ ಕೆಳಗೆ ನಿಂತಿದ್ದ ರಮೇಶ ಲಚ್ಚಪ್ಪ ಲಮಾಣಿ, ಸಂಶಿ ವಿದ್ಯುತ್ ಸರಬರಾಜು ವಿಭಾಗಕ್ಕೆ ತಕ್ಷಣ ಕರೆ ಮಾಡಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವಂತೆ ಮಾಡಿದ್ದಾರೆ.
ನಿರಂತರ ವಿದ್ಯುತ್ ಪೂರೈಕೆ ಯೋಜನೆ ಕಾಮಗಾರಿ ಆರಂಭವಾಗಿರುವುದರಿಂದ ಈ ಪ್ರದೇಶದಲ್ಲಿ ಸಂಜೆ 6ಕ್ಕೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಬುಧವಾರ ಬಿಹಾರ ಮೂಲದ ಯೋಗೇಶ, ಕಾರ್ತಿಕ, ಬಷೀರ್ ಹಾಗೂ ಶಿವಾಜಿ ತುಕಾರಾಂ ಅವರು ಸಂಜೆ ಆರು ಗಂಟೆ ಆಗಿರುವುದನ್ನು ಗಮನಿಸದೇ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಹೆಸ್ಕಾಂನವರು ಆರು ಗಂಟೆಯಾಗುತ್ತಲೇ ವಿದ್ಯುತ್ ಪೂರೈಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.