ಧಾರವಾಡ

ಸರ್ಕಾರದಿಂದ ಸುಳ್ಳು ಭರವಸೆ: ಅಕ್ಕಿ

Published On :

ಕುಂದಗೋಳ: ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 8 ತಿಂಗಳುಗಳೇ ಗತಿಸುತ್ತ ಬಂದರೂ ಶ್ರೀಸಾಮಾನ್ಯರಿಗೆ ಅನುಕೂಲವಾಗುವ ಒಂದೇ ಒಂದು ಯೋಜನೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಮಾಜಿ ಶಾಸಕ ಎಂ.ಎಸ್. ಅಕ್ಕಿ ಆರೋಪಿಸಿದರು.
ಅಕ್ಕಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಸಂಶಿ ಗ್ರಾಮದಲ್ಲಿ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಿನಕ್ಕೊಂದು ಸುಳ್ಳು ಭರವಸೆ ನೀಡುತ್ತ ಶ್ರೀಸಾಮಾನ್ಯರನ್ನು ದಾರಿ ತಪ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ದೂರಿದ ಅವರು, ಜೆಡಿಎಸ್ ಸರ್ಕಾರದಲ್ಲಿ ಅವಧಿಯಲ್ಲಿ ಜಾರಿಗೆ ತರಲಾದ ವಿವಿಧ ಜನೋಪಯೋಗಿ ಯೋಜನೆಗಳ ಬಗ್ಗೆಯೂ ಮಾಜಿ ಶಾಸಕ ಅಕ್ಕಿ ಪಟ್ಟಿ ಮಾಡಿದರು. ಗ್ರಾಮ ಘಟಕ ಅಧ್ಯಕ್ಷ ಶಿವಪ್ಪ ಬ್ಯಾಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್.ಬಿ. ಪಾಟೀಲ, ಉಮೇಶ ಮುಳ್ಳೊಳ್ಳಿ, ಈಶ್ವರಗೌಡ ತೆಂಬದಮನಿ, ಶಿವನಗೌಡ ಶ್ಯಾನವಾಡ, ಆರ್.ಬಿ. ಗಾಣಿಗೇರ ಮಾತನಾಡಿದರು. ಮಲ್ಲಿಕಾರ್ಜುನ ಕಿರೇಸೂರ, ಎಸ್.ಟಿ. ಹಿರೇಗೌಡ್ರ, ಎಸ್.ಎಫ್. ನಿರಂಜನಗೌಡ, ಶಂಕರಗೌಡ ದೊಡಮನಿ, ಎಂ.ಎಸ್. ಮಾದನೂರ, ಡಿ.ಬಿ. ಪಾಟೀಲ, ವೀರನಗೌಡ ಮುದ್ದಿಬಣ, ಶರಣಪ್ಪ ಬೂದಿಹಾಳ ಮತ್ತಿತರರಿದ್ದರು. ಶೇಖಪ್ಪ ಹರಕೂಣಿ ನಿರೂಪಿಸಿದರು. ಬಸಲಿಂಗಪ್ಪ ಕೋರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.