ಸರ್ದಾರ್ ಪಟೇಲರ ಪ್ರತಿಮೆಗೆ ಲೋಹ ಸಂಗ್ರಹ
ಧಾರವಾಡ: ಸರ್ದಾರ್ ವಲ್ಲಭಭಾಯಿ ಪಟೇಲರ ವಿಶ್ವದ ಅತಿ ಎತ್ತರದ ಪ್ರತಿಮೆ ಮಾಡಲು ಹಮ್ಮಿಕೊಳ್ಳಲಾದ ಲೋಹ ಮತ್ತು ಮಣ್ಣಿನ ಸಂಗ್ರಹಣೆಗೆ ಸಮೀಪದ ನವಲೂರ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಚಾಲನೆ ನೀಡಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಕನಸಾದ ಉಕ್ಕಿನ ಮನುಷ್ಯನೆಂದೇ ಖ್ಯಾತಿ ಹೊಂದಿದ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆ ನಿರ್ಮಾಣಕ್ಕಾಗಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರವರ ಕಂಡಂತಹ ಏಕ ಭಾರತ ಕನಸು ನನಸಾಗಿಸುವ ನಿಟ್ಟಿನಲ್ಲಿ ಅವರ ಪ್ರತಿಮೆಯನ್ನು ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಥಾಪನೆ ಮಾಡಲು ದೇಶಾದ್ಯಂತ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ ಕನಸಾದ ಏಕ್ ಭಾರತ ಎಂಬ ನುಡಿ ಸಾಕಾರಗೊಳಿಸುವ ಉದ್ದೇಶದಿಂದ ಅವರ ಪ್ರತಿಮ್ನೆ ನಿರ್ಮಾಣಕ್ಕಾಗಿ, ಭಾರತದ ಏಕತೆಗಾಗಿ ಪ್ರತಿ ಊರಿನಿಂದ ಲೋಹ ಮತ್ತು ಪವಿತ್ರ ಮಣ್ಣು ಸಂಗ್ರಹಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.
ಲೋಹ ಸಂಗ್ರಹ ಸಮಿತಿ ಪ್ರಭಾರಿಗಳಾದ ಶಶಿ ಕುಲಕರ್ಣಿ, ರೈತರಾದ ಯಲ್ಲಪ್ಪ ಅರವಾಳದ, ನಿಂಗಪ್ಪ ಮಾಯಣ್ಣವರ, ವೀರೂಪಾಕ್ಷಪ್ಪ ಪಾಣಿಗಟ್ಟಿ, ಶಿವಣ್ಣ ಕಟ್ಟಿ, ಗದಿಗೆಪ್ಪ ಕಟ್ಟಿ, ಬಿ.ಎಂ. ಬಳ್ಳೂರ, ಬಿ.ಎಸ್. ಪಾಟೀಲ, ಅಜ್ಜಪ್ಪ ಹೊರಕೇರಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಬಲರಾಮ ಕುಸುಗಲ್ಲ, ಶಂಕರ ಶೇಳಕೆ, ಬಸವರಾಜ ಮುತ್ತಳ್ಳಿ, ನಿರ್ಮಲಾ ಜವಳಿ, ಈರೇಶ ಸಂಗಳದ, ಮೋಹನ ರಾಮದುರ್ಗ, ಅರವಿಂದ ಅಲದಕಟ್ಟಿ, ಬಸವರಾಜ ಬೆಣ್ಣಿ, ಚಂದ್ರಶೇಖರ ಮನಗುಂಡಿ ಹಾಜರಿದ್ದರು. ಶಿವಣ್ಣ ಬದವಣ್ಣವರ ಸ್ವಾಗತಿಸಿದರು. ಎಸ್.ಜಿ. ಹಿರೇಮಠ ನಿರೂಪಿಸಿದರು. ಮಾದೇವ ಶಿವಳ್ಳಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

