27ಕ್ಕೆ ಪರಿಸರ ಪರಿಸ್ಥಿತಿ ಅಧ್ಯಯನ ಶಿಬಿರ
ಹುಬ್ಬಳ್ಳಿ: ಗಣಿಗಾರಿಕೆಯಿಂದ ಪರಿಸರ ಅವಘಡಕ್ಕೆ ತುತ್ತಾಗಿದ್ದ ಕಾಳಿ ನದಿ ಕಣಿವೆಯ ಬಿಸಗೋಡನಲ್ಲಿ ಜ. 27ರಂದು ರಾಜ್ಯಮಟ್ಟದ ಪರಿಸರ ಪರಿಸ್ಥಿತಿ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ, ಸ್ವದೇಶಿ ಜಾಗರಣ ಮಂಚ್ನ ರಾಷ್ಟ್ರೀಯ ಸಂಚಾಲಕ ಪ್ರೊ. ಬಿ.ಎಂ. ಕುಮಾರಸ್ವಾಮಿ, ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ಅರಣ್ಯ ವಿಜ್ಞಾನಿ ಡಾ. ವಾಸುದೇವ, ವನ್ಯಜೀವಿ ತಜ್ಞ ಡಾ. ಬಾಲಚಂದ್ರ ಸಾಯಿಮನೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಳಿ ಕಣಿವೆಯ ಕರ್ಕಿನಬೈಲು ಹಾಗೂ ಗೇರಾಳ ಗ್ರಾಮ ಅರಣ್ಯ ಸಮಿತಿ, ವೃಕ್ಷಲಕ್ಷ ಆಂದೋಲನಗಳ ಸಂಯುಕ್ತಾಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿದೆ. 90ರ ದಶಕದಲ್ಲಿ ಬಿಸಗೋಡ ಪ್ರದೇಶದಲ್ಲಿ ಗಣಿಗಾರಿಕೆಯಿಂದಾಗಿಲ ಸಾವಿರಾರು ಎಕರೆ ಅರಣ್ಯ ನಾಶವಾಗಿತ್ತು. ರೈತರು ಐದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ್ದರು ಎಂದರು.
ಈ ಪ್ರದೇಶದಲ್ಲಿ ನಡೆದ ವನೀಕರಣ, ಜಲಮೂಲಗಳ ಸ್ಥಿತಿಗತಿಗಳ ಅಭ್ಯಾಸ ಮಾಡಿ ಮುಂದಿನ ಕ್ರಮಗಳ ಬಗ್ಗೆ ತಜ್ಞರ ಅಭಿಪ್ರಾಯ ಮಂಡನೆ, ರೈತರ ಜೊತೆ ಸಂವಾದ ಮತ್ತಿತರ ಚಟುವಟಿಕೆ ಈ ವೇಳೆ ನಡೆಯಲಿವೆ. ಕಾಳಿ ಕಣಿವೆಯ ಚಕ್ರಬೈಲ್ ಎಂಬಲ್ಲಿ ಪರಿಸರ ಅಧ್ಯಯನ ಶಿಬಿರ ನಡೆಯಲಿದೆ. ಬಿಸಗೋಡ ಕಲಿಸಿದ ಪರಿಸರ ಪಾಠದ ಬಗ್ಗೆ ವಿಶೇಷ ವಾರ್ತಾಪತ್ರ ಬಿಡುಗಡೆ ಆಗಲಿದೆ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಅಧ್ಯಯನ ವರದಿಯೂ ಬಿಡುಗಡೆ ಆಗಲಿದೆ ಎಂದರು.
ಪರಿಸರವಾದಿ ಶಾಂತಾರಾಮ ಸಿದ್ದಿ ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

