ಕಥೆಗಳಿಂದ ಮಕ್ಕಳಿಗೆ ಕಲಿಸಿ: ಡಾ. ಕಂಬಾರ
ಅಣ್ಣಿಗೇರಿ: ಮಕ್ಕಳಲ್ಲಿ ಪ್ರಶ್ನಿಸುವ ಸ್ವಭಾವ, ಪ್ರಾಮಾಣಿಕತೆ, ನೈತಿಕತೆ, ಸೃಜನಶೀಲತೆ ಬೆಳೆಸುವ ಬಹುದೊಡ್ಡ ಶಕ್ತಿ ಕಥೆಗಳಲ್ಲಿದ್ದು ಮಕ್ಕಳಿಗೆ ಕಥೆಗಳ ಮೂಲಕ ಕಲಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು. ಅಣ್ಣಿಗೇರಿಯ ನಿಂಗಮ್ಮ ಹೂಗಾರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಥೆ ಹೇಳುವುದು ಒಂದು ಕಲೆ, ನಾವು ಕಥೆ ಕೇಳುತ್ತ ಬೆಳೆದವರು ವಾರಕ್ಕೆ ಎರಡು ಪಾಠದ ಅವಧಿಗಳನ್ನಾದರೂ ಕಥೆ ಹೇಳಲು ಮೀಸಲಿಡಬೇಕು. ಹಂಚಿ ತಿನ್ನ್ನುವುದೇ ಮನೆತನ, ಚಿನ್ನ್ನ ಬೆನ್ನ್ನತ್ತಿದರೆ ನಾಶ ಎಂಬ ನೀತಿ ಕಥೆಯೊಂದನ್ನು ಈ ಸಂದರ್ಭ ಅವರು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಂಬೇಡ್ಕರ ಅವಮಾನದಿಂದಾಗಿ ಸ್ವಾಭಿಮಾನಿಯಾದರೆ, ಕೆಣಕು ಮಾತಿನಿಂದಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕವಿಯಾದರು ಎಂದರು. ಪ್ರೊ. ಚಂದ್ರಶೇಖರ ವಸ್ತ್ರದ ಅಭಿನಂದನಾ ಭಾಷಣ ಮಾಡಿದರು. ಶಾಸಕ ಎನ್. ಎಚ್. ಕೋನರಡ್ಡಿ, ಮಲ್ಲಿಕಾರ್ಜುನ ಸುರಕೋಡ, ಪಿ.ಯು. ಅಂಗಡಿ, ಫರೀದಾ ತಹಸೀಲ್ದಾರ, ವೇದವತಿ ಕಟ್ಟಿ ಇದ್ದರು. ಎಸ್.ಎಸ್. ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಡಾ. ಚಂದ್ರಶೇಖರ ಕಂಬಾರ ಬರೆದ ಸಾವಿರದ ಶರಣು, ಶಿವಸ್ತುತಿ, ನೃತ್ಯರೂಪಕ, ಬೆಪ್ಪ ತಕ್ಕಡಿ ಬೋಳೇಶಂಕರ, ನಾಟಕವನ್ನ್ನು ಚಿದಾನಂದ ಕುಲಕರ್ಣಿ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಾಯಿತು. ಪ್ರಾಚಾರ್ಯ ಎಸ್. ಎಸ್. ಹರ್ಲಾಪುರ ಕೋರಿಕೆಗೆ ಡಾ. ಕಂಬಾರ ಬಿಸಿಲು ಕುದುರೆಯನ್ನೇರಿ ಹೋದ. . . . .ಹಾಡು ಹಾಡಿದರು.
ಚಕ್ಕಡಿಯಲ್ಲಿ ಬಂದರು ಕಂಬಾರರು
ಪಂಪನ ಜನ್ಮಸ್ಥಳ ಅಣ್ಣೆಗೇರಿಯಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರನ್ನು ಸಿಂಗರಿಸಿದ ಜೋಡೆತ್ತಿನ ಚಕ್ಕಡಿಯಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

