ಪ್ರಾಮಾಣಿಕತೆಗೆ ಗೌರವ ಕಡಿಮೆಯಾಗಿಲ್ಲ: ಸವದತ್ತಿ
ಧಾರವಾಡ: ಸಮಾಜದಲ್ಲೀಗ ಪ್ರಾಮಾಣಿಕತೆಗೆ ಬೆಲೆ ಕಡಿಮೆಯಾಗಿದೆಯೇ ಹೊರತು ಗೌರವ ಕಡಿಮೆಯಾಗಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ ಹೇಳಿದರು.
ಇಲ್ಲಿನ ಡಾ. ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ ಇತ್ತೀಚೆಗೆ ಧಾರವಾಡ ಕಟ್ಟೆ ಹಾಗೂ ನೀಲಪರ್ವತ ಪ್ರಕಾಶನ ಹಮ್ಮಿಕೊಂಡಿದ್ದ ಪ್ರೊ. ತೇಜಸ್ವಿ ಕಟ್ಟಿಮನಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಡತನ, ಗ್ರಾಮೀಣ ಹಿನ್ನೆಲೆಯವರು ಉನ್ನತ ಸ್ಥಾನಕ್ಕೆ ಹೋಗುವುದರಿಂದ ಅಭಿವೃದ್ಧಿ, ಸಾಮಾಜಿಕ ನ್ಯಾಯಗಳು ಸಾಧ್ಯ. ಅನುಭವಿ, ಉತ್ಸಾಹ ತುಂಬಿದ ಸಾಮಾಜಿಕ ಕಳಕಳಿಯ ಹಿನ್ನೆಲೆಯ ಕುಲಪತಿಗಳಿಂದ ಭಾರತದ ಉನ್ನತ ಶಿಕ್ಷಣಕ್ಕೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯಿಸಿದರು.
ಪ್ರೊ. ತೇಜಸ್ವಿ ಕಟ್ಟಿಮನಿ, ಅವರ ಪತ್ನಿ ಭಾರತಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ತೇಜಸ್ವಿ ಕಟ್ಟಿಮನಿ, ಈ ನಾಡಿನಲ್ಲಿ ಬಸವಣ್ಣ, ಅಂಬೇಡ್ಕರ್ ಬಿತ್ತಿದ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಸಾಮಾಜಿಕ ಕಳಕಳಿಯ ಬೀಜಗಳು ಇಂದು ಮೊಳಕೆಯೊಡೆದು ಬೆಳೆಯುತ್ತಿವೆ. ಇದಕ್ಕೆ ಉತ್ತಮ ಸಾಕ್ಷಿ ನಾನೇ. ಬಡತನ ಹಿನ್ನೆಲೆಯ ಗ್ರಾಮೀಣ ಭಾಗದ ನನ್ನಂತಹ ವ್ಯಕ್ತಿ ಇಂದು ವಿಶ್ವವಿದ್ಯಾಲಯದ ಕುಲಪತಿ ಮಟ್ಟಕ್ಕೆ ಬೆಳೆಯಲು ಶರಣರ, ಹಿರಿಯರ, ಸಾಮಾಜಿಕ ಹೋರಾಟಗಾರರ ಶ್ರಮವಿದೆ ಎಂದರು.
ಸರ್ಕಾರದ ಅನೇಕ ಯೋಜನೆಗಳು ಗುರಿ ತಲುಪದೆ ಸಾವಿರಾರು ಕೋಟಿ ಹಣವನ್ನು ಪೋಲು ಮಾಡುತ್ತಿವೆ. ಇವುಗಳ ಸರಿಯಾದ ಅನುಷ್ಠಾನಕ್ಕೆ ರಾಷ್ಟ್ರಾದ್ಯಂತ ಸ್ಥಾಪಿಸಲ್ಪಟ್ಟಿರುವ ರಾಜ್ಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ಯೋಜನಾ ಅನುಷ್ಠಾನದ ಕ್ರಮವನ್ನು, ಅದು ಉದ್ದೇಶಿತ ಗುರಿಯೆಡೆಗೆ ತಲುಪಿ ಸಾರ್ವಜನಿಕರಿಗೆ ಉಪಯುಕ್ತವಾಗುವಲ್ಲಿ ನೆರವಾಗಬೇಕು ಎಂದರು.
ಪ್ರೊ. ತೇಜಸ್ವಿ ಕಟ್ಟಿಮನಿ ಪ್ರತಿಷ್ಠಾನ ಅಧ್ಯಕ್ಷ ವಸಂತ ಲದ್ವಾ, ಪ್ರೊ. ರಂಗರಾಜ ವನದುರ್ಗ, ಪ್ರೊ. ವಿಜಯಕುಮಾರ ಕಟಗಿಹಳ್ಳಿಮಠ, ಪ್ರೊ. ಬಸವರಾಜ ಡೋಣೂರ, ಡಾ. ಶಿವಾನಂದ ಕೆಳಗಿನಮನಿ, ಡಾ. ಗಣೇಶ ಪವಾರ, ಡಾ. ಶಶಿಕಲಾ ನಿಂಗೋಡ್ತಿ, ಡಾ. ರೇಷ್ಮಾ ನದಾಫ್ ಅಭಿನಂದನಾಪರ, ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ. ಡಿ.ಎಂ. ಹಿರೇಮಠ ಮಾತನಾಡಿದರು.
ಪ್ರೊ. ಎಸ್.ಆರ್. ವೈದ್ಯ ಸ್ವಾಗತಿಸಿದರು. ಶಿವಾನಂದ ಕೋಳಿ ವಂದಿಸಿದರು. ಡಾ. ಶಶಿಧರ ನರೇಂದ್ರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

