ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಅಗತ್ಯ
ಧಾರವಾಡ: ಉನ್ನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಡಾ. ಬಿ.ಬಿ. ಕಲಿವಾಳ ಹೇಳಿದರು. ಇಲ್ಲಿಯ ಸಿಎಸ್‌ಐ ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಜರುಗಿದ ಭಾರತೀಯ ಚಿಲ್ಲರೆ ವ್ಯಾಪಾರ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ಸಂಗತಿ ಮತ್ತು ಸವಾಲುಗಳು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಕೇವಲ ವಿದ್ಯಾರ್ಥಿಗಳಿಗೆ ಪದವಿಗಳನ್ನ್ನು ನೀಡದೆ, ಅವರ ಅರ್ಹತೆಗೆ ತಕ್ಕಂತೆ ಉದ್ಯೋಗ್ನ ಸೃಷ್ಟಿಸಿ ಕೊಡುವತ್ತ ಹೆಚ್ಚಿನ ಗಮನಹರಿಸಬೇಕು. ಇಂದಿನ ಯುವಕರಿಗೆ ತಿಳಿಸಲೇಬೇಕಾದ ಕೆಲವು ಸಂಗತಿಗಳು ಪಠ್ಯದಲ್ಲಿ ಅಳವಡಿಸುವತ್ತ ಸರ್ಕಾರ ಚಿಂತಿಸಬೇಕಾಗಿದೆ. ಇಂದಿನ ಯುವಕರು ಪುಸ್ತಕಗಳಿಗಿಂತ ಜಾಲ ತಾಣಗಳನ್ನ್ನು ಹೆಚ್ಚಾಗಿ ಪ್ರೀತಿಸುತ್ತಿರುವುದು ದುರ್ದೈವ ಎಂದರು. ಕವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಜಿ. ಹುಂಡೇಕಾರ, ಭಾರತದಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ಧತಿ ಎಂದರು. ಈ ಸಂದರ್ಭದಲ್ಲಿ ಸಂಘಟಿತ ಮತ್ತು ಅಸಂಘಟಿತ ಚಿಲ್ಲರೆ ವ್ಯಾಪಾರ ವಲಯದ ಮೇಲೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಭಾವ, ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರ್ಕಾರದ ನೀತಿ ಹಾಗೂ ಭಾರತೀಯ ಚಿಲ್ಲರೆ ವ್ಯಾಪಾರ ವಲಯದ ಜಾಗತಿಕ ಭವಿತವ್ಯದ ನೋಟ ಎಂಬ ಮೂರು ವಿಷಯಗಳ ಮೇಲೆ ಘೋಷ್ಠಿ ಜರುಗಿದವು. ಡಾ. ಎಸ್.ವಿ. ಹೆಗಡಾಳ, ಡಾ. ಸಿ.ಎಂ. ಕಡಕೋಳ, ದೀಶಾ ದೇಶಪಾಂಡೆ, ಶ್ವೇತಾ ಹೆಗಡೆ, ಡಾ. ಕೆ.ವಿ. ಅಚಲಪತಿ, ಸುರೇಂದ್ರ ದಫೇದಾರ್, ಪ್ರೊ. ಬಿ.ಎಫ್. ಗಾಮನಗಟ್ಟಿ, ಡಾ. ಜಿ.ಟಿ. ಗೋವಿಂದಪ್ಪ, ಡಾ. ಪಿ.ಬಿ. ಕಲ್ಯಾಣಶೆಟ್ಟಿ, ಡಾ. ಎಸ್.ಎನ್. ಭಟ್, ಡಾ. ಎನ್.ಎಂ. ಮಕಾಂದಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

