ಮಧುಮೇಹ ಕುರಿತು ನಿರ್ಲಕ್ಷ್ಯ ಬೇಡ: ಹುಕ್ಕೇರಿ
ಧಾರವಾಡ: ಗ್ರಾಮೀಣ ಜನತೆ ಮಧುಮೇಹದ ಬಗ್ಗೆ ನಿರ್ಲಕ್ಷ್ಯ ತೋರದೆ ಅದರ ಬಗ್ಗೆ ಕಾಳಜಿ ವಹಿಸಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸ್ಪೈಸರ್ ಇಂಡಿಯಾ ಕಂಪನಿ ವ್ಯವಸ್ಥಾಪಕ ಸುರೇಶ ಹುಕ್ಕೇರಿ ಹೇಳಿದರು.
ಕಲಘಟಗಿ ತಾಲೂಕಿನ ಜಿ. ಬಸವನಕೊಪ್ಪ ಗ್ರಾಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಸ್ಪೈಸರ್ ಇಂಡಿಯಾ ಮತ್ತು ಎಸ್ ಡಿಎಂ ಆಸ್ಪತ್ರೆ ಸಹಯೋಗದಲ್ಲಿ ನಡೆದ ಸಕ್ಕರೆ ಕಾಯಿಲೆ ಹಾಗೂ ಅಕ್ಷಿ ಪಟಲ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಿಯಮಿತವಾಗಿ ಉತ್ತಮ ಆಹಾರ ಸೇವಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಶಾಖಾ ವ್ಯವಸ್ಥಾಪಕಿ ಸುಜಾತಾ ಅನಿಶೆಟ್ಟರ, ಸಕ್ಕರೆ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ತೋರಿದರೆ ದೃಷ್ಟಿ ದೋಷ ಸೇರಿದಂತೆ ಅನೇಕ ರೋಗ ರುಜಿನಗಳಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಜನರು ಸಕ್ಕರೆ ರೋಗ ಬರುವ ಮುನ್ನವೇ ನಿಯಂತ್ರಿಸುವುದು ಅಗತ್ಯ ಎಂದರು. ಈ ಸಂದರ್ಭದಲ್ಲಿನ ಗ್ರಾಮದ 60ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಯಿತು.
ಗ್ರಾಪಂ ಅಧ್ಯಕ್ಷ ಅಜ್ಜಪ್ಪ ಸುಳ್ಳದ, ಸ್ಪೈಸರ್ ಇಂಡಿಯಾದ ಶ್ರೀನಿವಾಸ ಆಚಾರ್ಯ, ಗುರುಪ್ರಸಾದ ಪಡಕೆ, ಸುನೀಲ ಕುಲಕರ್ಣಿ, ರುದ್ರೇಶ, ಗ್ರಾಮ ಪಂಚಾಯಿತಿ ಸದಸ್ಯ ಶಂಕರಗೌಡ ಪಾಟೀಲ, ವೈದ್ಯ ಡಾ. ದಿನೇಶ, ಡಾ. ಪ್ರೀತಿ ಇದ್ದರು. 90ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಯಿತು. ಸೌಮ್ಯಾ ನಾಯಕ ಸ್ವಾಗತಿಸಿದರು. ವಿನಯ ಬಡಿಗೇರ ವಂದಿಸಿದರು. ಪ್ರಕಾಶ ಜೋಡಳ್ಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

