ಧಾರವಾಡ

ದಲಿತ ಮುಖಂಡನ ಹತ್ಯೆ ಸಂಚು: ಆರೋಪಿಗಳ ಸೆರೆ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 14
ತಾಲೂಕಿನ ಪ್ರಭುನಗರ-ಹೊನ್ನಾಪುರ ಗ್ರಾಮದ ದಲಿತ ಮುಖಂಡರೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಐವರನ್ನು ಬಂಧಿಸಿದ್ದು ಶುಕ್ರವಾರ ಮತ್ತಿಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೊನ್ನಾಪುರ ಗ್ರಾಮದ ಪರಪ್ಪ ಉರ್ಫ್ ಪ್ರಭು ಕುಂಬಾರ, ಪರಪ್ಪ ಹುದ್ದಾರ, ಕೆಂಪಣ್ಣ ಪಾಟೀಲ, ಇಟಿಗಟ್ಟಿಯ ಪರಮೇಶ್ವರ ರೇವಡಿಹಾಳ, ಮಹಾಂತೇಶ ಪೂಜಾರ, ಕಂಬಾರಗಣವಿಯ ಕೇದಾರಪ್ಪ ಗಡ್ಡಿ ಮತ್ತು ಹೂವಪ್ಪ ಶಂಭುನವರ ಬಂಧಿತರು.
ಬಂಧಿತರಿಂದ ಹತ್ಯೆಗೆ ಬಳಸಲುದ್ದೇಶಿಸಿದ್ದ ಲಾರಿ ಮತ್ತು ಎರಡು ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಳೆಯ ವೈಷಮ್ಯದ ಕಾರಣದಿಂದ ಆರೋಪಿಗಳು ಪ್ರಭುನಗರ ಹೊನ್ನಾಪುರ ಗ್ರಾಮದ ದಲಿತ ಮುಖಂಡ ಬಿ.ಐ. ದೊಡಮನಿ ಅವರನ್ನು ಲಾರಿ ಹಾಯಿಸಿ ಹತ್ಯೆಗೈಯುವ ಸಂಚು ರೂಪಿಸಿದ್ದರು.
ಮಾ. 10ರಂದು ಬಿ.ಐ. ದೊಡಮನಿ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಲೋಕೇಶಕುಮಾರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.