ಧಾರವಾಡ

18ರಿಂದ ಕೃಷ್ಣಾನಂದ ಶ್ರೀಗಳ ಆರಾಧನೆ

Published On :

ಧಾರವಾಡ:  ಇಲ್ಲಿಯ ಕಲ್ಮೇಶ್ವರ ಮಂದಿರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಮಾ. 18ರಿಂದ 23ರ ವರೆಗೆ ಕೃಷ್ಣಾನಂದ ಸ್ವಾಮಿಗಳ ಆರಾಧನೆ  ನಡೆಯಲಿದೆ. ಪ್ರತಿದಿನ ಬೆಳಗ್ಗೆ  ವಿದ್ವಾನ ಜನಾರ್ದನ ಶಾಸ್ತ್ರಿಗಳಿಂದ ಶಾಂಕರ  ಪರಾಯಣ, ಶಂಕರಶರ್ಮಾ ಜಂತಲಿ ಹಾಗೂ ಮನೋಹರ ಭಟ್, ಹಂದಿಗೋಳ ಅವರಿಂದ ವೇದ ಪಾರಾಯಣ ಹಾಗೂ  ಸಂಜೆ 5ಕ್ಕೆ  ರಮೇಶ ಅವರಿಂದ ಪ್ರವಚನ ನಡೆಯಲಿದೆ. 18ರಂದು ಸಂಜೆ 6.30ಕ್ಕೆ ಗಣೇಶರಿಂದ  ಶ್ರೀ ಕೃಷ್ಣ ಲೀಲಾ ಪ್ರವಚನ ನಡೆಯಲಿದ್ದು, 19ರಂದು ಸಂಜೆ 4 ಕ್ಕೆ ಶಾರದಾ ಭಜನೆ ಮಂಡಳಿಯಿಂದ ಭಜನೆ, ಸಂಜೆ ಪ್ರವಚನ ನಡೆಯಲಿದೆ. 20ರಂದು ಸಂಜೆ 4ಕ್ಕೆ ಕಾತ್ಯಾಯನಿ ಭಜನೆ ಮಂಡಳದಿಂದ   ಕಾರ್ಯಕ್ರಮ ನಡೆಯಲಿದೆ. 21ರಂದು ಸಂಜೆ 4ಕ್ಕೆ ಹುಬ್ಬಳ್ಳಿಯ ಶಾರದಾ  ಭಜನಾ ಮಂಡಳಿಯಿಂದ ಭಾಗವತ್ ಪ್ರವಚನ ಆಯೋಜಿಸಲಾಗಿದೆ.  23 ರಂದು ಬೆಳಗ್ಗೆ ಮಹಾರುದ್ರಾಭಿಷೇಕ ಹಾಗೂ ಸಂಜೆ 7ಕ್ಕೆ ಶಂಕರ ಭಗವತ್ಪಾದರ ಹಾಗೂ ಶ್ರೀ ಕೃಷ್ಣಾನಂದರ ಮಹಾಸ್ವಾಮಿಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡ: ಪವಾರ ಪಕ್ಷೇತರ ಅಭ್ಯರ್ಥಿ
ಹುಬ್ಬಳ್ಳಿ: ಕ್ರಾಂತಿ ಸೇನಾದ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಸೇನಾದ ರಾಜ್ಯ ಉಪಾಧ್ಯಕ್ಷ ಸಂತೋಷ ಕಠಾರೆ, ಸಮಾಜದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ದೀನದಲಿತ ಮೇಲೆ ಅವ್ಯಾಹತವಾಗಿ ದೌರ್ಜನ್ಯಗಳು ನಡೆಯುತ್ತ ಸಾಗಿದ್ದರೂ ಈ ವರೆಗೂ ತಮ್ಮನ್ನಾಳಿದ ರಾಜಕೀಯ ಪಕ್ಷಗಳಿಂದ ಯಾವುದೇ ರೀತಿಯ ಪರಿಹಾರ ದೊರಕಿಲ್ಲ ಎಂದಿದ್ದಾರೆ. ಆದ್ದರಿಂದ ತುಳಿತಕ್ಕೊಳಗಾದ ಜನರನ್ನು ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲತೆ ತಂದುಕೊಡಬೇಕೆಂಬ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಪವಾರ ಧಾರವಾಡ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಚುನಾವಣೆಗೆ ಗಂಗಾಧರ ಬಡಿಗೇರ ಸ್ಪರ್ಧೆ
ಧಾರವಾಡ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಸ್ಟ್ ಪಕ್ಷದಿಂದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾರ್ಮಿಕ ಮುಖಂಡ, ಗಂಗಾಧರ ಬಡಿಗೇರ ಸ್ಪರ್ಧಿಸಲಿದ್ದಾರೆ.  ಪಕ್ಷದಿಂದ 16 ರಾಜ್ಯಗಳಲ್ಲಿ 83 ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಕರ್ನಾಟಕದ 6 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಲಿದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಗಂಗಾಧರ ಬಡಿಗೇರ ಮಾ. 16ರಂದು ನಾಮಪತ್ರ ಸಲ್ಲಿಸಲಿದ್ದಾರೆ  ಎಂದು ಪ್ರಕಟಣೆ ತಿಳಿಸಿದೆ.
ಬಿಜೆಪಿ ಕಾನೂನು ಘಟಕದ ಕಾರ್ಯಾಗಾರ
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ  ಕಾನೂನು ಹಾಗೂ ಸಂಸದೀಯ ಪ್ರಕೋಷ್ಠದ ಕಾರ್ಯಾಗಾರ ಶನಿವಾರ ದೇಶಪಾಂಡೆ ನಗರದ ಪಕ್ಷದ ಕಾರ್ಯಾಲಯದಲ್ಲಿ ಜರುಗಿತು. ರಾಜ್ಯ ಸಂಚಾಲಕ ವಿನೋದಕುಮಾರ ಹಾಗೂ ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಕಾರ್ಯಾಗಾರ ಉದ್ಘಾಟಿಸಿದರು. ಚುನಾವಣಾ ಸಂಯೋಜಕ ದತ್ತಗುರು ಹೆಗಡೆ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬೀಕಾಯಿ, ಲೋಕಸಭಾ ಚುನಾವಣೆಯ  ಮಾದರಿ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 150ಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿದ್ದರು. ರಾಜ್ಯ ಸಹ ಸಂಚಾಲಕ ಎಸ್.ಎಸ್. ಮಿಟ್ಟಲಕೋಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರು ಹಿರೇಮಠ, ಲಕ್ಷ್ಮಣ ಬೀಳಗಿ, ಶೈಲಾ ಅಂಕಲಗಿ, ಪೀರಾ ಹುಸೇನ್, ಎಚ್. ಹಾಲಸಿದ್ದಪ್ಪ, ಧಾರವಾಡ ಜಿಲ್ಲಾ ಸಂಚಾಲಕ ಮಂಜುನಾಥ ಗುಡಗೇರಿ, ಗ್ರಾಮೀಣ ಸಂಚಾಲಕ ಗುರುಪಾದ ಕರ್ಲಟ್ಟಿ ಇದ್ದರು. ಪ್ರಭು ಕಲ್ಲಯ್ಯನವರ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.