ಹೋಳಿ ಪ್ರಯುಕ್ತ ಖಾಕಿ ಬಲ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 18
ಸಮಾಜಘಾತಕರೇ, ಹೋಳಿ ಹಬ್ಬದ ಅಂಗವಾಗಿ ಮಾ. 20ರಂದು ಅವಳಿನಗರದಾದ್ಯಂತ ನಡೆಯಲಿರುವ ಬಣ್ಣದಾಟದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಹುಷಾರ..!
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ನಡೆಸಲಾದ ಪೊಲೀಸ್ ಪಥ ಸಂಚಲನ ಇಂತಹದೊಂದು ಅಘೋಷಿತ ಫರ್ಮಾನು ಸಾರಿದ ಅನುಭವ.
ಹೋಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಮಹಾನಗರ ಪೊಲೀಸ್ ಇಲಾಖೆ ಸರ್ವ ರೀತಿಯಲ್ಲಿಯೂ ಸಿದ್ಧವಾಗಿದೆ ಎಂಬುದಕ್ಕೆ ಬೃಹತ್ ಪೊಲೀಸ್ ಪಥ ಸಂಚಲನವೇ ಸಾಕ್ಷಿಯಾಗಿತ್ತು.
ನಾಗರಿಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 12 ತುಕಡಿ ಕೆಎಸ್ಆರ್ಪಿ, 7 ತುಕಡಿ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿ, 12 ಜನ ವಿಶೇಷ ಕಮಾಂಡೋಗಳು, 3 ಡಿಸಿಪಿ, 4 ಎಸಿಪಿ, 20 ಜನ ಇನ್ಸ್ಪೆಕ್ಟರ್, 25 ಜನ ಪಿಎಸ್ಐ, ಎಎಸ್ಐ, ಹವಾಲ್ದಾರ್, ಪೇದೆಗಳು ಸೇರಿದಂತೆ ಒಟ್ಟು 675 ಸಿಬ್ಬಂದಿ ಅತ್ಯಂತ ಅಚ್ಚುಕಟ್ಟಾಗಿ ಪಥ ಸಂಚಲನದಲ್ಲಿ ಸಾಗುವ ಮೂಲಕ ಸಮಾಜಘಾತಕರಲ್ಲಿ ನಡುಕು ಹುಟ್ಟಿಸಿದರು.
ಪ್ರಮುಖ ಪ್ರದೇಶಗಳಿವು: ಕಾರವಾರ ರಸ್ತೆಯ ಸಿಎಆರ್ ಮೈದಾನದಿಂದ ಶಸ್ತ್ರ ಸಜ್ಜಿತ ಸಿಬ್ಬಂದಿ ಗವಿಓಣಿ, ಚನ್ನಪೇಟ, ಹಳೆಹುಬ್ಬಳ್ಳಿ ದುರ್ಗದಬೈಲ್, ನ್ಯೂ ಇಂಗ್ಲಿಷ್ ಸ್ಕೂಲ್ ಸರ್ಕಲ್, ಕೌಲಪೇಟ, ಮುಲ್ಲಾನಓಣಿ, ಕಾಳಮ್ಮನಅಗಸಿ, ಮೈಸೂರು ಸ್ಟೋರ್ ಕ್ರಾಸ್, ದುರ್ಗದಬೈಲ್ ಸರ್ಕಲ್, ಶಿವಾಜಿ ಸರ್ಕಲ್, ಸಿಬಿಟಿ, ತುಳಜಾಭವಾನಿ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಿತ್ತೂರ ಚೆನ್ನಮ್ಮ ಮೈದಾನ ತಲುಪಿತು.
ವಾಹನಗಳೊಂದಿಗೆ: ನಂತರ, ವಾಹನಗಳೊಂದಿಗೆ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಡುವ ನೇಕಾರನಗರ, ಟಿಪ್ಪುನಗರ, ಹಳೆಹುಬ್ಬಳ್ಳಿ, ತಾಡಪತ್ರಿಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿ ಸಿಆರ್ಎ ಮೈದಾನ ತಲುಪಿತು.
ಡಿಸಿಪಿಗಳಾದ ಸುಭಾಷ ಗುಡಿಮನಿ, ಎ.ಎಸ್. ಘೋರಿ, ಎಸಿಪಿಗಳಾದ ನಾರಾಯಣ ಬಿರ್ಜೆ, ಎ.ಆರ್. ಬಡಿಗೇರ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಪಥ ಸಂಚಲನದ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

