ಧಾರವಾಡ

ಮೇ 16ಕ್ಕೆ ಗೆಲುವಿನ ಹೋಳಿ: ಜೋಶಿ

Published On :

ಹುಬ್ಬಳ್ಳಿ: ಎದುರಾಳಿಯ ಸಾಮರ್ಥ್ಯ ನೋಡಿ ನಾನು ಚುನಾವಣೆ ಎದುರಿಸುತ್ತಿಲ್ಲ. ಮೋದಿ ಅಲೆ, ಎರಡು ಅವಧಿಯಲ್ಲಿ ಸಂಸದನಾಗಿ ಮಾಡಿದ ಜನಪರ ಕೆಲಸಗಳ ಮೇಲೆ ವಿಶ್ವಾಸ ಇರಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು. ಗುರುವಾರ ಹುಬ್ಬಳ್ಳಿಯ ಪಕ್ಷದ ಕಚೇರಿಯಲ್ಲಿ ರಂಗಪಂಚಮಿ ಆಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕೆಲಸ ಮತ್ತು ಮೋದಿ ಅಲೆ ಮೇಲೆ ಚುನಾವಣೆಯಲ್ಲಿ ನನ್ನ ಗೆಲವು ನಿಶ್ಚಿತ. ದೇಶ, ರಾಜ್ಯ ಮತ್ತು ಹುಬ್ಬಳ್ಳಿ -ಧಾರವಾಡ ನಗರಗಳಲ್ಲಿ ಮೇ 16ರಂದು ಮತ್ತೊಮ್ಮೆ ರಂಗಿನಾಟ ಆಡುವ ಮೂಲಕ ಪಕ್ಷದ ವಿಜಯೋತ್ಸವ ಅಚರಿಸುತ್ತೇವೆ ಎಂದು ಹೇಳಿದರು. ಪಕ್ಷದ ಸ್ಥಳೀಯ ಮುಖಂಡರಾದ ರಂಗಾ ಬದ್ದಿ, ವಕ್ತಾರ ವೀರೇಶ ಸಂಗಳದ ಇದ್ದರು.
ಮತದಾರರ ಜಾಗೃತಿ ಕಾರ್ಯಾಗಾರ
ಧಾರವಾಡ: ಜಿಲ್ಲೆಯ ಸಾಕ್ಷರ ದೀಪ ಸಮಿತಿಯ ವತಿಯಿಂದ ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕುಗಳಲ್ಲಿನ ಸಂಪರ್ಕ ವ್ಯಕ್ತಿಗಳ ಹಾಗೂ ಮುಖ್ಯ ತರಬೇತಿದಾರರ ಒಂದು ದಿನದ ಸಾಕ್ಷರತಾ ತರಬೇತಿ ಕಾರ್ಯಕ್ರಮವನ್ನು ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದ ಜ್ಯೋತಿರ್ಲಿಂಗ ದೇವಸ್ಧಾನದಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಚುಣಾವಣೆ ಸ್ವೀಪ್ ಸಮಿತಿಯ ಸದಸ್ಯ ಎನ್.ಐ. ಸುಣಗಾರ  ಮಾತನಾಡಿ, ಏ. 17ರಂದು ನಡೆಯುವ ಲೋಕಸಭೆ ಚುಣಾವಣೆಯಲ್ಲಿ ಪ್ರತಿಯೊಬ್ಬ ನಾಗರಿಕ ಮತದಾನ ಮಾಡಬೇಕು ಎಂದರು. ಮತದಾನದ ಅವಶ್ಯಕತೆ, ಮತದಾರರ ಕರ್ತವ್ಯ ಹಾಗೂ ಹಕ್ಕಿನ ಕುರಿತಾಗಿ ಮೂರೂ ತಾಲೂಕುಗಳ ಶಿಬಿರಾರ್ಥ್ಥಿಗಳಿಗೆ ಉಪನ್ಯಾಸ ನೀಡಿದ ಅವರು, ತಮ್ಮ ವ್ಯಾಪ್ತಿಯಲ್ಲಿ ಬರುವ 570 ಸ್ವಯಂ ಸೇವಕರಿಗೆ ಮತದಾನ ನಿಮ್ಮ ಹಕ್ಕು, ನಿಮ್ಮ ಧ್ವನಿ, ನಿಮ್ಮ ಕರ್ತವ್ಯವಾಗಲಿ ಎಂಬ ಕರಪತ್ರಗಳನ್ನು ನೀಡಿದರು. ಮತದಾನ ಜಾಗೃತಿ ಕುರಿತು ಉಪನ್ಯಾಸ ಹಾಗೂ ಜಾಗೃತಿ ಕುರಿತು ಹಾಡುಗಳು ಈ ಸಂದರ್ಭದಲ್ಲಿ ಪ್ರಸ್ತುತಗೊಂಡವು. ಸಾಕ್ಷರತಾ ಕಲಾ ತಂಡದವರಾದ ಎಫ್.ಬಿ. ಕಣವಿ, ಸಿ.ಎಂ ಕೆಂಗಾರ, ಎಂ.ಆರ್.ಪಾಲ್ತಿ, ಮಂಜು ಪಾಟೀಲ, ಮಂಜು ವಾಲಿಕಾರ, ಜಿ.ವೈ. ಪಡಸುಣಗಿ, ಹುಣಸಿಮರದ, ಎಸ್.ಆರ್. ರಾಚಣ್ಣವರ, ಕೆ.ಜಿ ಗುಡಿಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.