ಇಂದು ಬಿಜೆಪಿ ಕಚೇರಿ ಉದ್ಘಾಟನೆ
ಕಲಘಟಗಿ: ಪಟ್ಟಣದ ಸೆಂಟ್ರಲ್ ಬ್ಯಾಂಕ್ ಎದುರಿನಲ್ಲಿ ಬಿಜೆಪಿ ನೂತನ ಕಾರ್ಯಾಲಯ ಮಾ. 22ರಂದು ಮಧ್ಯಾಹ್ನ 2ಕ್ಕೆ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಗಂಟೆಗೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಬಿಜೆಪಿ ಹಿರಿಯ ಧುರೀಣ ಸಿ.ಎಂ. ನಿಂಬಣ್ಣವರ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ತಾಲೂಕು ಅಧ್ಯಕ್ಷ ವೈ.ಎನ್. ಪಾಟೀಲ, ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ವೈ.ಬಿ. ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ, ತಾಪಂ ಅಧ್ಯಕ್ಷ ಎಂ.ಎಫ್. ಜಾವೂರ ಭಾಗವಹಿಸಲಿದ್ದಾರೆ.
ಇಂದು ಶರೀಫರ ನಾಟಕ
ನವಲಗುಂದ: ಇಲ್ಲಿಯ ಪಂಚಲಿಂಗೇಶ್ವರ ನಾಟ್ಯ ಸಂಘದಿಂದ ಕಲಾವಿದ ಪ್ರವೀಣ ಕುಮಾರ ಸಹಾಯಾರ್ಥ ಮಾ. 22ರಂದು ಹುರಕಡ್ಲಿ ಅಜ್ಜನವರ ಸಾಂಸ್ಕೃತಿಕ ಭವನದಲ್ಲಿ ಭಕ್ತಿ ಪ್ರಧಾನ ಸಂತ ಶಿಶುನಾಳ ಶರೀಫರ ಮಹಾತ್ಮೆ ನಾಟಕ ಪ್ರದರ್ಶನ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಹಾಗೂ ರಾತ್ರಿ 10.30ಕ್ಕೆ ಎರಡು ಪ್ರದರ್ಶನಗಳು ನಡೆಯಲಿವೆ. ಕಲಾವಿದ ಪ್ರವೀಣಕುಮಾರ ನವಲಗುಂದ ಶರೀಫರ ಪಾತ್ರದಲ್ಲಿ, ಶಿವಪುತ್ರಯ್ಯ ಬಂಡಿಭಟ್ಟನ ಪಾತ್ರದಲ್ಲಿ, ಭಾರತಿಬಾಯಿ ಹಜ್ಜೂಮಾನ ಪಾತ್ರದಲ್ಲಿ, ಸುಭಾಸ ಜಂತ್ಲಿ ದ್ಯಾಮವ್ವನ ಪಾತ್ರದಲ್ಲಿ, ಎಂ.ಎಸ್. ರಾಮಚಂದ್ರಪ್ಪ ಗೋವಿಂದ ಭಟ್ಟರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು ವಿಶೇಷ ಉಪನ್ಯಾಸ
ಧಾರವಾಡ: ರಂಗಾಯಣದಲ್ಲಿ ನಡೆಯುತ್ತಿರುವ ಅಭಿನಯ-ಅಭಿವ್ಯಕ್ತಿ ರಂಗಾಭಿನಯ ಶಿಬಿರದಲ್ಲಿ ಮಾ. 22ರಂದು ಸಂಜೆ 7.15ಕ್ಕೆ ಕಾವ್ಯದಲ್ಲಿ ನಾಟಕೀಯತೆ ವಿಶೇಷ ಉಪನ್ಯಾಸ ಹಾಗೂ ಸಂವಾದವನ್ನು ಪ್ರೊ.ಎಚ್.ಆರ್. ಅಮರನಾಥ ನಡೆಸಿಕೊಡಲಿದ್ದಾರೆ. ಕಲಾವಿದರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

