ಜನಪದ ಕ್ಷೇತ್ರ ಮಧ್ಯವರ್ತಿಗಳ ಕೈಯಲ್ಲಿ: ಪಿಚ್ಚಳ್ಳಿ ವಿಷಾದ
ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 22
ಜಾನಪದ ಕ್ಷೇತ್ರವು ಸಹ ಮಧ್ಯವರ್ತಿಗಳ ಕೈಯಲ್ಲಿ ಸಿಕ್ಕು ನಲುಗುತ್ತಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ಪಿಚ್ಚಳ್ಳಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನಪದ ಕಲಾವಿದರು ಕೆಳ ವರ್ಗದವರಾಗಿದ್ದರಿಂದ ಅವರ ಕಲೆಗೆ ಸಮಾಜದಲ್ಲಿ ಸೂಕ್ತ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಬೇಸರದಿಂದ ನುಡಿದರು.
ಕಲಾ ಭೂಮಿಕೆಯಲ್ಲಿ ಜನಪದರನ್ನು ಹಾಗೂ ವಿದ್ವಾಂಸರನ್ನು ಸಮಾಜ ಪ್ರತ್ಯೇಕಿಸಿ ನೋಡುತ್ತಿದೆ. ಇದಕ್ಕೆ ಸರ್ಕಾರವು ಹೊರತಾಗಿಲ್ಲ. ಜನಪರ ಕಾಳಜಿ ಹೊಂದಿ, ಪ್ರಾದೇಶಿಕ ಭಾಷೆಯ ಮೂಲಕ ಸಮಾಜದ ನಿಲುವು, ಬೇಡಿಕೆಯನ್ನು ರಂಜನೆಯೊಂದಿಗೆ ನೀಡುವ ಈ ಜನಪದ, ಇಂದು ಆಧುನಿಕರಣದ ಹೊಡೆತಕ್ಕೆ ಸಿಲುಕಿದೆ. ಆದ್ದರಿಂದ ನಾವು ಆಧುನಿಕರಣದ ಶೈಲಿಗಳನ್ನು ಬಳಸಿಕೊಂಡು ಜನಪದವನ್ನು ಜನರಿಗೆ ಇನ್ನಷ್ಟು ಹತ್ತಿರಕ್ಕೆ ಒಯ್ಯುವ ಪ್ರಯತ್ನ ಮಾಡಬೇಕಿದೆ ಎಂದರು.
ಜನಪದ ಕಲಾ ಪ್ರಕಾರಗಳು ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಕಾರಗಳಿವೆ ಹಾಗೂ ಅದಕ್ಕೆ ಸಂಬಂಧಿಸಿದ ಕಲಾವಿದರು ಎಷ್ಟು ಎಂಬ ಲೆಕ್ಕಾಚಾರ ಯಾವುದೊಂದು ವಿಶ್ವವಿದ್ಯಾಲಯ, ಜನಪದ ವಿಶ್ವವಿದ್ಯಾಲಯ, ಸಂಸ್ಕೃತಿ ಇಲಾಖೆಗಳಲ್ಲಿ ಕಾಣಸಿಗದಿರುವುದು ದುರಂತವೇ ಸರಿ.
ಅದಕ್ಕಾಗಿ ತಾವು ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಪ್ರತಿಯೊಂದು ಗ್ರಾಮದಲ್ಲಿರುವ ಕಲಾ ಪ್ರಕಾರಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಲಾವಿದರ ಪಟ್ಟಿಯನ್ನು ಮಾಡುವ ಕೆಲಸ ಮೊದಲು ಮಾಡುವುದಾಗಿ ಹೇಳಿದರು. ಲಕ್ಷ್ಣಣ ಬಕ್ಕಾಯಿ, ಸರ್ಕಾರಿ ಸೌಲಭ್ಯಗಳು ಕಲಾವಿದರಿಗೆ ದೊರಕುವಂತೆ ಅಕಾಡಮಿ ಗಮನ ಹರಿಸಬೇಕಿದೆ ಎಂದರು.
ರಾಜ್ಯೋತ್ಲವ ಪ್ರಶಸ್ತಿ ವಿಜೇತ ಪಾರ್ವೆತವ್ವ ಹೊಂಗಲ, ಮಹಿಳಾ ಕಲಾವಿದರಿಗೂ ಸೂಕ್ತ ಗೌರವ ಒದಗಿಸುವ ನಿಟ್ಟಿನಲ್ಲಿ ಅಕಾಡೆಮಿ ಹಾಗೂ ಸಂಘ ಸಂಸ್ಥೆಗಳು ಕಾರ್ಯಪ್ರವೃತರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘ ಸೇರಿದಂತೆ ಮತ್ತಿತರ ಸಂಘ-ಸಂಸ್ಥೆಗಳಿಂದ ಶ್ರೀನಿವಾಸ ಪಿಚ್ಚಳ್ಳಿ ಅವರನ್ನು ಸನ್ಮಾನಿಸಲಾಯಿತು.
ಡಾ.ಸೋಮಶೇಖರ ಇಮ್ರಾಪೂರ, ಶಂಕರ ಹಲಗತ್ತಿ, ಮೋಹನ ನಾಗಮ್ಮನವರ, ಪ್ರೊ. ಬಿ.ವಿ.ಗುಂಜೆಟ್ಟಿ, ಪ್ರೊ. ಶ್ರೀಶೈಲ ಹುದ್ದಾರ, ನಿಂಗಣ್ಣ ಕುಂಟಿ, ಪರಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

