ಧಾರವಾಡ

ಕೆಸಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು

Published On :

ನವಲಗುಂದ: ತಾಲೂಕಿನಲ್ಲಿರುವ ಕೆಸಿಸಿ ಬ್ಯಾಂಕ್ ಅಧಿಕಾರಿಗಳು ರೈತರ ಸಾಲದ ಹಣ ಮನ್ನಾ ಮಾಡುವಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಾಟನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿ.ಡಿ. ರಂಗಣ್ಣವರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
2012-13ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತರಿಗೆ ಸರ್ಕಾರ ರು. 25 ಸಾವಿರ ಸಾಲ ಮನ್ನಾ ಮಾಡಿದೆ. ಸಂಘದ 45 ರೈತರು ಇದನ್ನು ಪಡೆಯಲು ಅರ್ಹರಿದ್ದಾರೆ. ತಾಲೂಕಿನ ಕೆಸಿಸಿ ಬ್ಯಾಂಕ್‌ನಲ್ಲಿ 3 ತಿಂಗಳುಗಳ ಹಿಂದೆಯೇ ಸರ್ಕಾರದಿಂದ ಸಾಲಮನ್ನಾದ ಹಣ ಹಾಗೂ ಬೆಳೆ ವಿಮಾ ಹಣವೂ ಸಂದಾಯ ವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಆದಾಗ್ಯೂ, ಇದನ್ನು ರೈತರಿಗೆ ನೀಡಲು ಬ್ಯಾಂಕಿನ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.
ಇದಕ್ಕೆ ಸಹಕಾರಿ ಸಂಘದ ಬ್ಯಾಂಕ್ ಇನ್‌ಸ್ಪೆಕ್ಟರ್ ಆಗಿರುವ ಜಿ.ಜಿ.ಫಕ್ಕೀರಗೌಡ್ರ ಇವರೇ ಕಾರಣರಾಗಿದ್ದು, ಇದರಿಂದಾಗಿ ರೈತರಿಗೆ ಹಾಗೂ ಸಂಘದ ಆಡಳಿಕತ ಮತ್ತು ವ್ಯವಹಾರಕ್ಕೆ ತುಂಬಾ ತೊಂದರೆಯಾಗಿದೆ ಎಂದು ರಂಗಣ್ಣವರ ವಿವರಿಸಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ತಕ್ಷಣ ಇದರಲ್ಲಿ ಮಧ್ಯಪ್ರವೇಶಿ ರೈತರಿಗೆ ಹಾಗೂ ಸಂಘಕ್ಕೆ ಅನುಕೂಲ     ಮಾಡಿಕೊಡಬೇಕು ಎಂದೂ ಒತ್ತಾಯಿಸಿದ್ದಾರೆ.

ನಾಳೆ ಮತದಾನ ಜಾಗೃತಿ ಜಾಥಾ
ಹುಬ್ಬಳ್ಳಿ:  ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವೀಪ್ ಯೋಜನೆಯಲ್ಲಿ ಮಾ. 27ರಂದು ಸಂಜೆ 6 ಗಂಟೆಗೆ ಸ್ಟೇಶನ ರಸ್ತೆಯ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಇಂದಿರಾ ಗಾಜಿನ ಮನೆಯ ಆವರಣದವರೆಗೆ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ದೇಶಪಾಂಡೆ ಫೌಂಡೇಶನ್ ವಿದ್ಯಾನಗರ, ಹುಬ್ಬಳ್ಳಿ ಹಾಗೂ ನಗರ ಸ್ತ್ರೀಶಕ್ತಿ ಸಂಘದ ಸದಸ್ಯರೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಹಾಗೂ ದೇಶಪಾಂಡೆ ಫೌಂಡೇಶನ್ ಸ್ಥಳೀಯ ನಿರ್ದೇಶಕ ನವೀನ ಝಾ ಜಾಥಾಕ್ಕೆ ಚಾಲನೆ ನೀಡುವರು. ಜಾಥಾದಲ್ಲಿ ಮತದಾನದ ಕುರಿತು ವಿಶೇಷ ಧ್ವನಿವರ್ಧಕದ ಮೂಲಕ ಮತದಾನದಲ್ಲಿ ಭಾಗವಹಿಸುವ ಕುರಿತು, ಮತಯಂತ್ರ ಉಪಯೋಗದ ಕುರಿತು, ಮತದಾನ ಹಕ್ಕು ಎನ್ನುವ ಸಂದೇಶ ನುಡಿಸಲಾಗುವದು. ವಿಶೇಷ ಪ್ಲೇಕಾರ್ಡ್ ಮೂಲಕ ಸಂದೇಶ ಪ್ರಸಾರ ಮಾಡಲಾಗುವದು. ರಾಣಿ ಚನ್ನಮ್ಮ ವೃತ್ತದಲ್ಲಿ ಮಾ ನವ ಸರಪಳಿ ರಚಿಸಿ ಮೇಣಬತ್ತಿ ದೀಪದ ಮೂಲಕ ಗಮನ ಸಳೆಯಲಾಗುವುದು. ಜಾಥಾ ಇಂದಿರಾ ಗಾಜಿನ ಮನೆ ಆವರಣ ತಲುಪಿ ಕೊನೆಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.