ನವನಗರದಲ್ಲಿಂದು ಜೋಶಿ ಪ್ರಚಾರ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಮಾ. 28ರಂದು ನವನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಮತ ಯಾಚನೆ ಮಾಡಲಿದ್ದಾರೆ. ಅಂದು ಬೆಳಗ್ಗೆ 6.30ಕ್ಕೆ ನವನಗರದಲ್ಲಿ ವಾಯುವಿಹಾರಿಗಳಲ್ಲಿ ಮತಯಾಚನೆ, 8.30ಕ್ಕೆ ವಾರ್ಡ್ ನಂ.60ರ ಅಕ್ಕಸಾಲಿಗರ ಓಣಯಲ್ಲಿ ಪಾದಯಾತ್ರೆ, ವಾರ್ಡ್ ನಂ.63ರ ಬೆಳಗ್ಗೆ 10 ಗಂಟೆಗೆ ನೇಕಾರ ನಗರದ ಬಸವೇಶ್ವರ ಸರ್ಕಲ್ನಿಂದ ಪಾದಯಾತ್ರೆ, 11.30ಕ್ಕೆ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಇಂದಿರಾ ಗಾಜಿನ ಮನೆ ಹತ್ತಿರ ಇರುವ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು. ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಪಾಲ್ಗೊಳ್ಳುವರು. ಮಧ್ಯಾಹ್ನ್ನ 4ಕ್ಕೆ ರಾತ್ರಿ 9.30ರ ವರೆಗೆ ನವಲಗುಂದದಲ್ಲಿ ವಿವಿಧೆಡೆ ಪ್ರಚಾರ ಕೈಗೊಳ್ಳುವರು.
ಕಾಂಗ್ರೆಸ್ನ ಕುಲಕರ್ಣಿಯಿಂದ ಪ್ರಚಾರ
ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗುರುವಾರ ಮುಂಜಾನೆ ಕೆಲಗೇರಿಯ ಸಾಯಿ ಬಾಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಕೆಸಿಡಿ ಮೈದಾನದಲ್ಲಿ ವಾಯುವಿಹಾರಕ್ಕೆ ಬಂದಿದ್ದ ಮತದಾರರಲ್ಲಿ ಮತಯಾಚಿಸಿದರು.
ಅಲ್ಲಿಂದ ಮಾಜಿ ಸಚಿವ ಎಸ್.ಆರ್. ಮೋರೆ ಅವರ ನಿವಾಸದಲ್ಲಿ ಪಕ್ಷದ ಪ್ರಚಾರದ ರೂಪುರೇಷೆಗಳ ಬಗ್ಗೆ ಚರ್ಚಿಸಿ, ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಾ.28 ರಂದು ಪ್ರಚಾರ ಕೈಗೊಳ್ಳುವುದರ ಬಗ್ಗೆ ನಿರ್ಣಯ ತೆಗೆದುಕೊಂಡರು. ಸಮಯದ ಅಭಾವವಿದ್ದು ಕ್ಷೇತ್ರ ವಿಶಾಲವಿರುವುದರಿಂದ ಎಲ್ಲ ಮತದಾರರನ್ನು ಭೇಟಿಯಾಗುವುದು ಅಸಾಧ್ಯ ಆದ ಕಾರಣ ಕೆಲವು ನಾಯಕರು ತಮ್ಮ ಪ್ರಭಾವವಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಬೇಕೆಂದು ಹೇಳಿ, ವಿಧಾನಸಭಾ ಕ್ಷೇತ್ರ ಪ್ರಚಾರ್ಯ ಕಾರ್ಯವನ್ನು ಎಸ್.ಆರ್. ಮೋರೆ ಮತ್ತು ಇಸ್ಮಾಯಿಲ ತಮಾಟಗಾರ ಅವರಿಗೆ ವಹಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ ತಮಾಟಗಾರ, ಮಹೇಶ ಶೆಟ್ಟಿ, ಪಾಲಿಕೆ ಸದಸ್ಯ ದೀಪಕ ಚಿಂಚೊರೆ, ಆನಂದ ಕೇಶಗೊಂಡ, ಇಮ್ರಾನ ಕಳ್ಳಿಮನಿ, ವೆಂಕಟೇಶ ರಾಯ್ಕರ, ಕಿರಣ ಪಾಟಿಲ, ಎ.ಎಂ. ಖಾದ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

