ಹಣಕಾಸು ನಿರ್ವಹಣೆ ಅರಿವು ಅಗತ್ಯ
ಹುಬ್ಬಳ್ಳಿ: ಗ್ರಾಮೀಣ ಭಾಗದ ಜನರಿಗೆ ಹಣಕಾಸು ನಿರ್ವಹಣೆಯ ಕುರಿತು ಅರಿವು ನೀಡುವುದು ತುರ್ತು ಆಗತ್ಯವಾಗಿದೆ ಎಂದು ರಾಯನಾಳ ವಿರಕ್ತಮಠದ ಮಹಾಂತ ಸ್ವಾಮೀಜಿ ಹೇಳಿದರು.
ಗುರುವಾರ ರಾಯನಾಳದಲ್ಲಿ ಕ ರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಶಾಖೆ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವುದರಿಂದ ಬ್ಯಾಂಕುಗಳು ಬಹು ವಿಧದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಶಾಖಾ ವಿಸ್ತರಣೆಗೆ ಸಂಬಂಧಿಸಿ ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಮಹಾಪ್ರಬಂಧಕ ಸೂರ್ಯಕಾಂತ ಗಂಗಾ, ಜನಸಾಮಾನ್ಯರನ್ನ್ನು ತಲುಪುವ ನಿಟ್ಟಿನಲ್ಲಿ ಶಾಖಾ ವಿಸ್ತರಣೆಗೆ ಆದ್ಯತೆ ನೀಡಲಾಗಿದೆ. ಶಾಖೆಗಳು ಅಭಿವೃದ್ಧಿ ಇಲಾಖೆಗಳಂತೆ ಕೆಲಸ ಮಾಡುವುದರಿಂದ ಜನರ ಬದುಕು ಪರಿವರ್ತಿಸಲು ಸಾಧ್ಯ ಎಂದರು. ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎ. ನೀರಲಗಿ, ಜನಸಾಮಾನ್ಯರ ಜೀವನ ಮಟ್ಟ ಎತ್ತರಿಸುವಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಮುಖ್ಯ ಭೂಮಿಕೆ ವಹಿಸಿದೆ ಎಂದರು. ಬ್ಯಾಂಕಿನ ಯೋಜನಾ ವಿಭಾಗದ ಮುಖ್ಯ ಪ್ರಬಂಧಕ ಎಂ.ಎಂ. ಇನಾಮದಾರ ಮಾತನಾಡಿದರು. ಹಿರಿಯ ಪ್ರಬಂಧಕ ಪಿ.ಎ. ಕಟ್ಟಿ ಸ್ವಾಗತಿಸಿದರು. ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ನಿರೂಪಿಸಿದರು. ಎಸ್.ವಿ. ಹಳವೂರ ವಂದಿಸಿದರು.
ರೇಡಿಯಾಲಾಜಿಸ್ಟ್‌ಗಳ ಸಮಾವೇಶ ನಾಳೆ
ಹುಬ್ಬಳ್ಳಿ: ಪ್ರಥಮಬಾರಿಗೆ ಹುಬ್ಬಳ್ಳಿಯಲ್ಲಿ ಕರ್ನಾಟಕ ಶಾಖೆಯ ರೇಡಿಯಾಲಾಜಿಸ್ಟ್‌ಗಳ ಸಮಾವೇಶವನ್ನು ಮಾ. 29 ಮತ್ತು 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಐಆರ್‌ಐಎ ಕರ್ನಾಟಕ ಶಾಖೆಯ ಸಂಘಟನಾ ಅಧ್ಯಕ್ಷ ಡಾ.ವಿ.ಎನ್. ಗೋರೆ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದು 30ನೇ ಸಮಾವೇಶವಾಗಿದೆ. ಮಾ. 29 ಮತ್ತು 30ರಂದು ತಾಜ್ ಗೇಟವೇ ಹೋಟೆಲ್‌ನಲ್ಲಿ ಸಮಾವೇಶ ನಡೆಯಲಿದ್ದು, ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಿಂದ ಸೇರಿದಂತೆ ಒಟ್ಟು 400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಡಾ. ಸತೀಶ್ಚಂದ್ರ ಆಗಮಿಸುವರು. ಡಾ. ಉಮೇಶ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಡಾ. ಜಗದೀಶ ಸುತಗಟ್ಟಿ, ಡಾ. ಜಿ.ಸಿ. ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

