ತುರ್ತು ಪರಿಸ್ಥಿತಿ ನಿರ್ವಹಣೆಗೆ ಹೆಸ್ಕಾಂ ತಂಡ
ಹುಬ್ಬಳ್ಳಿ: ತುರ್ತು ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸುವುದಕ್ಕಾಗಿ ಹೆಸ್ಕಾಂ ಹುಬ್ಬಳ್ಳಿ ನಗರ ವಿಭಾಗ ಆಪತ್ತಕಾಲಿಕ ನಿರ್ವಾಹಣ ತಂಡ ರಚಿಸಿದೆ.
ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ಆಪತ್ತಕಾಲಿಕ ನಿರ್ವಹಣೆಗಳನ್ನ್ನು ಈ ತಂಡ ಕೈಗೊಳ್ಳಲಿದೆ. ಸಾರ್ವಜನಿಕರು ವಿದ್ಯುತ್ ತಂತಿ ರಸ್ತೆಯ ಮೇಲೆ ಕಟ್ಟಾಗಿ ಬಿದ್ದರೆ, ಮರದ ಕೊಂಬಿಗಳು ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ತಂತಿಗಳಿಗೆ ಸ್ಪರ್ಶಿಸುತ್ತಿದ್ದರೆ, ಪರಿವರ್ತಕಗಳಲ್ಲಿ ವಿದ್ಯುತ್ ಕಡಿಗಳು ಕಂಡುಬಂದರೆ, ವಿದ್ಯುತ್ ತಂತಿಗಳ ಮೇಲೆ ಮರಗಳು ಅಥವಾ ರಂಬೆಗಳು ಬಿದ್ದಿದರೆ, ವಿದ್ಯುತ್ ಕಂಬಗಳಲ್ಲಿ ಕರೆಂಟ್ ಶಾಕ್ ಹೊಡಿಯುತ್ತಿದ್ದರೆ ಮತ್ತು ಯಾವುದೇ ತರಹದ ವಿದ್ಯುತ್ ತೊಂದರೆಗಳು ಆಗಿದ್ದರೆ ನೇರವಾಗಿ ತಾಂತ್ರಿಕ ಸಹಾಯಕರಿಗೆ ದೂರು ನೀಡಬಹುದು.
ದೂರವಾಣಿ ಮೂಲಕ ಅಥವಾ ಸಂಬಂಧಪಟ್ಟ ದೂರು ನಿವಾರಣಾ ಕೇಂದ್ರ ಅಥವಾ ಕೇಂದ್ರೀಯ ಗ್ರಾಹಕ ಸೇವಾ ಕೇಂದ್ರ, ನವನಗರದ ಟೋಲ್ ಫ್ರೀ ಸಂಖ್ಯೆ ದೂರವಾಣೆಗೆ ದೂರು ಸಲ್ಲಿಸಿದ್ದಲ್ಲಿ ಹೆಸ್ಕಾಂ ತಂಡ ಕೂಡಲೇ ಸಾರ್ವಜನಿಕರ ವಿದ್ಯುತ್ ಸಮಸ್ಯೆಗಳನ್ನ್ನು ನಿವಾರಿಸಲು ಕಾರ್ಯಪ್ರವೃತ್ತವಾಗುತ್ತದೆ.
ವಾರ್ಡ್ ಸಂಖ್ಯೆ 28, 29, 30, 32, 33, 34, 46 ವ್ಯಾಪ್ತಿಯ ನಾಗರಿಕರು ವಿಶ್ವೇಶ್ವರನಗರದ ಸೆಕ್ಷನ್-1 ಕಚೇರಿಯ ವಿ.ಎಚ್. ಮಠದ ಅವರಿಗೆ (ಮೊಸಂ 94808 81040), ವಾರ್ಡ್ ಸಂಖ್ಯೆ 31, 47, 48 ವ್ಯಾಪ್ತಿಯ ಜನತೆ ಕೇಶ್ವಾಪುರದ ಸೆಕ್ಷನ್-2 ಕಚೇರಿಯ ವೀರೇಶ ಬಳ್ಳಾರಿ (94808 81048), ವಾರ್ಡ್ ಸಂಖ್ಯೆ 40, 41, 42, 43, 44, 53, 54, 60, 61, 62, 63, 64, 65 ವ್ಯಾಪ್ತಿಯ ನಾಗರಿಕರು ಚಾಣಕ್ಯಪುರಿ ಸೆಕ್ಷನ್-1 ಕಚೇರಿಯ ಶಿರಹಟ್ಟಿಮಠ (94808 81042), ವಾರ್ಡ್ ಸಂಖ್ಯೆ 49, 50, 51, 52, 56 ವ್ಯಾಪ್ತಿಯ ಸಾರ್ವಜನಿಕರು ಮಂಟೂರ ರಸ್ತೆಯ ಸೆಕ್ಷನ್-2ರ ವಿಜಯ ಪರಾಂಡೆ (94808 81041), ವಾರ್ಡ್ ಸಂಖ್ಯೆ 55, 57, 58, 59, 60, 66, 67 ವ್ಯಾಪ್ತಿಯ ನಾಗರಿಕರು ಬಂಕಾಪುರಚೌಕನ ಸೆಕ್ಷನ್-3ರ ಕಚೇರಿಯ ಸಿ.ಎಸ್. ರತ್ನಕಟ್ಟಿ (94808 81043), ವಾರ್ಡ್ ಸಂಖ್ಯೆ 35, 36, 37, 38, 45ರ ವ್ಯಾಪ್ತಿಯ ನಾಗರಿಕರು ಇಂಡಸ್ಟ್ರಿಯಲ್ ಎಸ್ಟೇಟ್ನ ಸೆಕ್ಷನ್-1ರ ಎಂ. ಹಳಸಂಗಿ (94808 81044), ವಾರ್ಡ್ ಸಂಖ್ಯೆ 23, 24, 25, 26, 27ರ ವ್ಯಾಪ್ತಿಯ ನಾಗರಿಕರು ನವನಗರ ಸೆಕ್ಷನ್-2ರ ಪವನ ವೈದ್ಯ (94808 81047), ವಾರ್ಡ್ ಸಂಖ್ಯೆ 39, 61, 62, 63, 64, 66ರ ವ್ಯಾಪ್ತಿಯ ನಾಗರಿಕರು ವಿದ್ಯುತ್ ನಗರ ಸೆಕ್ಷನ್-3ರ ಮಹೇಶ ಗೌಡರ (94808 81045)ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

