ವಿದ್ಯಾರ್ಥಿಗಳು ಅಪರಾಧ ಕೃತ್ಯದಿಂದ ದೂರವಿರಿ: ಅಣ್ಣಿಗೇರಿ
ಗದಗ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದು, ಇದರಿಂದ ದೂರವಿರುವಂತೆ ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ಅಣ್ಣಿಗೇರಿ ಹೇಳಿದರು.
ಅವರು ಈಚೆಗೆ ನಗರದ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಮಹಾವಿದ್ಯಾಲಯದ ಆದರ್ಶ ಉತ್ಸವ-2013 ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ವಿದ್ಯಾರ್ಥಿಗಳು ಉನ್ನತಿ ಹೊಂದಲು ಅನೇಕ ಅವಕಾಶಗಳಿದ್ದರೂ ಅವುಗಳ ಸದುಪಯೋಗ ಪಡೆದುಕೊಳ್ಳದೆ ವಿಫಲರಾಗುತ್ತಿದ್ದಾರೆ. ವಾಣಿಜ್ಯ ಪದವೀಧರರು, ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ರಂಗವಿರಲಿ ಅಲ್ಲಿ ಶ್ರದ್ಧೆ ಹೊಂದುವುದು ಅತ್ಯವಶ್ಯಕವಾಗಿದೆ ಎಂದರು. ನಗರಸಭೆ ಸದಸ್ಯ ಪೀರಸಾಬ್ ಕೌತಾಳ, ಪ್ರವೀಣ ಬನ್ಸಾಲಿ, ಅನಿಲ ಅಬ್ಬಿಗೇರಿ, ಸಂತೋಷ ಮೇಲಗಿರಿ, ಅಮರನಾಥ ಬೋಸ್ಲೆ, ವಿವಿಬ್ಲ್ಯೂ ಶರಣು ತಂತ್ರಿ, ಪ್ರಾ. ಎಂ.ಎಲ್. ಗುಳೇದಗುಡ್ಡ ಹಾಗೂ ಎಂ.ಕೆ. ಅಣ್ಣಿಗೇರಿ ದಂಪತಿಯನ್ನು ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ವಿ.ಆರ್. ಕುಷ್ಟಗಿ ವಹಿಸಿದ್ದರು. ವಿ.ಆರ್. ಮಾಳೆಕೊಪ್ಪಮಠ, ಪಿ.ಆರ್. ವಡವಿ, ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ, ಉಪ ಪ್ರಾಚಾರ್ಯ ಐ.ವಿ. ಬೆಳ್ಳಿಕಟ್ಟಿ ಹಾಜರಿದ್ದರು. ನಂದಾ, ಬಶೀರಾ ಮತ್ತು ಮಧುರಾ ನಿರೂಪಿಸಿದರು. ಶ್ವೇತಾ ಸೊಂಡೂರು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

